Gautam Gambhir: ಗೌತಮ್ ಗಂಭೀರ್ ರಾಜಕೀಯ ತೊರೆಯಲು ಅಸಲಿ ಕಾರಣ ಏನು ಗೊತ್ತಾ?
Gautam Gambhir: ತನ್ನ ನೇರ ನುಡಿಗಳಿಂದಲೇ ರಾಜಕೀಯವಲಯದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದ ಗಂಭೀರ್ ಅವರ ದಿಢೀರ್ ನಿವೃತ್ತಿ ನಿರ್ಧಾರ ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಹೀಗಾಗಿ ಗೌತಮ್ ಗಂಭೀರ್ ಏಕಾಏಕಿ ರಾಜಕೀಯದಿಂದ ನಿವೃತ್ತಿಯಾಗಲು ಕಾರಣವೇನು? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.
1 / 8
2024 ರ ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಬೆನ್ನಲ್ಲೇ ಬಿಜೆಪಿ ಪಕ್ಷಕ್ಕೆ ಹಿನ್ನಡೆಯುಂಟಾಗಿದೆ. ಮಾಜಿ ಕ್ರಿಕೆಟಿಗ ಹಾಗೂ ಪೂರ್ವ ದೆಹಲಿ ಕ್ಷೇತ್ರದ ಹಾಲಿ ಸಂಸದ ಗೌತಮ್ ಗಂಭೀರ್ ಇಂದು ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
2 / 8
ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿರುವ ಗಂಭೀರ್, ನನ್ನ ರಾಜಕೀಯ ಕರ್ತವ್ಯಗಳಿಂದ ನನ್ನನ್ನು ಬಿಡುಗಡೆ ಮಾಡುವಂತೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡ ಅವರಿಗೆ ಮನವಿ ಮಾಡಿದ್ದೇನೆ. ಇದರಿಂದ ನಾನು ಮುಂಬರುವ ದಿನಗಳಲ್ಲಿ ಕ್ರಿಕೆಟ್‌ನತ್ತ ಹೆಚ್ಚು ಗಮನಹರಿಸಲು ಸಹಾಯವಾಗುತ್ತದೆ. ಜನರ ಸೇವೆ ಮಾಡಲು ನನಗೆ ನೀಡಿದ ಅವಕಾಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದರು.
3 / 8
ಆದರೆ ತನ್ನ ನೇರ ನುಡಿಗಳಿಂದಲೇ ರಾಜಕೀಯವಲಯದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದ ಗಂಭೀರ್ ಅವರ ದಿಢೀರ್ ನಿವೃತ್ತಿ ನಿರ್ಧಾರ ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಹೀಗಾಗಿ ಗೌತಮ್ ಗಂಭೀರ್ ಏಕಾಏಕಿ ರಾಜಕೀಯದಿಂದ ನಿವೃತ್ತಿಯಾಗಲು ಕಾರಣವೇನು? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.
4 / 8
ಸದ್ಯ ಕೇಳಿಬಂದಿರುವ ಮಾಹಿತಿ ಪ್ರಕಾರ ಗೌತಮ್ ಗಂಭೀರ್ ರಾಜಕೀಯದಿಂದ ನಿವೃತ್ತಿ ಹೊಂದಿದ್ದು, ಮುಂಬರುವ ಲೋಕಸಭೆ ಚುನಾವಣೆ 2024ಕ್ಕೆ ಬಿಜೆಪಿಯಿಂದ ಟಿಕೆಟ್ ಸಿಗದಿರುವುದು ಕೂಡ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
5 / 8
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ 70ರಿಂದ 80 ಜನ ಹಾಲಿ ಸಂಸದರಿಗೆ ಮಾತ್ರ ಟಿಕೆಟ್ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಕಾರಣ ಉಳಿದ ಹಾಲಿ ಸಂಸದರ ಕೆಲಸ ತೃಪ್ತಿ ತಂದಿಲ್ಲದೆ ಇರುವುದು. ಅಂತಹವರ ಪಟ್ಟಿಯಲ್ಲಿ ಗಂಭೀರ್ ಸಹ ಇದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
6 / 8
ಅಲ್ಲದೆ ಕೋವಿಡ್ 2ನೇ ಅಲೆಯ ವೇಳೆ ಕೊರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಿದ್ದ ಔಷಧಿಗಳನ್ನು ಅಕ್ರಮವಾಗಿ ದಾಸ್ತಾನಿರಿಸಿ ವಿತರಿಸಿದ ಆರೋಪವು ಗೌತಮ್ ಗಂಭೀರ್ ಒಡೆತನದ ಫೌಂಡೇಶನ್ ವಿರುದ್ಧ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ಕೂಡ ನಡೆದು, ಗೌತಮ್ ಗಂಭೀರ್ ಫೌಂಡೇಶನ್ ಅಕ್ರಮವಾಗಿ ಔಷಧಿಗಳನ್ನು ಸಂಗ್ರಹಿಸಿದೆ ಎಂಬುದು ಸಾಭೀತಾಗಿತ್ತು. ಈ ಪ್ರಕರಣ ಚುನಾವಣೆ ವೇಳೆ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಬಹುದು ಎಂಬ ಆತಂಕದಲ್ಲಿ ಗಂಭಿರ್ಗೆ ಟಿಕೆಟ್ ನೀಡದಿರಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
7 / 8
ಹೀಗಾಗಿ ಟಿಕೆಟ್ ಸಿಗದೆ ಅವಮಾನಕ್ಕೀಡಾಗುವ ಬದಲು ತಾವೇ ರಾಜಕೀಯದಿಂದ ದೂರ ಸರಿಯವುದು ಒಳ್ಳೇಯದು ಎಂಬ ತೀರ್ಮಾನಕ್ಕೆ ಗಂಭೀರ್ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
8 / 8
ಇನ್ನು ಗಂಭೀರ್ ರಾಜಕೀಯ ತೊರೆಯುತ್ತಿರುವುದಕ್ಕೆ ವ್ಯಂಗ್ಯವಾಡಿರುವ ದೆಹಲಿ ಸರ್ಕಾರದ ಎಎಪಿ ಸಚಿವೆ ಅತಿಶಿ ಸಿಂಗ್, ‘ಗಂಭೀರ್ ಅವರ ಟ್ವೀಟ್ ಬಿಜೆಪಿ ಅವರನ್ನು ಲೋಕಸಭೆಗೆ ಅಭ್ಯರ್ಥಿಯನ್ನಾಗಿ ಮಾಡುತ್ತಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಗಂಭೀರ್ ಕಳೆದ 5 ವರ್ಷಗಳಿಂದ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಕಳೆದ ಐದು ವರ್ಷಗಳಲ್ಲಿ ತಮ್ಮ ಕ್ಷೇತ್ರದಲ್ಲಿ ತಮ್ಮ ಸಂಸದರು ಏನಾದರೂ ಕೆಲಸ ಮಾಡಿದ್ದಾರೆಯೇ ಎಂಬುದನ್ನು ಬಿಜೆಪಿ ಹೇಳಬೇಕು ಎಂದು ಅತಿಶಿ ಆಡಳಿತ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
Published On - 5:57 pm, Sat, 2 March 24