
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 54ನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಈ ವೇದಿಕೆ ಸಿದ್ಧವಾಗಿರುವುದು ದೂರದ ರಾಯ್ಪುರ್ನಲ್ಲಿ. ಅಂದರೆ ಆರ್‌ಸಿಬಿ ತಂಡವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬದಲು ಛತ್ತೀಸ್‌ಗಢದ ರಾಯ್ಪುರ್ನಲ್ಲಿರುವ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಆಡಲು ಸಜ್ಜಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಕೆಳಗಿನಂತಿದೆ... (PC: IPL)

ಐಪಿಎಲ್ 2025 ರಲ್ಲಿ ಆರ್‌ಸಿಬಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದ ಸಂಭ್ರಮದ ವೇಳೆ ನಡೆದ ಕಾಲ್ತುಳಿತದ ದುರಂತದ ನಂತರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಅನಿಶ್ಚಿತತೆ ಇತ್ತು. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಛತ್ತೀಸ್‌ಗಢ ಸರ್ಕಾರದೊಂದಿಗೆ ರಾಯ್‌ಪುರದಲ್ಲಿ ಪಂದ್ಯಗಳನ್ನು ಆಡಲು ಮೊದಲೇ ಒಪ್ಪಂದ ಮಾಡಿಕೊಂಡಿದ್ದರು. (PC: IPL)

ಆದರೆ ಇದಾದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿತು. ಅತ್ತ ಅದಾಗಲೇ ಛತ್ತೀಸ್‌ಗಢ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಕಾರಣ ಆರ್‌ಸಿಬಿ ಮ್ಯಾನೇಜ್ಮೆಂಟ್ ರಾಯ್ಪುರ್ನಲ್ಲಿ 2 ಪಂದ್ಯಗಳನ್ನಾಡಲು ನಿರ್ಧರಿಸಿದೆ. ಅದರಂತೆ ಆರ್‌ಸಿಬಿ ತನ್ನ ಎರಡು ತವರು ಪಂದ್ಯಗಳನ್ನು ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಆಡಲಿದೆ. (PC: IPL)

ಆರ್‌ಸಿಬಿ ತಂಡವು ತನ್ನ 7 ತವರು ಪಂದ್ಯಗಳಲ್ಲಿ ಈಗಾಗಲೇ ಬೆಂಗಳೂರಿನಲ್ಲಿ 5 ಮ್ಯಾಚ್ಗಳನ್ನಾಡಿದೆ. ಇನ್ನುಳಿದಿರುವ ಎರಡು ತವರು ಪಂದ್ಯಗಳನ್ನು ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯಗಳು ಮೇ 10 ಮತ್ತು ಮೇ 13 ರಂದು ನಡೆಯಲಿದೆ. (PC: IPL)

ಮೇ 10 ರಂದು ರಾಯಲ್ಪುರ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮೇ 13 ರಂದು ಇದೇ ಮೈದಾನದಲ್ಲಿ ಆರ್‌ಸಿಬಿ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ತಂವನ್ನು ಎದುರಿಸಲಿದೆ. ಈ ಪಂದ್ಯದೊಂದಿಗೆ ಆರ್‌ಸಿಬಿ ತಂಡದ ತವರು ಮ್ಯಾಚ್ಗಳು ಮುಗಿಯಲಿದೆ. (PC: IPL)