ಭಾರತ ಸೋತ ಮೈದಾನದಲ್ಲೇ ಮತ್ತೊಂದು ಪಂದ್ಯ: ಪ್ರೊವಿಡೆನ್ಸ್ ಸ್ಟೇಡಿಯಂ ಪಿಚ್ ಹೇಗಿದೆ?
Providence Stadium Pitch Report: ಈಗಾಗಲೇ ಗಯಾನದ ಪ್ರೊವಿಡೆನ್ಸ್ ಮೈದಾನದಲ್ಲಿ ಭಾರತ ಆಡಿರುವ ಕಾರಣ ಪಿಚ್ ವರ್ಮವನ್ನು ಅರತಿದೆ. ಹಿಂದಿನ ಪಂದ್ಯದಂತೆ, ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿನ ವಿಕೆಟ್ ನಿಧಾನಗತಿಯಿಂದ ಕೂಡಿದೆ. ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ.
1 / 8
ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೂರನೇ ಟಿ20 ಪಂದ್ಯ ಆಯೋಜಿಸಲಾಗಿದೆ. ದ್ವಿತೀಯ ಪಂದ್ಯ ನಡೆದಿದ್ದ ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲೇ ಈ ಪಂದ್ಯ ಕೂಡ ನಡೆಯಲಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ ಸರಣಿ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಇಂದಿನದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
2 / 8
ವೆಸ್ಟ್ ಇಂಡೀಸ್ ಸದ್ಯ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಹಾರ್ದಿಕ್ ಪಡೆ ಮಾನ ಉಳಿಸಿಕೊಳ್ಳಬೇಕಾದರೆ ಉಳಿದಿರುವ ಮೂರು ಪಂದ್ಯವನ್ನು ಗೆಲ್ಲಲೇ ಬೇಕಿದೆ. ಅತ್ತ ಕೆರಿಬಿಯನ್ ಪಡೆ ಇತಿಹಾಸ ಸೃಷ್ಟಿಸಲು ಕೇವಲ ಒಂದು ಪಂದ್ಯ ಗೆದ್ದರೆ ಸಾಕು.
3 / 8
ಈಗಾಗಲೇ ಈ ಮೈದಾನದಲ್ಲಿ ಭಾರತ ಆಡಿರುವ ಕಾರಣ ಪಿಚ್ ವರ್ಮವನ್ನು ಅರತಿದೆ. ಹಿಂದಿನ ಪಂದ್ಯದಂತೆ, ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿನ ವಿಕೆಟ್ ನಿಧಾನಗತಿಯಿಂದ ಕೂಡಿದೆ. ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ.
4 / 8
ಈ ಪಿಚ್ನಲ್ಲಿ ದೊಡ್ಡ ರನ್‌ಗಳನ್ನು ಹೊಡೆಯುವುದು ಸುಲಭದ ಕೆಲಸವಲ್ಲ. ಆರಂಭಿಕ ಓವರ್‌ಗಳಲ್ಲಿ ಇಲ್ಲಿನ ಪಿಚ್ ವೇಗಿಗಳು ಸ್ವಲ್ಪ ಸಹಾಯವನ್ನು ಮಾಡಲಿದೆ. ಇಲ್ಲಿ ಸರಾಸರಿ ಒಟ್ಟು 122 ರನ್ ಆಗಿರುವುದರಿಂದ 160 ಪ್ಲಸ್ ರನ್ ಕಲೆಹಾಕಿದರೆ ಎದುರಾಳಿಗೆ ಕಠಿಣ ಟಾರ್ಗೆಟ್ ಎನ್ನಬಹುದು.
5 / 8
ಜಾರ್ಜ್‌ಟೌನ್‌ನಲ್ಲಿನ ಹವಾಮಾನವು ಆಗಸ್ಟ್ 8 ರಂದು ಕ್ಲೀಯರ್ ಆಗಿದೆ. ತಾಪಮಾನವು 26 ರಿಂದ 40 ಡಿಗ್ರಿ ಸೆಲ್ಸಿಯಸ್‌ನ ನಡುವೆ ಇರುತ್ತದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿಲ್ಲ. ಪಂದ್ಯ ನಡೆಯುವ ಸಮಯದಲ್ಲಿ ಗಾಳಿಯ ರಭಸವು ಸುಮಾರು 43 ಕಿಮೀ/ಗಂಟೆಯಷ್ಟಿದ್ದರೆ ತೇವಾಂಶವು ಸುಮಾರು 30 ಪ್ರತಿಶತದಷ್ಟು ಇರುತ್ತದೆ.
6 / 8
ಟೀಮ್ ಇಂಡಿಯಾಕ್ಕೆ ಇಂದಿನ ಪಂದ್ಯ ಬಹುಮುಖ್ಯವಾಗಿದೆ. ಯಾಕೆಂದರೆ ಮೂರನೇ ಟಿ20 ಸೋತರೆ ಹಾರ್ದಿಕ್ ಪಡೆ ಸರಣಿ ಕಳೆದುಕೊಳ್ಳಲಿದೆ. ಹೀಗಾದಲ್ಲಿ 17 ವರ್ಷಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಮೊದಲ ಸರಣಿ ಸೋತಂತಾಗುತ್ತದೆ.
7 / 8
ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ ಎಂದೇ ಹೇಳಬಹುದು. ಯಾಕೆಂದರೆ ಹಿಂದಿನ ಎರಡೂ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಹೀಗಾಗಿ ಶುಭ್ಮನ್ ಗಿಲ್ ಅವರನ್ನು ಕೈಬಿಟ್ಟು ಯಶಸ್ವಿ ಜೈಸ್ವಾಲ್ಗೆ ಅವಕಾಶ ಸಿಗುವ ಸಂಭವವಿದೆ.
8 / 8
ಬ್ಯಾಟಿಂಗ್ನಲ್ಲಿ ಹೆಚ್ಚಿನ ಆಯ್ಕೆ ಇಲ್ಲದ ಕಾರಣ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಎಡವುತ್ತಿದ್ದರೂ ಆಡಿಸಲೇ ಬೇಕಿದೆ. ಹಾರ್ದಿಕ್ ಪಾಂಡ್ಯ ಕಡೆಯಿಂದ ನಾಯಕನ ಆಟ ಬರುತ್ತಿಲ್ಲ. ಕೇವಲ ಎರಡೇ ಎರಡು ಅಂತರರಾಷ್ಟ್ರೀಯ ಪಂದ್ಯವನ್ನಾಡಿರುವ ತಿಲಕ್ ವರ್ಮಾ ಮಾತ್ರ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ.