ಭಾರತ ಮಹಿಳಾ ಕ್ರಿಕೆಟ್ ತಂಡ
ಪೂಜಾ ವಸ್ತ್ರಾಕರ್ - ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಪೂಜಾ ಅಬ್ಬರಿಸಿದರು. ಭಾರತ ತಂಡ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಪೂಜಾ ಬಿರುಸಿನ ಬ್ಯಾಟಿಂಗ್ ನಡೆಸಿದರು. ಅವರು 59 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ 67 ರನ್ ಗಳಿಸಿದರು. ಈ ಇನ್ನಿಂಗ್ಸ್ ಆಧಾರದ ಮೇಲೆ ಭಾರತ ತಂಡ 244 ರನ್ ಗಳಿಸಿತು. ಪೂಜಾ ಅವರು ಸ್ನೇಹ್ ರಾಣಾ ಅವರೊಂದಿಗೆ ಏಳನೇ ವಿಕೆಟ್‌ಗೆ 122 ರನ್‌ಗಳ ಪ್ರಮುಖ ಜೊತೆಯಾಟವನ್ನು ಮಾಡಿದರು. ಪೂಜಾ ರನ್ ಗಳಿಸಿದ್ದು ಮಾತ್ರವಲ್ಲದೆ ವೇಗವಾಗಿ ರನ್ ಗಳಿಸಿದರು. ಇದು ಭಾರತಕ್ಕೆ ಬಹಳ ಮುಖ್ಯವಾಗಿತ್ತು.
ಮಹಿಳಾ ಕ್ರಿಕೆಟ್‌ನ ದಿಗ್ಗಜ ಬೌಲರ್ ಜೂಲನ್ ಗೋಸ್ವಾಮಿ ಮೈದಾನಕ್ಕೆ ಬಂದಾಗಲೆಲ್ಲಾ ತಮ್ಮ ಹೆಸರಿನಲ್ಲಿ ಕೆಲವು ದಾಖಲೆಗಳನ್ನು ಮಾಡುತ್ತಾರೆ. ಮಹಿಳಾ ವಿಶ್ವಕಪ್‌ನ 15ನೇ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ ಇದೇ ರೀತಿಯ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜೂಲನ್ ಟ್ಯಾಮಿ ಬ್ಯೂಮಾಂಟ್ ಅವರನ್ನು ಔಟ್ ಮಾಡಿದ ತಕ್ಷಣ, ಅವರು ಏಕದಿನ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಪೂರೈಸಿದರು.
Published On - 1:50 pm, Sun, 6 March 22