Women’s Asia Cup 2024: 12 ಬೌಂಡರಿ, 81 ರನ್; ಶಫಾಲಿ ಆಟಕ್ಕೆ ದಂಗಾದ ನೇಪಾಳ

|

Updated on: Jul 23, 2024 | 9:28 PM

Women’s Asia Cup 2024: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 48 ಎಸೆತಗಳನ್ನು ಎದುರಿಸಿದ ಶಫಾಲಿ 81 ರನ್‌ಗಳ ಇನಿಂಗ್ಸ್‌ ಆಡಿದರು. ಈ ವೇಳೆ ಅವರ ಬ್ಯಾಟ್‌ನಿಂದ 12 ಬೌಂಡರಿ ಹಾಗೂ 1 ಸಿಕ್ಸರ್‌ಗಳು ಸಿಡಿದವು.

1 / 6
ಶ್ರೀಲಂಕಾದ ರಂಗಿ ದಂಬುಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ 2024 ರ 10 ನೇ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಟೀಂ ಇಂಡಿಯಾ, ನೇಪಾಳ ವಿರುದ್ಧ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡದ ಯುವ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ.

2 / 6
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 48 ಎಸೆತಗಳನ್ನು ಎದುರಿಸಿದ ಶಫಾಲಿ 81 ರನ್‌ಗಳ ಇನಿಂಗ್ಸ್‌ ಆಡಿದರು. ಈ ವೇಳೆ ಅವರ ಬ್ಯಾಟ್‌ನಿಂದ 12 ಬೌಂಡರಿ ಹಾಗೂ 1 ಸಿಕ್ಸರ್‌ಗಳು ಸಿಡಿದವು.

3 / 6
ಇವರ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ದಯಾಳನ್ ಹೇಮಲತಾ ಕೂಡ 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 47 ರನ್ ಬಾರಿಸಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಜೆಮಿಮಾ 15 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 28 ರನ್ ಬಾರಿಸಿದರು. ಇವರ ಇನಿಂಗ್ಸ್‌ನ ಆಧಾರದ ಮೇಲೆ ಟೀಂ ಇಂಡಿಯಾ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 178 ರನ್ ಗಳಿಸಲಷ್ಟೇ ಶಕ್ತವಾಯಿತು.

4 / 6
ಸಾಮಾನ್ಯವಾಗಿ ಟೀಂ ಇಂಡಿಯಾ ಪರ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಇನ್ನಿಂಗ್ಸ್ ಆರಂಭಿಸುತ್ತಾರೆ. ಆದರೆ ಈ ಪಂದ್ಯದಲ್ಲಿ ಸ್ಮೃತಿ ಓಪನಿಂಗ್ ಮಾಡಲಿಲ್ಲ, ಅಷ್ಟೇ ಅಲ್ಲ ಬ್ಯಾಟಿಂಗ್‌ಗೆ ಕೂಡ ಇಳಿಯಲಿಲ್ಲ. ವಾಸ್ತವವಾಗಿ, ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬದಲಿಗೆ ಸ್ಮೃತಿ ಮಂಧಾನ ತಂಡದ ನಾಯಕಿಯಾಗಿದ್ದಾರೆ. ಹರ್ಮನ್‌ಪ್ರೀತ್ ಕೌರ್‌ಗೆ ವಿಶ್ರಾಂತಿ ನೀಡಲಾಗಿದೆ.

5 / 6
ಭಾರತ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ (ನಾಯಕಿ), ದಯಾಳನ್ ಹೇಮಲತಾ, ರಿಚಾ ಘೋಷ್ (ವಿಕೆಟ್ ಕೀಪರ್), ಜೆಮಿಮಾ ರಾಡ್ರಿಗಸ್, ಸಜೀವನ್ ಸಜನಾ (ಹರ್ಮನ್‌ಪ್ರೀತ್ ಕೌರ್ ಬದಲು), ದೀಪ್ತಿ ಶರ್ಮಾ, ರಾಧಾ ಯಾದವ್, ತನುಜಾ ಕನ್ವರ್, ರೇಣುಕಾ ಸಿಂಗ್, ಅರುಂಧತಿ ರೆಡ್ಡಿ (ಪೂಜಾ ವಸ್ತ್ರಾಕರ್ ಬದಲು) .

6 / 6
ನೇಪಾಳ ತಂಡ: ಸಮ್ಜನಾ ಖಡ್ಕಾ, ಸೀತಾ ಮಗರ್, ಕಬಿತಾ ಕುನ್ವರ್, ಇಂದು ಬರ್ಮಾ (ನಾಯಕಿ), ಡಾಲಿ ಭಟ್ಟ (ರೋಮಾ ಥಾಪಾ ಬದಲು), ರುಬಿನಾ ಛೆಟ್ರಿ, ಪೂಜಾ ಮಹತೋ, ಕಬಿತಾ ಜೋಷಿ, ಕಾಜಲ್ ಶ್ರೇಷ್ಠಾ (ವಿಕೆಟ್ ಕೀಪರ್), ಬಿಂದು ರಾವಲ್, ಸಬ್ನಮ್ ರೈ (ಕೃತಿಕಾ ಮರಸಿನಿ ಬದಲು) .

Published On - 9:27 pm, Tue, 23 July 24