World Cup 2023: ಭಾರತ- ಪಾಕ್ ವಿಶ್ವಕಪ್ ಫೈಟ್; ಹೋಟೆಲ್​ಗಳು ಭರ್ತಿ, ಆಸ್ಪತ್ರೆಗಳತ್ತ ಮುಖ ಮಾಡಿದ ಫ್ಯಾನ್ಸ್!

Updated on: Jul 22, 2023 | 7:55 AM

India vs Pakistan World Cup 2023 Clash: ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

1 / 9
2023ರ ಏಕದಿನ ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹತ್ತು ತಂಡಗಳು ಇದಕ್ಕಾಗಿ ಸಿದ್ಧತೆ ಆರಂಭಿಸಿವೆ. ಭಾರತ ಈ ವರ್ಷದ ವಿಶ್ವಕಪ್‌ನ ಆತಿಥ್ಯ ವಹಿಸಿದ್ದು, ಇದಕ್ಕಾಗಿ ಬಿಸಿಸಿಐ ಭರ್ಜರಿ ತಯಾರಿ ಕೂಡ ನಡೆಸಿದೆ.ಈ ನಡುವೆ ಅಹಮದಾಬಾದ್​ನಲ್ಲಿ ನಡೆಯಲ್ಲಿರುವ ಭಾರತ- ಪಾಕ್ ಫೈಟ್ ನೋಡಲು ಕ್ರಿಕೆಟ್ ಅಭಿಮಾನಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

2023ರ ಏಕದಿನ ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹತ್ತು ತಂಡಗಳು ಇದಕ್ಕಾಗಿ ಸಿದ್ಧತೆ ಆರಂಭಿಸಿವೆ. ಭಾರತ ಈ ವರ್ಷದ ವಿಶ್ವಕಪ್‌ನ ಆತಿಥ್ಯ ವಹಿಸಿದ್ದು, ಇದಕ್ಕಾಗಿ ಬಿಸಿಸಿಐ ಭರ್ಜರಿ ತಯಾರಿ ಕೂಡ ನಡೆಸಿದೆ.ಈ ನಡುವೆ ಅಹಮದಾಬಾದ್​ನಲ್ಲಿ ನಡೆಯಲ್ಲಿರುವ ಭಾರತ- ಪಾಕ್ ಫೈಟ್ ನೋಡಲು ಕ್ರಿಕೆಟ್ ಅಭಿಮಾನಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

2 / 9

ಈಗಾಗಲೇ ನಿರ್ಧಾರವಾಗಿರುವಂತೆ ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿವೆ. ಆದ್ದರಿಂದ ಪ್ರತಿ ತಂಡವು ತನ್ನ ಗುಂಪಿನ ಇತರ ತಂಡದೆದುರು ಪರಸ್ಪರ ಪಂದ್ಯವನ್ನಾಡುತ್ತದೆ. ವಾಡಿಕೆಯಂತೆ ಈ ಬಾರಿಯೂ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

3 / 9

ಭಾರತ- ಪಾಕಿಸ್ತಾನ ನಡುವಿನ ಹದಗೆಟ್ಟ ಸಂಬಂಧದಿಂದಾಗಿ ಉಭಯ ದೇಶಗಳ ಕ್ರಿಕೆಟ್ ತಂಡಗಳು ಕೇವಲ ಐಸಿಸಿ ಈವೆಂಟ್​ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಹೀಗಾಗಿ ಉಭಯ ದೇಶಗಳ ಈ ಕಾಳಗವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುತ್ತಾರೆ.

4 / 9

ಇದನ್ನು ಆದಾಯದ ರೂಪವಾಗಿ ಬಳಸಿಕೊಳ್ಳುವ ಐಸಿಸಿ ಹಾಗೂ ಬಿಸಿಸಿಐ ಈ ಒಂದು ಪಂದ್ಯದಿಂದಲೇ ಸಾಕಷ್ಟು ಆದಾಯ ಗಳಿಸುತ್ತವೆ. ಇದೀಗ ವಿಶ್ವಕಪ್​ನಲ್ಲಿ ಈ ಎರಡೂ ತಂಡಗಳ ಮುಖಾಮುಖಿಗಾಗಿ ಬಿಸಿಸಿಐ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾದ ನರೇಂದ್ರ ಮೋದಿ ಮೈದಾನವನ್ನು ಸಜ್ಜುಗೊಳಿಸಿದೆ.

5 / 9

ಅಕ್ಟೋಬರ್ 15 ರಂದು ನಡೆಯಲ್ಲಿರುವ ಈ ಕ್ರಿಕೆಟ್ ಕಾಳಗದ ಕೂಗು ಈಗಾಗಲೇ ಜೋರಾಗಿದೆ. ಅಹಮದಾಬಾದ್​ನಲ್ಲಿ ಈ ಪಂದ್ಯ ನಡೆಯುವುದರಿಂದ ಪಂದ್ಯದ ದಿನಕ್ಕೆ ಇಡೀ ನಗರದ ಹೋಟೆಲ್​ಗಳು ಈಗಾಗಲೇ ಭರ್ತಿಗೊಂಡಿವೆ. ಅಲ್ಲದೆ ಪಂದ್ಯದ ದಿನದಂದು ಹೋಟೆಲ್​ಗಳ ದರವನ್ನು ಸಹ ಗಗನಕ್ಕೆ ಏರಿಸಲಾಗಿದೆ.

6 / 9

ಆದರೂ ಕ್ರಿಕೆಟ್ ಅಭಿಮಾನಿಗಳಿಗೆ ಅಹಮದಾಬಾದ್​ನಲ್ಲಿ ಹೋಟೆಲ್​ಗಳ ರೂಂಗಳು ಸಿಗುತ್ತಿಲ್ಲ. ಹೀಗಾಗಿ ಪಂದ್ಯ ವೀಕ್ಷಣೆಗಾಗಿ ನಾನಾ ಕಸರತ್ತು ಮಾಡುತ್ತಿರುವ ಫ್ಯಾನ್ಸ್, ಇದೀಗ ಹೋಟೆಲ್​ಗಳ ಬದಲು ಆಸ್ಪತ್ರೆ ಬೆಡ್​ಗಳತ್ತ ಮುಖ ಮಾಡಿದ್ದಾರೆ ಎಂದು ವರದಿಯಾಗಿದೆ.

7 / 9

ವಾಸ್ತವವಾಗಿ ಪಂದ್ಯದ ದಿನದಂದು ಅಹಮದಾಬಾದ್‌ನ ಹೋಟೆಲ್‌ಗಳ ದಿನದ ಬಾಡಿಗೆ ಲಕ್ಷ ಮೀರಿದೆ. ಅಷ್ಟು ಹಣ ನೀಡುತ್ತೇವೆ ಎಂದರು ರೂಂಗಳು ಸಿಗುತ್ತಿಲ್ಲ. ಹೀಗಾಗಿ ವಿಭಿನ್ನ ಪ್ಲಾನ್ ಮಾಡಿರುವ ಫ್ಯಾನ್ಸ್, ಪಂದ್ಯದ ದಿನದಂದು ಆಸ್ಪತ್ರೆಗಳ ಬೆಡ್ ಬುಕ್ ಮಾಡಲು ಮುಂದಾಗಿದ್ದಾರೆ.

8 / 9

ಪಂದ್ಯದ ದಿನದಂದು ಅಹಮದಾಬಾದ್​ನಲ್ಲಿ ಹೋಟೆಲ್​ಗಳ ಬೆಲೆ ದಿನವೊಂದಕ್ಕೆ ಲಕ್ಷ ದಾಟಿದೆ. ಆದರೆ ಆಸ್ಪತ್ರೆಯಲ್ಲಿ ಒಂದು ಹಾಸಿಗೆಗೆ 3ರಿಂದ 25 ಸಾವಿರ ರೂ. ಬಿಲ್ ಮಾಡಲಾಗುತ್ತಿದೆ. ಈ ದರ ಹೋಟೆಲ್‌ಗೆ ಹೋಲಿಸಿದರೆ ಅರ್ಧಕ್ಕಿಂತ ತೀರ ಕಡಿಮೆ. ಹಾಗಾಗಿ ಕ್ರೀಡಾ ಪ್ರೇಮಿಗಳು ಪಂದ್ಯ ವೀಕ್ಷಿಸಲು ಈ ದಾರಿ ಹಿಡಿದಿದ್ದಾರೆ.

9 / 9

ಮಾಧ್ಯಮ ವರದಿಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕಾಗಿ ಎಲ್ಲಾ ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಹೀಗಾಗಿ ಕ್ರೀಡಾ ಪ್ರೇಮಿಗಳು ಇದೀಗ ಆಸ್ಪತ್ರೆಗಳಲ್ಲಿ ಬೆಡ್ ಬುಕ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮನಿ ಕಂಟ್ರೋಲ್ ಈ ಬಗ್ಗೆ ವರದಿ ಮಾಡಿದ್ದು, ಪೂರ್ಣ ದೇಹ ತಪಾಸಣೆಗಾಗಿ ಜನರು ಪಂದ್ಯದ ದಿನದಂದು ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸುತ್ತಿದ್ದಾರೆ ಎಂದು ಅಹಮದಾಬಾದ್‌ನ ವೈದ್ಯರು ಹೇಳಿದ್ದಾರೆ.

Loading...
Unable to load recommendations.
Follow Us