ODI World Cup 2023: ಮೋದಿ ಮೈದಾನದಲ್ಲಿ ಭಾರತ- ಪಾಕ್ ಫೈಟ್; ಲಕ್ಷ ದಾಟಿದ ಹೋಟೆಲ್ ರೂಂ ದರ..!
India vs Pakistan World Cup 2023 match: ಭಾರತ- ಪಾಕ್ ಪಂದ್ಯಕ್ಕೆ ಆಥಿತ್ಯವಹಿಸಿರುವ ಅಹಮದಾಬಾದ್‌ನಲ್ಲಿ ಹೋಟೆಲ್ ರೂಮ್ಗಳ ಬೆಲೆಗಳು ಗಗನಕ್ಕೇರಿವೆ. ಅಲ್ಲದೆ ಅನೇಕ ಹೋಟೆಲ್‌ಗಳು ರೂಮ್ ಬೆಲೆಯನ್ನು ಹತ್ತು ಪಟ್ಟು ಹೆಚ್ಚಿಸಿವೆ ಎಂದು ವರದಿಯಾಗಿದೆ.
1 / 5
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿಯನ್ನು ಜೂನ್ 27 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಏಕದಿನ ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ.
2 / 5
ಬಹಳ ವರ್ಷಗಳ ಬಳಿಕ ಪಾಕ್ ತಂಡ ಭಾರತದಲ್ಲಿ ಪಂದ್ಯವನ್ನಾಡುತ್ತಿದೆ. ಅದು ವಿಶ್ವಕಪ್ನಲ್ಲಿ ಭಾರತ- ಪಾಕ್ ಹೈವೋಲ್ಟೇಜ್ ಪಂದ್ಯವನ್ನು ನೋಡುವ ಮಜವೇ ಬೇರೆ. ಹೀಗಾಗಿ ಭಾರತ- ಪಾಕ್ ಪಂದ್ಯಕ್ಕೆ ಆಥಿತ್ಯವಹಿಸಿರುವ ಅಹಮದಾಬಾದ್‌ನಲ್ಲಿ ಹೋಟೆಲ್ ರೂಮ್ಗಳ ಬೆಲೆಗಳು ಗಗನಕ್ಕೇರಿವೆ. ಅಲ್ಲದೆ ಅನೇಕ ಹೋಟೆಲ್‌ಗಳು ರೂಮ್ ಬೆಲೆಯನ್ನು ಹತ್ತು ಪಟ್ಟು ಹೆಚ್ಚಿಸಿವೆ ಎಂದು ವರದಿಯಾಗಿದೆ.
3 / 5
ವಿವಿಧ ಹೋಟೆಲ್ ಬುಕಿಂಗ್ ವೆಬ್‌ಸೈಟ್‌ಗಳಲ್ಲಿ ಕಂಡುಬಂದ ಹೋಟೆಲ್ ರೂಮ್ಗಳ ಬೆಲೆಯ ಪ್ರಕಾರ, ಅಕ್ಟೋಬರ್ 15 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲ್ಲಿದೆ. ಹೀಗಾಗಿ ಆ ದಿನದಂದು ಹೋಟೆಲ್ ರೂಮ್ಗಳಿಗೆ ಭಾರಿ ಬೇಡಿಕೆ ಬಂದಿದೆ. ಹೀಗಾಗಿ ಹೋಟೆಲ್ ರೂಂ ದರವನ್ನು ಹತ್ತು ಪಟ್ಟು ಹೆಚ್ಚಿಸಲಾಗಿದ್ದು, ಹಲವು ಹೋಟೆಲ್ ಗಳು ಆ ದಿನಕ್ಕೆ ಒಂದು ಲಕ್ಷ ರೂಪಾಯಿ ದರ ನಿಗದಿಪಡಿಸಿವೆ. ಅನೇಕ ಹೋಟೆಲ್ ಕೊಠಡಿಗಳು ಈಗಾಗಲೇ ಬುಕ್ ಆಗಿವೆ.
4 / 5
ಸಾಮಾನ್ಯವಾಗಿ ಐಷಾರಾಮಿ ಹೋಟೆಲ್ಗಳಲ್ಲಿ ಒಂದು ದಿನದ ಬಾಡಿಗೆ ಐದರಿಂದ ಎಂಟು ಸಾವಿರ ರೂಪಾಯಿ ಇರುತ್ತದೆ. ಆದರೆ ಅಕ್ಟೋಬರ್ 15ರಂದು ಈ ಹೋಟೆಲ್ಗಳ ದರವನ್ನು 40 ಸಾವಿರದಿಂದ ಒಂದು ಲಕ್ಷ ರೂಪಾಯಿಗೆ ಏರಿಸಲಾಗಿದೆ. Booking.com ಪ್ರಕಾರ, ITC ವೆಲ್‌ಕಮ್ ಹೋಟೆಲ್ ದರವು ಜುಲೈ 2 ರಂದು ದಿನಕ್ಕೆ 5,699 ರೂಪಾಯಿಗಳಿದ್ದರೆ, ಅದೇ ಹೋಟೆಲ್ ರೂಮ್ನ ಬೆಲೆ ಅಕ್ಟೋಬರ್ 15 ರಂದು 71,999 ರೂಪಾಯಿಗಳಾಗಿದೆ.
5 / 5
ನವೋದಯ ಅಹಮದಾಬಾದ್ ಹೋಟೆಲ್ ಬಾಡಿಗೆ ಪ್ರಸ್ತುತ ದಿನಕ್ಕೆ ಎಂಟು ಸಾವಿರ ರೂಪಾಯಿಗಳಾಗಿದ್ದು, ಅಕ್ಟೋಬರ್ 15 ಕ್ಕೆ 90679 ರೂಪಾಯಿಗಳನ್ನು ತೋರಿಸುತ್ತಿದೆ. ಅದೇ ರೀತಿ ಎಸ್ ಜಿ ಹೆದ್ದಾರಿಯಲ್ಲಿರುವ ಪ್ರೈಡ್ ಪ್ಲಾಜಾ ಹೋಟೆಲ್ನ ಆ ದಿನದ ಬಾಡಿಗೆಯನ್ನು 36180 ರೂ.ಗೆ ನಿಗದಿಪಡಿಸಲಾಗಿದೆ. ಹೀಗೆ ಹಲವು ಹೋಟೆಲ್‌ಗಳು ಅಕ್ಟೋಬರ್ 15 ಕ್ಕೆ ತಮ್ಮ ರೂಮ್ಗಳ ಬೆಲೆಯನ್ನು ಸಾಕಷ್ಟು ಏರಿಸಿವೆ ಎಂದು ವರದಿಯಾಗಿದೆ.