5 ಶತಕ, 5 ಅರ್ಧ ಶತಕ, 1280 ರನ್! ವಿಶ್ವಕಪ್​ನಲ್ಲಿ ಒಂದೇ ದಿನ ಸೃಷ್ಟಿಯಾದ ದಾಖಲೆಗಳೆಷ್ಟು ಗೊತ್ತಾ?

Updated on: Oct 11, 2023 | 11:46 AM

ICC World Cup 2023: ಏಕದಿನ ವಿಶ್ವಕಪ್​ನಲ್ಲಿ ಮಂಗಳವಾರದಂದು ನಡೆದ ಡಬಲ್ ಹೆಡರ್ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯಾಗಿದೆ. ದಿನದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್‌ ಮುಖಾಮುಖಿಯಾಗಿದ್ದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು.

1 / 12
ಏಕದಿನ ವಿಶ್ವಕಪ್​ನಲ್ಲಿ ಮಂಗಳವಾರದಂದು ನಡೆದ ಡಬಲ್ ಹೆಡರ್ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯಾಗಿದೆ. ದಿನದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್‌ ಮುಖಾಮುಖಿಯಾಗಿದ್ದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು.

ಏಕದಿನ ವಿಶ್ವಕಪ್​ನಲ್ಲಿ ಮಂಗಳವಾರದಂದು ನಡೆದ ಡಬಲ್ ಹೆಡರ್ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯಾಗಿದೆ. ದಿನದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್‌ ಮುಖಾಮುಖಿಯಾಗಿದ್ದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು.

2 / 12

ಒಂದೇ ದಿನ ನಡೆದ ಎರಡು ಪಂದ್ಯಗಳಲ್ಲಿ ದಾಖಲೆಗಳ ಮಹಾಪೂರವೇ ಹರಿದಿದೆ. ಈ ದಿನದಾಟದಲ್ಲಿ 5 ಶತಕ, 5 ಅರ್ಧ ಶತಕ, 120 ಬೌಂಡರಿ, ಮತ್ತು 26 ಸಿಕ್ಸರ್ ಸೇರಿದಂತೆ ಒಟ್ಟು 1280 ರನ್ ದಾಖಲಾಗಿದೆ.

3 / 12

ಶತಕಗಳ ವಿಚಾರಕ್ಕೆ ಬರುವುದಾದರೆ, ಇಂಗ್ಲೆಂಡ್‌ ಪರ ಡೇವಿಡ್ ಮಲಾನ್ ಶತಕ ಸಿಡಿಸಿದರೆ, ಶ್ರೀಲಂಕಾ ಪರ ಕುಸಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ಹಾಗೂ ಪಾಕ್ ಪರ ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಶತಕ ಸಿಡಿಸಿದರು.

4 / 12

ಅರ್ಧಶತಕಗಳ ವಿಚಾರಕ್ಕೆ ಬಂದರೆ, ಇಂಗ್ಲೆಂಡ್‌ ಪರ ಜಾನಿ ಬೈರ್​ಸ್ಟೋ, ಜೋ ರೂಟ್ ಅರ್ಧಶತಕ ಸಿಡಿಸಿದರೆ, ಬಾಂಗ್ಲಾ ಪರ ಲಿಟನ್ ದಾಸ್ ಹಾಗೂ ಮುಶ್ಫಿಕರ್ ರಹೀಮ್ ತಲಾ ಅರ್ಧಶತಕಗಳ ಇನ್ನಿಂಗ್ಸ್ ಆಡಿದರು. ಹಾಗೆಯೇ ಲಂಕಾ ಪರ ಪಾತುಮ್ ನಿಸ್ಸಾಂಕ ಅವರ ಬ್ಯಾಟ್​ನಿಂದಲೂ ಅರ್ಧಶತಕ ಸಿಡಿಯಿತು.

5 / 12

ದಿನದ ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಎದುರಿಸಿದ್ದ ಇಂಗ್ಲೆಂಡ್ ಡೇವಿಡ್ ಮಲಾನ್ ಅವರ 140 ರನ್ ಗಳ ಇನ್ನಿಂಗ್ಸ್​ನ ಸಹಾಯದಿಂದಾಗಿ 364 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 227 ರನ್‌ಗಳಿಗೆ ಆಲೌಟ್ ಆಯಿತು.

6 / 12

ಇನ್ನು ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ ಕುಸಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ತಲಾ ಒಂದೊಂದು ಶತಕ ಸಿಡಿಸಿ, ತಂಡವನ್ನು 344 ರನ್‌ಗಳಿಗೆ ಕೊಂಡೊಯ್ದರು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನದ ಪರ ಅಬ್ದುಲ್ಲಾ ಶಫೀಕ್ ಅವರು 113 ರನ್‌ ಮತ್ತು ಮೊಹಮ್ಮದ್ ರಿಜ್ವಾನ್ 131 ರನ್​ಗಳ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

7 / 12

ಪಾಕಿಸ್ತಾನದ ಪರ 131ರನ್​ಗಳ ಇನ್ನಿಂಗ್ಸ್ ಆಡಿದ ಮೊಹಮ್ಮದ್ ರಿಜ್ವಾನ್, ತಂಡದ ಪರ ಏಕದಿನ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ವಿಕೆಟ್‌ಕೀಪರ್‌ ಬ್ಯಾಟರ್ ಎನಿಸಿಕೊಂಡರು. ಇವರಿಗೂ ಮುನ್ನ 124 ರನ್ ಸಿಡಿಸಿದ್ದ ಕಮ್ರಾನ್ ಅಕ್ಮಲ್ ಹೆಸರಲ್ಲಿ ಈ ದಾಖಲೆ ಇತ್ತು.

8 / 12

ಹಾಗೆಯೇ ಶ್ರೀಲಂಕಾ ನೀಡಿದ 345 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮೊದಲ ತಂಡವಾಯಿತು. ಈ ಹಿಂದೆ 2011ರ ವಿಶ್ವಕಪ್​ನಲ್ಲಿ 328 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಐರ್ಲೆಂಡ್ ಹೆಸರಿನಲ್ಲಿ ಈ ದಾಖಲೆ ಇತ್ತು.

9 / 12

ಇಷ್ಟೆ ಅಲ್ಲದೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಎರಡನೇ ತಂಡ ಹೆಗ್ಗಳಿಕೆಗೂ ಪಾಕಿಸ್ತಾನ ಪಾತ್ರವಾಗಿದೆ. ಹಾಗೆಯೇ ಈ ಮಾದರಿಯಲ್ಲಿ ಶ್ರೀಲಂಕಾ ವಿರುದ್ಧ ಯಾವುದೇ ತಂಡ ದಾಖಲಿಸಿದ ಅತ್ಯಧಿಕ ಮೊತ್ತ ಇದಾಗಿದೆ.

10 / 12

ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಈ ಪಂದ್ಯದಲ್ಲಿ ಒಟ್ಟು ನಾಲ್ಕು ಶತಕಗಳು ದಾಖಲಾದವು. ಇದರಲ್ಲಿ ಶ್ರೀಲಂಕಾದಿಂದ 2 ಶತಕಗಳಾದರೆ, ಪಾಕಿಸ್ತಾನದ ಪರ 2 ಶತಕಗಳು ಸಿಡಿದವು. ಈ ಮೂಲಕ ಒಂದೇ ಪಂದ್ಯದಲ್ಲಿ 3ನೇ ಬಾರಿಗೆ 4 ಶತಕಗಳು ಸಿಡಿದ ದಾಖಲೆ ಸೃಷ್ಟಿಯಾಯಿತು.

11 / 12

ಹಾಗೆಯೇ ಏಕದಿನ ವಿಶ್ವಕಪ್​ನಲ್ಲಿ ಸೋಲನ್ನೇ ಕಾಣದೆ ಒಂದು ತಂಡದ ವಿರುದ್ಧ ಅತಿ ಹೆಚ್ಚು ಗೆಲುವನ್ನು ಸಾಧಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗಿದೆ. ಇದವರೆಗೆ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ವಿಶ್ವಕಪ್​ನಲ್ಲಿ 8 ಗೆಲುವು ದಾಖಲಿಸಿದೆ.

12 / 12

ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದ ಬ್ಯಾಟರ್​ಗಳು ಶತಕ ಸಿಡಿಸಿದರು. ಲಂಕಾ ಪರವಾಗಿ ಸಮರವಿಕ್ರಮ 108 ರನ್​ಗಳ ಇನ್ನಿಂಗ್ಸ್ ಆಡಿದರೆ, ಪಾಕ್ ಪರ ಮೊಹಮ್ಮದ್ ರಿಜ್ವಾನ್ 131 ರನ್​ಗಳ ಇನ್ನಿಂಗ್ಸ್ ಆಡುದರು.

Loading...
Unable to load recommendations.
Follow Us