World Cup 2023: ಭಾರತಕ್ಕೆ ಬರುವ ಕುರಿತು ಪಾಕ್ ಸರ್ಕಾರದ ಸ್ಪಷ್ಟನೆ ಕೇಳಿ ಪತ್ರ ಬರೆದ ಪಿಸಿಬಿ
World Cup 2023: ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಪಾಕ್ ಪ್ರಧಾನಿ ಶಹಬಾಜ್ ಷರೀಫ್, ಗೃಹ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರಬರೆದಿದ್ದು, ಭಾರತ ಪ್ರವಾಸಕ್ಕೆ ತೆರಳಲು ಅನುಮೋದನೆ ನೀಡಬೇಕೆಂದು ಮನವಿ ಮಾಡಿದೆ.
1 / 7
2023ರ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲು ಸಿದ್ಧವಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ 10 ಸ್ಥಳಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
2 / 7
ಆದರೆ ಅದಕ್ಕೂ ಮುನ್ನ ಈ ಪಂದ್ಯ ನಡೆಯುವ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಏಕೆಂದರೆ ವಿಶ್ವಕಪ್‌ಗೆ ಭಾರತ ಪ್ರವಾಸ ಮಾಡಲು ಪಾಕಿಸ್ತಾನ ಸರ್ಕಾರ ಇನ್ನೂ ಪಾಕ್ ತಂಡಕ್ಕೆ ಯಾವುದೇ ಅನುಮತಿ ನೀಡಿಲ್ಲ.
3 / 7
ಇದೀಗ ಪಾಕ್ ಸರ್ಕಾರದಿಂದ ಅನುಮತಿ ಪಡೆಯುವ ಸಲುವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಪಾಕ್ ಪ್ರಧಾನಿ ಶಹಬಾಜ್ ಷರೀಫ್, ಗೃಹ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರಬರೆದಿದ್ದು, ಭಾರತ ಪ್ರವಾಸಕ್ಕೆ ತೆರಳಲು ಅನುಮೋದನೆ ನೀಡಬೇಕೆಂದು ಮನವಿ ಮಾಡಿದೆ.
4 / 7
ಇದರೊಂದಿಗೆ ಭಾರತ ಪ್ರವಾಸಕ್ಕೆ ಸಂಬಂಧಿಸಿದಂತೆ ಪಾಕ್ ಮಂಡಳಿಯು, ಪಾಕಿಸ್ತಾನ ಸರ್ಕಾರಕ್ಕೆ 3 ಪ್ರಶ್ನೆಗಳನ್ನು ಕೇಳಿದೆ ಎಂದು ವರದಿಯಾಗಿದೆ. ಈ ಪ್ರಶ್ನೆಗಳಿಗೆ ಪಾಕ್ ಸರ್ಕಾರದಿಂದ ಸೂಕ್ತ ಉತ್ತರ ಪಡೆದ ನಂತರವಷ್ಟೇ ಭಾರತಕ್ಕೆ ಪಾಕಿಸ್ತಾನ ಬರುವ ಬಗ್ಗೆ ಚಿತ್ರಣ ಸ್ಪಷ್ಟವಾಗಲಿದೆ.
5 / 7
ವರದಿಯ ಪ್ರಕಾರ ಪಿಸಿಬಿ, ಪಾಕ್ ಸರ್ಕಾರದ ಮುಂದಿಟ್ಟಿರುವ ಮುರು ಪ್ರಶ್ನೆಗಳೆಂದರೆ, ಮೊದಲನೇಯದಾಗಿ ನಮ್ಮ ತಂಡ ಭಾರತಕ್ಕೆ ಹೋಗಲು ಸರ್ಕಾರದ ಅನುಮತಿ ಇದೆಯೇ? ಎರಡನೇಯದ್ದು, ಒಂದು ವೇಳೆ ಸರ್ಕಾರ ಭಾರತ ಪ್ರವಾಸಕ್ಕೆ ಒಪ್ಪಿಗೆ ನೀಡಿದರೆ, ಪಾಕಿಸ್ತಾನದ ಪಂದ್ಯಗಳು ನಡೆಯುವ ಸ್ಥಳದ ಬಗ್ಗೆ ಏನಾದರೂ ಆಕ್ಷೇಪವಿದೆಯೇ?. ಮೂರನೇಯದ್ದಾಗಿ, ಸರ್ಕಾರವು ಭದ್ರತೆಯ ಪರಿಶೀಲನೆಗಾಗಿ ಭಾರತಕ್ಕೆ ನಿಯೋಗವನ್ನು ಕಳುಹಿಸುವುದೇ? ಎಂಬುದಾಗಿದೆ.
6 / 7
ಜಿಯೋ ನ್ಯೂಸ್ ವರದಿ ಪ್ರಕಾರ, ವಿಶ್ವಕಪ್ ವೇಳಾಪಟ್ಟಿ ಪ್ರಕಟವಾದ ಕೂಡಲೇ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಜೂನ್ 27ರಂದು ಬರೆದ ಪತ್ರದಲ್ಲಿ ಮಂಡಳಿಯು ಪಾಕ್ ಪಂದ್ಯಗಳು ನಡೆಯುವ ಸ್ಥಳದ ಬಗ್ಗೆ ಸರ್ಕಾರದಿಂದ ಸಲಹೆಯನ್ನೂ ಕೇಳಿದೆ ಎಂದು ವರದಿಯಾಗಿದೆ.
7 / 7
ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಪಾಕ್ ತಂಡ ಲೀಗ್ ಹಂತದಲ್ಲಿ 9 ಪಂದ್ಯಗಳನ್ನಾಡಲಿದ್ದು, ಈ ಪಂದ್ಯಗಳಿಗೆ 5 ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಪಾಕ್ ತಂಡ ಲೀಗ್ ಹಂತವನ್ನು ಮೀರಿ ಮುನ್ನಡೆದರೆ, ಸೆಮಿಫೈನಲ್ ಪಂದ್ಯವನ್ನು ಕೋಲ್ಕತ್ತಾದಲ್ಲಿ ಆಡಲಿದೆ. ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.