ಇಂಗ್ಲೆಂಡ್ ಅಲ್ಲ..! ವಿಶ್ವಕಪ್ ಗೆಲ್ಲುವ ತನ್ನ ನೆಚ್ಚಿನ ತಂಡವನ್ನು ಹೆಸರಿಸಿದ ಇಯಾನ್ ಮಾರ್ಗನ್
ODI World Cup 2023: ತವರು ನೆಲದಲ್ಲಿ ಟೀಂ ಇಂಡಿಯಾ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಪೂರಕವಾಗಿ ತವರು ನೆಲದಲ್ಲಿ ಯಾವ ತಂಡ ವಿಶ್ವಕಪ್ ಆಡುತ್ತದೋ ಆ ತಂಡವೇ ವಿಶ್ವಕಪ್ ಗೆಲ್ಲುವಲ್ಲಿ ಹೆಚ್ಚು ಬಾರಿ ಯಶಸ್ವಿಯಾಗಿದೆ. ಇದಕ್ಕೆ 2011 ರಲ್ಲಿ ಭಾರತ, 2015 ರಲ್ಲಿ ಆಸ್ಟ್ರೇಲಿಯಾ, 2019 ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಗೆದ್ದಿರುವುದೇ ಸಾಕ್ಷಿ ಎಂದಿದ್ದಾರೆ.
1 / 7
ಏಕದಿನ ವಿಶ್ವಕಪ್ ಸನಿಹವಾದಂತೆ ಮಾಜಿ ಕ್ರಿಕೆಟಿಗರು ಈ ಬಾರಿಯ ವಿಶ್ವಕಪ್ ಗೆಲ್ಲುವ ತಮ್ಮ ನೆಚ್ಚಿನ ತಂಡಗಳನ್ನು ಹೆಸರಿಸಲು ಆರಂಭಿಸಿದ್ದಾರೆ. ಇದೀಗ ಅವರ ಸಾಲಿಗೆ 2019 ರಲ್ಲಿ ಇಂಗ್ಲೆಂಡ್ಗೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಟ್ಟಿದ ನಾಯಕ ಇಯಾನ್ ಮಾರ್ಗನ್ ಸೇರ್ಪಡೆಗೊಂಡಿದ್ದಾರೆ.
2 / 7
ಇಯಾನ್ ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ತನ್ನ ತವರು ಅಭಿಮಾನಿಗಳ ಮುಂದೆ 2019 ರ ವಿಶ್ವಕಪ್ ಅನ್ನು ಎತ್ತಿಹಿಡಿಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಲಾರ್ಡ್ಸ್‌ನಲ್ಲಿ ನಡೆದ ಈ ಫೈನಲ್‌ನಲ್ಲಿ ಮೋರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ, ಮೊದಲ ಬಾರಿಗೆ ವಿಶ್ವಕಪ್ ಪ್ರಶಸ್ತಿ ಎತ್ತಿ ಹಿಡಿದಿತ್ತು.
3 / 7
ಇದೀಗ ಈ ಬಾರಿಯ ಏಕದಿನ ವಿಶ್ವಕಪ್ ಗೆಲ್ಲುವ ತಂಡವನ್ನು ಹೆಸರಿಸಿರುವ ಮಾರ್ಗನ್, ತನ್ನ ದೇಶದ ಬದಲು ಆತಿಥೇಯ ಭಾರತವನ್ನು ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸುವ ನೆಚ್ಚಿನ ತಂಡ ಎಂದಿದ್ದಾರೆ.
4 / 7
ತವರು ನೆಲದಲ್ಲಿ ಟೀಂ ಇಂಡಿಯಾ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಪೂರಕವಾಗಿ ತವರು ನೆಲದಲ್ಲಿ ಯಾವ ತಂಡ ವಿಶ್ವಕಪ್ ಆಡುತ್ತದೋ ಆ ತಂಡವೇ ವಿಶ್ವಕಪ್ ಗೆಲ್ಲುವಲ್ಲಿ ಹೆಚ್ಚು ಬಾರಿ ಯಶಸ್ವಿಯಾಗಿದೆ. ಇದಕ್ಕೆ 2011 ರಲ್ಲಿ ಭಾರತ, 2015 ರಲ್ಲಿ ಆಸ್ಟ್ರೇಲಿಯಾ, 2019 ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಗೆದ್ದಿರುವುದೇ ಸಾಕ್ಷಿ ಎಂದಿದ್ದಾರೆ.
5 / 7
ಭಾರತದ ಬಳಿಕ ವಿಶ್ವಕಪ್ ಗೆಲ್ಲುವ ತನ್ನ ನೆಚ್ಚಿನ ತಂಡಗಳಲ್ಲಿ ಇಂಗ್ಲೆಂಡ್ ತಂಡವನ್ನು ಹೆಸರಿಸಿರುವ ಮಾರ್ಗನ್, ಇಂಗ್ಲೆಂಡ್ ತಂಡದಲ್ಲಿ ಕೆಲವು ಅದ್ಭುತ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳನ್ನು ಹೊಂದಿದೆ. ಹೀಗಾಗಿ ತಂಡದ ಪ್ರದರ್ಶನವೂ ಪಂದ್ಯಾವಳಿಯ ಹಂತಿಮ ಹಂತದಲ್ಲಿ ಪ್ರಮುಖ ಬದಲಾವಣೆ ತರುತ್ತದೆ ಎಂದಿದ್ದಾರೆ.
6 / 7
ಈ ಈವೆಂಟ್‌ಗಾಗಿ ಇಂಗ್ಲೆಂಡ್ ಈಗಾಗಲೇ ತಮ್ಮ ತಾತ್ಕಾಲಿಕ 15-ಜನರ ತಂಡವನ್ನು ಘೋಷಿಸಿದೆ. ನಿವೃತ್ತಿಯಿಂದ ಹಿಂದೆ ಸರಿದ ಬೆನ್ ಸ್ಟೋಕ್ಸ್ ತಂಡಕ್ಕೆ ಪುನರಾಗಮನ ಮಾಡಿದರೆ, ತನ್ನ ಫಿಟ್‌ನೆಸ್ ಸಾಬೀತುಪಡಿಸಲು ವಿಫಲರಾದ ಜೋಫ್ರಾ ಆರ್ಚರ್ ತಂಡದಿಂದ ಹೊರಗುಳಿದಿದ್ದಾರೆ.
7 / 7
ಇಂಗ್ಲೆಂಡ್ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಅಕ್ಟೋಬರ್ 29 ರಂದು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ಭಾರತ ಮುಖಾಮುಖಿಯಾಗಲಿವೆ.
Published On - 10:10 am, Wed, 23 August 23