ICC World Cup 2023: ತವರಿನಲ್ಲಿ ಭಾರತ ಯಾವಾಗಲೂ ‘ಹುಲಿ’ ಎಂದ ಗ್ರೆಗ್ ಚಾಪೆಲ್

Greg Chappell Statement: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಕೋಚ್ ಆಗಿ ಕಾಣಿಸಿಕೊಂಡ ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್‌ ಕೂಡ ಐಸಿಸಿ ಏಕದಿನ ವಿಶ್ವಕಪ್ ಬಗ್ಗೆ ಮಾತನಾಡಿದ್ದಾರೆ. ಇವರು 2005 ರಿಂದ 2007 ರವರೆಗೆ ಭಾರತ ತಂಡದ ಕೋಚ್ ಆಗಿದ್ದರು.

Vinay Bhat
|

Updated on: Aug 22, 2023 | 1:50 PM

ಈ ವರ್ಷ ಭಾರತದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023 ಟೂರ್ನಿಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಅಕ್ಟೋಬರ್‌ 5 ರಂದು ಈ ಮತ್ವದ ಟೂರ್ನಿಗೆ ಚಾಲನೆ ಸಿಗಲಿದ್ದು, ನವೆಂಬರ್‌ 19 ರವರೆಗೆ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ನವೆಂಬರ್ 15 ಮತ್ತು 16 ರಂದು ಆಯೋಜಿಸಲಾಗಿದೆ.

1 / 8
ವಿಶ್ವಕಪ್ ಟೂರ್ನಿ ಹತ್ತಿರವಾಗುತ್ತದ್ದಂತೆ ಮಾಜಿ ಕ್ರಿಕೆಟಿಗರು ಸಂದರ್ಶನದಲ್ಲಿ ಒಂದೊಂದೆ ಹೇಳಿಕೆ ನೀಡುತ್ತಿದ್ದಾರೆ. ಈ ಬಾರಿ ಯಾವ ತಂಡ ಗೆಲ್ಲಬಹುದು?, ಯಾರಿಗೆ ಅವಕಾಶ ಸಿಗಬಹುದು?, ಸೆಮಿ ಫೈನಲ್ ಪ್ರವೇಶಿಸುವ ತಂಡ ಯಾವುದು? ಎಂಬ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

2 / 8
ಇದೀಗ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಕೋಚ್ ಆಗಿ ಕಾಣಿಸಿಕೊಂಡ ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್‌ ಕೂಡ ಐಸಿಸಿ ಏಕದಿನ ವಿಶ್ವಕಪ್ ಬಗ್ಗೆ ಮಾತನಾಡಿದ್ದಾರೆ. ಇವರು 2005 ರಿಂದ 2007 ರವರೆಗೆ ಭಾರತ ತಂಡದ ಕೋಚ್ ಆಗಿದ್ದರು.

3 / 8
ನಾನು ಕೋಚ್ ಆಗಿದ್ದಾಗ ಭಾರತವು ತವರಿನಲ್ಲಿ ಇತರ ತಂಡಗಳ ಮೇಲೆ ಪ್ರಾಬಲ್ಯ ಸಾಧಿಸಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಭಾರತದ ಪ್ರದರ್ಶನವನ್ನು ಆನಂದಿಸುತ್ತಿದ್ದೆ. ತವರಿನಲ್ಲಿ ಭಾರತ ಯಾವಾಗಲೂ 'ಹುಲಿ' ಎಂದು ಎಂದು ಚಾಪೆಲ್ ಹೇಳಿದ್ದಾರೆ.

4 / 8
RevSportz ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಚಾಪೆಲ್, ಭಾರತ ತಂಡವು ಯಾವಾಗಲೂ ತವರಿನಲ್ಲಿ ಅದ್ಭುತ ಪ್ರದರ್ಶನ ನೀಡುತ್ತದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಅವರ ಆಟವನ್ನು ನೋಡಲು ತುಂಬಾ ಖುಷಿ ಆಗುತ್ತದೆ. ಭಾರತ ತಂಡವು ತವರಿನಲ್ಲಿ ಆರಾಮದಾಯಕವಾಗಿ ಆಡುತ್ತದೆ ಎಂಬುದು ಗ್ರೆಗ್ ಚಾಪೆಲ್ ಮಾತು.

5 / 8
ತವರಿನಲ್ಲಿ ಭಾರತಕ್ಕೆ ಎಷ್ಟೇ ಟಾರ್ಗೆಟ್ ನೀಡಿದರೂ ಆ ಸವಾಲನ್ನು ಸುಲಭವಾಗಿ ಬೆನ್ನಟ್ಟುತ್ತದೆ. ಈ ಬಾರಿಯ ವಿಶ್ವಕಪ್‌ನ ಎಲ್ಲ ಪಂದ್ಯದಲ್ಲೂ ಭಾರತವೇ ಫೇವರಿಟ್‌ ಆಗಲಿದೆ. ಟೀಮ್ ಇಂಡಿಯಾವನ್ನು ಸೋಲಿಸಲು ಎದುರಾಳಿ ತಂಡ ಸಾಕಷ್ಟು ಶ್ರಮಪಡಬೇಕಾಗುತ್ತದೆ ಎಂದು ಚಾಪೆಲ್ ಹೇಳಿದ್ದಾರೆ.

6 / 8
ವಿಶ್ವಕಪ್‌ನಲ್ಲಿ ಏಷ್ಯಾದ ರಾಷ್ಟ್ರಗಳು ಉತ್ತಮವಾಗಿ ಆಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಂತೆಯೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ತಂಡಗಳಿಗೆ ಕೂಡ ಇಲ್ಲಿ ಕಷ್ಟವಿಲ್ಲ. ಆಸ್ಟ್ರೇಲಿಯನ್ ಕ್ರಿಕೆಟಿಗರಿಗೆ ಭಾರತವು ಮೊದಲಿನಂತೆ ಕಷ್ಟವಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.

7 / 8
ಇತ್ತೀಚಿನ ವರ್ಷಗಳಲ್ಲಿ ಆಸ್ಟ್ರೇಲಿಯಾ ಆಟಗಾರರು ಭಾರತದಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಅವರಿಗೆ ಅಲ್ಲಿನ ಪಿಚ್ ಹಾಗೂ ವಾತಾವರಣದ ಪರಿಚಯವಿದೆ. ಹಾಗೆಯೆ ಇಂಗ್ಲೆಂಡ್ ಕ್ರಿಕೆಟಿಗರು ಕೂಡ ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ. ಹೀಗಾಗಿ ಇವರಿಗೆ ಭಾರತದಲ್ಲಿ ಕ್ರಿಕೆಟ್ ಆಡುವುದು ಕಷ್ಟವಲ್ಲ - ಗ್ರೆಗ್ ಚಾಪೆಲ್.

8 / 8
Follow us