WPL: ಆರ್‌ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಎಂಟ್ರಿ..! ಮೂಗುತಿ ಸುಂದರಿಗೆ ಯಾವ ಹುದ್ದೆ ಗೊತ್ತಾ?
TV9 Web | Updated By: ಪೃಥ್ವಿಶಂಕರ
Updated on:
Feb 15, 2023 | 11:08 AM
Sania Mirza: ಈಗಾಗಲೇ ಟೆನಿಸ್ಗೆ ವಿದಾಯ ಹೇಳಿರುವ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಆರ್‌ಸಿಬಿ ತಂಡ ಮಹಿಳಾ ಪ್ರಿಮಿಯರ್ ಲೀಗ್ನ ಚೊಚ್ಚಲ ಆವೃತ್ತಿಗೆ ತನ್ನ ತಂಡದ ಮೆಂಟರ್ ಆಗಿ ನೇಮಿಸಿಕೊಂಡಿದೆ.
1 / 5
ಫೆ. 13 ರಂದು ನಡೆದ ಮಹಿಳಾ ಪ್ರಿಮಿಯರ್ ಲೀಗ್ ಚೊಚ್ಚಲ ಆವೃತ್ತಿಯ ಹರಾಜಿನಲ್ಲಿ ಸ್ಮೃತಿ ಮಂಧಾನರಂತಹ ಸ್ಫೋಟಕ ಆಟಗಾರ್ತಿಯನ್ನು ಖರೀದಿಸುವುದರೊಂದಿಗೆ ಬಲಿಷ್ಠ ತಂಡವನ್ನು ಕಟ್ಟಿರುವ ಆರ್‌ಸಿಬಿ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆಲ್ಲಲು ತನ್ನ ತಂಡವನ್ನು ಮತ್ತಷ್ಟು ಬಲ ಪಡಿಸಲು ಮುಂದಾಗಿದೆ.
2 / 5
ಈಗಾಗಲೇ ಟೆನಿಸ್ಗೆ ವಿದಾಯ ಹೇಳಿರುವ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಆರ್‌ಸಿಬಿ ತಂಡ ಮಹಿಳಾ ಪ್ರಿಮಿಯರ್ ಲೀಗ್ನ ಚೊಚ್ಚಲ ಆವೃತ್ತಿಗೆ ತನ್ನ ತಂಡದ ಮೆಂಟರ್ ಆಗಿ ನೇಮಿಸಿಕೊಂಡಿದೆ.
3 / 5
6 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ ಸಾನಿಯಾ ಇದೇ ತಿಂಗಳು ಕೊನೆಯ ಬಾರಿಗೆ ಟೆನಿಸ್ ಅಂಗಳಕ್ಕೆ ಕಾಲಿಡಲಿದ್ದಾರೆ. ಇದಾದ ನಂತರ ಐಪಿಎಲ್‌ನಲ್ಲಿ ಬ್ಯುಸಿಯಾಗಲಿರುವ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ.
4 / 5
ಬುಧವಾರ ಸಾನಿಯಾ ಅವರನ್ನು ಆರ್‌ಸಿಬಿ ಮಹಿಳಾ ತಂಡದ ಮೆಂಟರ್ ಆಗಿ ನೇಮಕ ಮಾಡಲಾಗಿದೆ. ಸಾನಿಯಾ ಅವರನ್ನು ಮಹಿಳಾ ತಂಡದ ಮಾರ್ಗದರ್ಶಕರನ್ನಾಗಿ ಮಾಡಿರುವುದಾಗಿ ಫ್ರಾಂಚೈಸಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ.
5 / 5
ಆರ್‌ಸಿಬಿ ತಂಡ ಹೀಗಿದೆ: ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀದರ್ ನೈಟ್, ಡೇನ್ ವ್ಯಾನ್ ನೀಕೆರ್ಕ್, ಪ್ರೀತಿ ಬೋಸ್, ಕೋಮಲ್ ಖೇಮ್‌ನಾರ್, ಶುಟ್, ಸಹನಾ ಪವಾರ್
Published On - 10:56 am, Wed, 15 February 23