WPL 2026: ಸತತ 3 ಎಸೆತಗಳಲ್ಲಿ 3 ವಿಕೆಟ್‌ ಉರುಳಿಸಿದ ಆರ್​ಸಿಬಿ; ಆದರೂ ಹ್ಯಾಟ್ರಿಕ್ ಸಿಗಲಿಲ್ಲ

Updated on: Jan 12, 2026 | 9:57 PM

WPL 2026 RCB vs UP Warriors: ಮಹಿಳಾ ಪ್ರೀಮಿಯರ್ ಲೀಗ್ 2026 ರಲ್ಲಿ ಆರ್​ಸಿಬಿ ಯುಪಿ ವಾರಿಯರ್ಸ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದೆ. ಯುಪಿ ತಂಡವನ್ನು 144 ರನ್‌ಗಳಿಗೆ ಕಟ್ಟಿಹಾಕಿದ ಆರ್​ಸಿಬಿ, 50 ರನ್‌ಗಳ ಒಳಗೇ 5 ವಿಕೆಟ್ ಪಡೆದು ಪ್ರಾಬಲ್ಯ ಮೆರೆಯಿತು. ಪ್ರಮುಖವಾಗಿ 3 ಎಸೆತಗಳಲ್ಲಿ 3 ವಿಕೆಟ್‌ಗಳು ಪತನಗೊಂಡರೂ, ಎರಡು ವಿಭಿನ್ನ ಓವರ್‌ಗಳಲ್ಲಿ ಬಿದ್ದ ಕಾರಣ ಹ್ಯಾಟ್ರಿಕ್ ಸಾಧಿಸಲಾಗಲಿಲ್ಲ. ಇದು ಪಂದ್ಯದ ಪ್ರಮುಖ ತಿರುವು.

1 / 8
ಮಹಿಳಾ ಪ್ರೀಮಿಯರ್ ಲೀಗ್ 2026 ರ ಸೀಸನ್​ಗೆ ಅದ್ಭುತ ಆರಂಭ ಸಿಕ್ಕಿದೆ. ಮೊದಲ ಪಂದ್ಯವನ್ನು ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಗೆದ್ದುಕೊಂಡಿದ್ದ ಆರ್​ಸಿಬಿ ಇದೀಗ ತನ್ನ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿದ ಆರ್​ಸಿಬಿ, ಯುಪಿ ತಂಡವನ್ನು 144 ರನ್​ಗಳಿಗೆ ಸೀಮಿತಗೊಳಿಸಿದೆ.

ಮಹಿಳಾ ಪ್ರೀಮಿಯರ್ ಲೀಗ್ 2026 ರ ಸೀಸನ್​ಗೆ ಅದ್ಭುತ ಆರಂಭ ಸಿಕ್ಕಿದೆ. ಮೊದಲ ಪಂದ್ಯವನ್ನು ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಗೆದ್ದುಕೊಂಡಿದ್ದ ಆರ್​ಸಿಬಿ ಇದೀಗ ತನ್ನ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿದ ಆರ್​ಸಿಬಿ, ಯುಪಿ ತಂಡವನ್ನು 144 ರನ್​ಗಳಿಗೆ ಸೀಮಿತಗೊಳಿಸಿದೆ.

2 / 8

ಈ ಪಂದ್ಯದಲ್ಲಿ ಆರಂಭದಿಂದಲೂ ಯುಪಿ ಬ್ಯಾಟಿಂಗ್ ವಿಭಾಗವನ್ನು ಕಾಡಿದ ಆರ್​ಸಿಬಿ ಬೌಲರ್​ಗಳು 50 ರನ್​ಗಳ ಒಳಗೆ ತಂಡದ ಪ್ರಮುಖ 5 ವಿಕೆಟ್ ಉರುಳಿಸಿದರು. ಇದಕ್ಕೆ ಪೂರಕವಾಗಿ ಈ ಪಂದ್ಯದಲ್ಲಿ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್‌ಗಳು ಪತನಗೊಂಡವು. ಆದರೆ ಈ ಬಾರಿ ಹ್ಯಾಟ್ರಿಕ್ ಸಾಧಿಸಲಾಗಲಿಲ್ಲ. ಇದಕ್ಕೆ ಕಾರಣ ಏನೆಂದರೆ?

3 / 8

ಜನವರಿ 12, ಸೋಮವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಡಬ್ಲ್ಯೂಪಿಎಲ್ 2026 ಪಂದ್ಯದಲ್ಲಿ, ಸ್ಮೃತಿ ಮಂಧಾನ ನಾಯಕತ್ವದ ಬೆಂಗಳೂರು ತಂಡ ಮೊದಲು ಬೌಲಿಂಗ್ ಮಾಡಿತು. ಮತ್ತೊಮ್ಮೆ, ಇಂಗ್ಲೆಂಡ್‌ನ ಸ್ಟಾರ್ ವೇಗಿ ಲಾರೆನ್ ಬೆಲ್ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ತಮ್ಮ ಮೊದಲ ವಿಕೆಟ್ ಪಡೆದರು.

4 / 8

ಆರ್‌ಸಿಬಿಯ ಬಿಗಿಯಾದ ಬೌಲಿಂಗ್‌ನಿಂದಾಗಿ, ಯುಪಿ ವಾರಿಯರ್ಸ್ ಮುಕ್ತವಾಗಿ ರನ್​ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡ ಒತ್ತಡಕ್ಕೊಳಗಾಯಿತು. ಇದರ ಪರಿಣಾಮವಾಗಿ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಸೇರಿದಂತೆ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿದ್ದ ಪ್ರಮುಖ ಆಟಗಾರ್ತಿಯರು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು.

5 / 8

ಎಂಟನೇ ಓವರ್‌ನ ಮೊದಲ ಎಸೆತದಲ್ಲಿ ಶ್ರೇಯಾಂಕ ಪಾಟೀಲ್ ಯುಪಿ ನಾಯಕಿ ಲ್ಯಾನಿಂಗ್ ಅವರನ್ನು ಔಟ್ ಮಾಡಿದರೆ, ಫೋಬೆ ಲಿಚ್‌ಫೀಲ್ಡ್ ಮತ್ತು ಕಿರಣ್ ನವ್‌ಗಿರೆ ಆ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಆದಾಗ್ಯೂ ಯುಪಿ ಆ ಬಳಿಕ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

6 / 8

ಮೊದಲು, ಲಿಚ್‌ಫೀಲ್ಡ್ ಔಟಾದರೆ, ನಂತರ ಮುಂದಿನ ಎಸೆತದಲ್ಲಿ ನವ್‌ಗಿರೆ ಔಟ್ ಆದರು. ಹೊಸ ಬ್ಯಾಟ್ಸ್‌ಮನ್ ಶ್ವೇತಾ ಸೆಹ್ರಾವತ್ ಮೊದಲ ಎಸೆತದಲ್ಲೇ ಖಾತೆ ತೆರೆಯದೆಯೇ ಔಟಾದರು. ಹೀಗಾಗಿ, ಯುಪಿ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

7 / 8

ಆದರೆ ಇದರ ಹೊರತಾಗಿಯೂ, ಹ್ಯಾಟ್ರಿಕ್ ಆಗಲಿಲ್ಲ. ವಾಸ್ತವವಾಗಿ ಯುಪಿ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತಾದರೂ ಆ 3 ವಿಕೆಟ್​ಗಳು ಎರಡು ವಿಭಿನ್ನ ಓವರ್‌ಗಳಲ್ಲಿ ಪತನಗೊಂಡವು. ಶ್ರೇಯಾಂಕ ಪಾಟೀಲ್ ಅವರ ಓವರ್‌ನ ಕೊನೆಯ ಎಸೆತದಲ್ಲಿ ಲಿಚ್‌ಫೀಲ್ಡ್ ಅವರ ವಿಕೆಟ್ ಪತನವಾದರೆ, ಮುಂದಿನ ಓವರ್‌ನಲ್ಲಿ ನಾಡಿನ್ ಡಿ ಕ್ಲರ್ಕ್ ಮೊದಲ ಎರಡು ಎಸೆತಗಳಲ್ಲಿ ನವ್‌ಗಿರೆ ಮತ್ತು ಸೆಹ್ರಾವತ್ ಅವರನ್ನು ಔಟ್ ಮಾಡಿದರು.

8 / 8

ಡಿ ಕ್ಲರ್ಕ್ ತಮ್ಮ ಓವರ್​ನಲ್ಲಿ ಹ್ಯಾಟ್ರಿಕ್ ಪೂರ್ಣಗೊಳಿಸುವ ಅವಕಾಶವನ್ನು ಹೊಂದಿದ್ದರು, ಆದರೆ ಅದು ಆಗಲಿಲ್ಲ. ಈ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಸಾಧಿಸದಿದ್ದರೂ, ಆರ್‌ಸಿಬಿ ಕೇವಲ ಎಂಟು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಯುಪಿ ವಾರಿಯರ್ಸ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು.

Loading...
Unable to load recommendations.
Follow Us