ಸತತ ಸೋಲು… RCBಗೆ ನೇರವಾಗಿ ಫೈನಲ್​ಗೇರಲು ಇರೋದು ಇದೊಂದೇ ದಾರಿ

Updated on: Jan 27, 2026 | 7:34 AM

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ ಬರೋಬ್ಬರಿ 199 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 184 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ 15 ರನ್​ಗಳ ಜಯ ಸಾಧಿಸಿದೆ.

1 / 6
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​​ ಸೀಸನ್​-4 ರಲ್ಲಿ ಸತತ 5 ಪಂದ್ಯಗಳಲ್ಲಿ ಜಯ ಸಾಧಿಸಿ ಇತಿಹಾಸ ಬರೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇದೀಗ ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್​ಗಳಿಂದ ಪರಾಜಯಗೊಂಡಿದ್ದ ಆರ್​ಸಿಬಿ ತಂಡವು ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧ 15 ರನ್​ಗಳಿಂದ ಮುಗ್ಗರಿಸಿದೆ.

2 / 6
ಈ ಎರಡು ಸೋಲುಗಳೊಂದಿಗೆ ಆರ್​ಸಿಬಿ ತಂಡದ ಡೈರೆಕ್ಟ್ ಫೈನಲ್​ ಎಂಟ್ರಿಗೆ ತೊಡಕುಂಟಾಗಿದೆ. ಅಂದರೆ ಆರ್​ಸಿಬಿ ತಂಡವು ಕಳೆದ ಎರಡು ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ದಾಖಲಿಸಿದ್ದರೆ ನೇರವಾಗಿ ಫೈನಲ್​​ಗೆ ಪ್ರವೇಶಿಸುತ್ತಿತ್ತು. ಈ ಮೂಲಕ ಎಲಿಮಿನೇಟರ್ ಪಂದ್ಯವಾಡುವ ರಿಸ್ಕ್​ನಿಂದ ಪರಾಗಬಹುದಿತ್ತು.

3 / 6
ಇದೀಗ ಎರಡು ಪಂದ್ಯಗಳಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅಂದರೆ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಗೆದ್ದರೆ ಮಾತ್ರ ಆರ್​ಸಿಬಿ ತಂಡವು ನೇರವಾಗಿ ಫೈನಲ್​ಗೆ ಪ್ರವೇಶಿಸಲಿದೆ.

4 / 6
ಆರ್​ಸಿಬಿ ತಂಡವು ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಜನವರಿ 29 ರಂದು ನಡೆಯಲಿರುವ ಈ ಮ್ಯಾಚ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಗೆದ್ದರೆ ಫೈನಲ್​​ಗೆ ಪ್ರವೇಶಿಸುವುದು ಖಚಿತ. ಒಂದು ವೇಳೆ ಯುಪಿ ವಾರಿಯರ್ಸ್ ವಿರುದ್ಧ ಕೂಡ ಸೋತರೆ ನೆಟ್​ ರನ್ ರೇಟ್​ ಲೆಕ್ಕಾಚಾರ ಪರಿಗಣನೆಗೆ ಬರಲಿದೆ.

5 / 6
ಏಕೆಂದರೆ ಮುಂದಿನ ಪಂದ್ಯಗಳ ಮೂಲಕ ಉಳಿದ ನಾಲ್ಕು ತಂಡಗಳಿಗೂ 10 ಅಂಕಗಳನ್ನು ಗಳಿಸಲು ಉತ್ತಮ ಅವಕಾಶವಿದೆ. ಹೀಗೆ ಟಾಪ್-3 ತಂಡಗಳು 10 ಅಂಕಗಳನ್ನು ಪಡೆದುಕೊಂಡರೆ, ಅತ್ಯುತ್ತಮ ನೆಟ್​ ರನ್ ರೇಟ್​ ಹೊಂದಿರುವ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ. ಅಂದರೆ ಲೀಗ್ ಹಂತದ ಪಂದ್ಯದ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು  ಫೈನಲ್​ಗೇರಲಿದೆ.

6 / 6
ಇದೀಗ 10 ಅಂಕಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಪಂದ್ಯದಲ್ಲಿ ಗೆದ್ದರೆ 12 ಅಂಕಗಳನ್ನು ಪಡೆಯಬಹುದು. ಈ ಮೂಲಕ ಎಲ್ಲಾ ತಂಡಗಳನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ನೇರವಾಗಿ ಫೈನಲ್​ಗೆ ಪ್ರವೇಶಿಸಬಹುದು. ಅಂದರೆ ಆರ್​ಸಿಬಿ ತಂಡವು ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಗೆದ್ದರೆ ಮಾತ್ರ ನೇರವಾಗಿ ಫೈನಲ್​ಗೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ.