AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2027: ಮೊದಲ ಸುತ್ತಿನಲ್ಲಿ ಹರಾಜಾಗಲಿರುವ 6 ಆಟಗಾರ್ತಿಯರು ಇವರೇ!

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-5ರ ಆಟಗಾರ್ತಿಯರ ಮಿನಿ ಹರಾಜು ಪ್ರಕ್ರಿಯೆಯು ಅಕ್ಟೋಬರ್ 28 ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಈ ಹರಾಜಿಗಾಗಿ ಒಟ್ಟು 146 ಆಟಗಾರ್ತಿಯರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಐದೂ ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿ ಖಾಲಿ ಇರುವ ಒಟ್ಟು 27 ಸ್ಥಾನಗಳನ್ನು ತುಂಬಿಕೊಳ್ಳಲಿದ್ದಾರೆ.

ಝಾಹಿರ್ ಯೂಸುಫ್
|

Updated on: Oct 27, 2026 | 11:23 AM

Share
ವುಮೆನ್ಸ್ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಕೇರಳದ ಕೊಚ್ಚಿಯಲ್ಲಿರುವ ಗ್ರಾಂಡ್ ಹಯಾತ್​ ಹೋಟೆಲ್‌ನಲ್ಲಿ ನಾಳೆ (ಅ.28) ಸಂಜೆ ನಡೆಯಲಿರುವ ಆಟಗಾರ್ತಿಯರ ಹರಾಜಿನಲ್ಲಿ ಒಟ್ಟು 146 ಮಹಿಳಾ ಕ್ರಿಕೆಟರ್‌ಗಳ ಹೆಸರು ಕಾಣಿಸಿಕೊಳ್ಳಲಿದೆ. (PC: Gettyimages)

1 / 8
ಈ 146 ಆಟಗಾರ್ತಿಯರಲ್ಲಿ ಮೊದಲ ಸೆಟ್​ನಲ್ಲಿ 6 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಅಂದರೆ ಮೊದಲಿಗೆ ಈ ಆರು ಆಟಗಾರ್ತಿಯರಿಗಾಗಿ ಬಿಡ್ಡಿಂಗ್ ನಡೆಯಲಿದ್ದು, ಇದಾದ ಬಳಿಕ ಆಲ್​ರೌಂಡರ್​ಗಳು ಹಾಗೂ ವಿಕೆಟ್ ಕೀಪರ್​ಗಳಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರಂತೆ ಮೊದಲ ಸುತ್ತಿನ ಬಿಡ್ಡಿಂಗ್​ನಲ್ಲಿ ಕಾಣಿಸಿಕೊಳ್ಳಲಿರುವ 6 ಆಟಗಾರ್ತಿಯರ ಪಟ್ಟಿ ಇಲ್ಲಿದೆ... (PC: WPL)

2 / 8
ಸೋಫಿಯಾ ಡಂಕ್ಲಿ: ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಸೋಫಿಯಾ ಡಂಕ್ಲಿ ಈ ಬಾರಿ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಗುಜರಾತ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಡಂಕ್ಲಿಯ ಹೆಸರು ಹರಾಜಿನ ಮೊದಲ ಪಟ್ಟಿಯಲ್ಲಿದೆ.  (PC: Gettyimages)

3 / 8
ಗುಣಾಲನ್ ಕಮಲಿನಿ: ಭಾರತದ ಯುವ ಭರವಸೆಯ ಆಟಗಾರ್ತಿ ಗುಣಾಲನ್ ಕಮಿಲಿನಿ ಅವರು ಈ ಬಾರಿ 40 ಲಕ್ಷ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಕಮಲಿನಿ ಈ ಬಾರಿ ಹೊಸ ಟೀಮ್​ ಪಾಲಾಗುವ ಸಾಧ್ಯತೆಯಿದೆ. (PC: Gettyimages)

4 / 8
ಗುಣಾಲನ್ ಕಮಲಿನಿ: ಭಾರತದ ಯುವ ಭರವಸೆಯ ಆಟಗಾರ್ತಿ ಗುಣಾಲನ್ ಕಮಿಲಿನಿ ಅವರು ಈ ಬಾರಿ 40 ಲಕ್ಷ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಕಮಲಿನಿ ಈ ಬಾರಿ ಹೊಸ ಟೀಮ್​ ಪಾಲಾಗುವ ಸಾಧ್ಯತೆಯಿದೆ.

5 / 8
ರಾಘವಿ ಬಿಸ್ತ್: ಭಾರತದ ಯುವ ಬ್ಯಾಟರ್ ರಾಘವಿ ಬಿಸ್ತ್ ಕೂಡ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಸೀಸನ್​​ನಲ್ಲಿ ಯುಪಿ ವಾರಿಯರ್ಸ್ ಪರ ಕಣಕ್ಕಿಳಿದಿದ್ದ ಬಿಸ್ತ್ ಅವರು ಈ ಬಾರಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. (PC: WPL)

6 / 8
ತೇಜಲ್ ಹಸಬ್ನಿಸ್: ಭಾರತೀಯ ಆಟಗಾರ್ತಿ ತೇಜಲ್ ಹಸಬ್ನಿಸ್ ಈ ಬಾರಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ತೇಜಲ್ ಈ ಬಾರಿ ಯಾವ ತಂಡದ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. (PC: GettyImages)

7 / 8
ಆಯುಷಿ ಸೋನಿ: ಭಾರತೀಯ ಬ್ಯಾಟರ್ ಆಯುಷಿ ಸೋನಿ ಕೂಡ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಸೀಸನ್​ನಲ್ಲಿ ಗುಜರಾತ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಆಯುಷಿ ಈ ಬಾರಿಯ ಹರಾಜು ಪಟ್ಟಿಯ ಸೆಟ್-1 ರಲ್ಲಿ ಸ್ಥಾನ ಪಡೆದಿದ್ದಾರೆ. (PC: WPL)

8 / 8
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us