WPL Auction: ಹರಾಜಿನಲ್ಲಿ ದುಬಾರಿ ಬೆಲೆ ಪಡೆಯಬಹುದಾದ ಅಂಡರ್-19 ಮಹಿಳಾ ವಿಶ್ವಕಪ್​ನ ಸ್ಟಾರ್ಸ್ ಇವರೇ

Updated By: ಪೃಥ್ವಿಶಂಕರ

Updated on: Feb 13, 2023 | 11:16 AM

WPL Auction: ಆಟಗಾರ್ತಿಯರ ಪಟ್ಟಿಯಲ್ಲಿ ಇತ್ತೀಚೆಗೆ ಅಂಡರ್-19 ಮಹಿಳಾ ವಿಶ್ವಕಪ್‌ನಲ್ಲಿ ಆಡಿದ ಆಟಗಾರ್ತಿಯರು ಸೇರಿದ್ದು, ಅವರಲ್ಲಿ ಅಧಿಕ ಬೆಲೆ ಪಡೆಯಬಹುದಾದ ಆಟಗಾರ್ತಿಯರ ಪಟ್ಟಿ ಇಲ್ಲಿದೆ.

1 / 6
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೊದಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಅನ್ನು ಆಯೋಜಿಸಲಿದೆ. ಈ ಲೀಗ್‌ನಲ್ಲಿ ಒಟ್ಟು ಐದು ತಂಡಗಳು ಆಡಲಿವೆ. ಇಂದು ಅಂದರೆ ಫೆಬ್ರವರಿ 13 ರಂದು ಈ ಲೀಗ್‌ನಲ್ಲಿ ಆಟಗಾರ್ತಿಯರ ಹರಾಜು ನಡೆಯಲಿದ್ದು, ಇದರಲ್ಲಿ ಒಟ್ಟು 409 ಆಟಗಾರ್ತಿಯರು ಬಿಡ್ ಆಗಲಿದ್ದಾರೆ. ಈ ಆಟಗಾರ್ತಿಯರ ಪಟ್ಟಿಯಲ್ಲಿ ಇತ್ತೀಚೆಗೆ ಅಂಡರ್-19 ಮಹಿಳಾ ವಿಶ್ವಕಪ್‌ನಲ್ಲಿ ಆಡಿದ ಆಟಗಾರ್ತಿಯರು ಸೇರಿದ್ದು, ಅವರಲ್ಲಿ ಅಧಿಕ ಬೆಲೆ ಪಡೆಯಬಹುದಾದ ಆಟಗಾರ್ತಿಯರ ಪಟ್ಟಿ ಇಲ್ಲಿದೆ.

2 / 6
ಈ ಪಟ್ಟಿಯಲ್ಲಿ ಮೊದಲ ಹೆಸರು ವಿಶ್ವ ಚಾಂಪಿಯನ್ ಭಾರತ ತಂಡದ ಅತ್ಯುತ್ತಮ ಬ್ಯಾಟರ್ ಶ್ವೇತಾ ಸೆಹ್ರಾವತ್. ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಶ್ವೇತಾ ಅತಿ ಹೆಚ್ಚು ರನ್ ಗಳಿಸಿದ್ದರು. ಅವರು ಒಟ್ಟು ಏಳು ಪಂದ್ಯಗಳಲ್ಲಿ 99 ರ ಸರಾಸರಿಯಲ್ಲಿ 297 ರನ್ ಗಳಿಸಿದರು, ಇದರಲ್ಲಿ ಮೂರು ಅರ್ಧ ಶತಕಗಳು ಸೇರಿದ್ದವು. ಶ್ವೇತಾ ಮೂಲ ಬೆಲೆ 10 ಲಕ್ಷ ರೂ. ಆಗಿದ್ದು, ಅವರಿಗಾಗಿ ತಂಡಗಳು ಮುಗಿಬೀಳಲಿವೆ.

3 / 6
ಅಂಡರ್-19 ವಿಶ್ವಕಪ್‌ನಲ್ಲಿ ಟೂರ್ನಮೆಂಟ್‌ನ ಆಟಗಾರ್ತಿಯಾಗಿದ್ದ ಇಂಗ್ಲೆಂಡ್ ನಾಯಕಿ ಗ್ರೇಸ್ ಸ್ಕ್ರಿವೆನ್ಸ್ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಈ ಆಲ್‌ರೌಂಡರ್​ಗೆ ಹೆಚ್ಚಿನ ಬೇಡಿಕೆ ಇದೆ. ಅಂಡರ್-19 ವಿಶ್ವಕಪ್‌ನಲ್ಲಿ ಅವರು ಒಟ್ಟು ಏಳು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದರು. ಅಲ್ಲದೆ ಶ್ವೇತಾ ನಂತರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ್ತಿ ಕೂಡ. ಗ್ರೇಸ್ ಸ್ಕ್ರಿವೆನ್ಸ್ ಏಳು ಪಂದ್ಯಗಳಲ್ಲಿ ಮೂರು ಅರ್ಧ ಶತಕಗಳು ಸೇರಿದಂತೆ 293 ರನ್ ಗಳಿಸಿದರು.

4 / 6
ಈ ಪಟ್ಟಿಯಲ್ಲಿ ಭಾರತದ ಪಾರ್ಶ್ವಿ ಚೋಪ್ರಾ 3ನೇ ಸ್ಥಾನದಲ್ಲಿದ್ದಾರೆ. ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪಾರ್ಶ್ವಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಆರು ಪಂದ್ಯಗಳಲ್ಲಿ 11 ವಿಕೆಟ್ ಪಡೆದರು. ಈ ಲೆಗ್ ಸ್ಪಿನ್ನರ್ ಇಂಗ್ಲೆಂಡ್ ವಿರುದ್ಧ ಆಡಿದ ಫೈನಲ್‌ನಲ್ಲಿ ಎರಡು ವಿಕೆಟ್ ಪಡೆದಿದ್ದು, ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.

5 / 6
ಮಹಿಳಾ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳು ಹೆಚ್ಚು ಯಶಸ್ವಿಯಾಗಿರುವುದು ಕಂಡುಬಂದಿದೆ. ಅಲ್ಲದೆ ಸ್ಪಿನ್ನರ್‌ಗಳು ಭಾರತದ ಪಿಚ್‌ಗಳಲ್ಲಿ ಪರಿಣಾಮಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಎಡಗೈ ಸ್ಪಿನ್ನರ್ ಮನ್ನತ್ ಕಶ್ಯಪ್​ಗೆ ಹೆಚ್ಚಿನ ಬೇಡಿಕೆ ಇದ್ದು, ಮನ್ನತ್ ಅಂಡರ್-19 ವಿಶ್ವಕಪ್‌ನಲ್ಲಿ ಆಡಿದ ಆರು ಪಂದ್ಯಗಳಲ್ಲಿ ಒಟ್ಟು 9 ವಿಕೆಟ್ ಪಡೆದರು.

6 / 6
ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಎರಡು ವಿಕೆಟ್ ಪಡೆದ ಭಾರತದ ಟೈಟಾಸ್ ಸಾಧು ಕೂಡ ಅಧಿಕ ಹಣ ಪಡೆಯುವವರ ಪಟ್ಟಿಯಲ್ಲಿದ್ದಾರೆ. ದೇಶಿ ಕ್ರಿಕೆಟ್​ನಲ್ಲಿ ಬಂಗಾಳದ ಪರವಾಗಿ ಆಡುವ ಅವರು ಅಂಡರ್-19 ವಿಶ್ವಕಪ್‌ನ ಆರು ಪಂದ್ಯಗಳಲ್ಲಿ ಆರು ವಿಕೆಟ್ಗಳನ್ನು ಪಡೆಯುವುದರೊಂದಿಗೆ ಪಂದ್ಯಾವಳಿಯಲ್ಲಿ ಭಾರತದ ಎರಡನೇ ಅತ್ಯಂತ ಎಕಾನಮಿಕಲ್ ಬೌಲರ್ ಆಗಿದ್ದರು.

Published On - 11:16 am, Mon, 13 February 23