WTC ಫೈನಲ್ ರೇಸ್ನಲ್ಲಿ 5 ತಂಡಗಳು: ಯಾರಿಗೆ ಚಾನ್ಸ್?
WTC 2023-25: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಒಟ್ಟು 9 ತಂಡಗಳಿವೆ. 2023 ರಿಂದ 2025 ರವರೆಗೆ ಆಡಿದ ಟೆಸ್ಟ್ ಪಂದ್ಯಗಳಿಗೆ ಅನುಗುಣವಾಗಿ ಇಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಈ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಲಿದೆ. ಅದರಂತೆ ಮುಂದಿನ ವರ್ಷ ಜೂನ್ 11 ರಿಂದ 15 ರವರಗೆ WTC ಫೈನಲ್ ಪಂದ್ಯ ಜರುಗಲಿದೆ.
1 / 6
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ರೇಸ್ನಲ್ಲಿ 5 ತಂಡಗಳು ಕಾಣಿಸಿಕೊಂಡಿವೆ. ಈ ಐದು ತಂಡಗಳು ಮುಂದಿನ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ WTC ಅಂಕ ಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಅದರಂತೆ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಲಿದೆ. ಹೀಗೆ ಫೈನಲ್ ಪ್ರವೇಶಿಸಲು ಯಾವೆಲ್ಲಾ ತಂಡಗಳು ಗರಿಷ್ಠ ಅಂಕಗಳನ್ನು ಪಡೆಯಬಹುದು ಎಂದು ನೋಡುವುದಾದರೆ...
2 / 6
ಭಾರತ: ಟೀಮ್ ಇಂಡಿಯಾ ಮುಂದಿನ 6 ಪಂದ್ಯಗಳಲ್ಲೂ ಜಯ ಸಾಧಿಸಿದರೆ ಫೈನಲ್ ಆಡುವುದು ಖಚಿತವಾಗಲಿದೆ. ಇಲ್ಲಿ ಭಾರತ ತಂಡವು ಒಂದು ಪಂದ್ಯವನ್ನು ನ್ಯೂಝಿಲೆಂಡ್ ವಿರುದ್ಧ ಆಡಿದರೆ, 5 ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಆಡಬೇಕಿದೆ. ಈ ಎಲ್ಲಾ ಪಂದ್ಯಗಳನ್ನು ಗೆದ್ದರೆ ಟೀಮ್ ಇಂಡಿಯಾ ಗರಿಷ್ಠ 74.56% ಅಂಕಗಳನ್ನು ಪಡೆದುಕೊಳ್ಳಲಿದೆ. ಈ ಮೂಲಕ ನೇರವಾಗಿ ಫೈನಲ್ಗೆ ಪ್ರವೇಶಿಸಬಹುದು.
3 / 6
ಆಸ್ಟ್ರೇಲಿಯಾ: ಆಸೀಸ್ ಪಡೆಗೂ ನೇರವಾಗಿ ಫೈನಲ್ಗೇರುವ ಅವಕಾಶವಿದೆ. ಭಾರತದ ವಿರುದ್ಧದ 5 ಹಾಗೂ ಶ್ರೀಲಂಕಾ ವಿರುದ್ಧದ 2 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸಿದರೆ, ಒಟ್ಟು 76.32% ಅಂಕಗಳನ್ನು ಪಡೆಯಲಿದೆ. ಈ ಮೂಲಕ ಅಗ್ರಸ್ಥಾನದೊಂದಿಗೆ ಫೈನಲ್ಗೆ ಪ್ರವೇಶಿಸಬಹುದು.
4 / 6
ಶ್ರೀಲಂಕಾ: ಲಂಕಾ ಪಡೆ ಫೈನಲ್ಗೆ ಪ್ರವೇಶಿಸಬೇಕಿದ್ದರೆ ಆಸ್ಟ್ರೇಲಿಯಾ ವಿರುದ್ಧದ 2 ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕು. ಹಾಗೆಯೇ ಸೌತ್ ಆಫ್ರಿಕಾ ತಂಡವನ್ನು 2-0 ಅಂತರದಿಂದ ಮಣಿಸಬೇಕು. ಹೀಗಾದರೆ ಲಂಕಾ ತಂಡದ ಗರಿಷ್ಠ ಅಂಕ 69.23% ಆಗಲಿದೆ. ಇಲ್ಲಿ ಲಂಕಾ ಪಡೆ ನೇರವಾಗಿ ಫೈನಲ್ಗೆ ಪ್ರವೇಶಿಸಲು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯ ಫಲಿತಾಂಶಗಳನ್ನು ಎದುರು ನೋಡಬೇಕಾಗಿ ಬರಬಹುದು.
5 / 6
ಸೌತ್ ಆಫ್ರಿಕಾ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ನಲ್ಲಿ ಸೌತ್ ಆಫ್ರಿಕಾ ತಂಡ ಕೂಡ ಕಾಣಿಸಿಕೊಂಡಿದೆ. ಸೌತ್ ಆಫ್ರಿಕಾ ತಂಡಕ್ಕೆ ಇನ್ನೂ ಐದು ಟೆಸ್ಟ್ ಪಂದ್ಯಗಳಿದ್ದು, ಇದರಲ್ಲಿ ಬಾಂಗ್ಲಾದೇಶ್ ವಿರುದ್ಧ ಒಂದು, ಶ್ರೀಲಂಕಾ ಹಾಗೂ ಪಾಕಿಸ್ತಾನ್ ವಿರುದ್ಧ ತಲಾ 2 ಟೆಸ್ಟ್ ಪಂದ್ಯಗಳನ್ನಾಡಬೇಕಿದೆ. ಈ ಎಲ್ಲಾ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಸೌತ್ ಆಫ್ರಿಕಾ ಗರಿಷ್ಠ 69.44% ಅಂಕಗಳೊಂದಿಗೆ ಫೈನಲ್ಗೇರಬಹುದು. ಆದರೆ ಇಲ್ಲಿ ಸೌತ್ ಆಫ್ರಿಕಾ ತಂಡದ ಫೈನಲ್ ಎಂಟ್ರಿಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯ ಫಲಿತಾಂಶ ನಿರ್ಣಾಯಕವಾಗಲಿದೆ.
6 / 6
ನ್ಯೂಝಿಲೆಂಡ್: ಕಿವೀಸ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಲು ಮುಂದಿನ ಪಂದ್ಯಗಳು ನಿರ್ಣಾಯಕ. ಏಕೆಂದರೆ ನ್ಯೂಝಿಲೆಂಡ್ಗೆ ಇನ್ನುಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಇದರಲ್ಲಿ ಭಾರತದ ವಿರುದ್ಧ ಒಂದು ಪಂದ್ಯವಿದ್ದರೆ, ಮೂರು ಮ್ಯಾಚ್ಗಳನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ. ಈ ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ ನ್ಯೂಝಿಲೆಂಡ್ ತಂಡದ ಗರಿಷ್ಠ ಅಂಕ 64.29% ಆಗಲಿದೆ. ಅತ್ತ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಲ್ಲಿ ಒಂದು ಟೀಮ್ 64% ಅಂಕಗಳನ್ನು ಪಡೆದುಕೊಂಡರೆ ನ್ಯೂಝಿಲೆಂಡ್ 2ನೇ ಸ್ಥಾನಕ್ಕೇರುವ ಮೂಲಕ ಫೈನಲ್ ಆಡಬಹುದು.