IND vs AUS, WTC 2023 Final: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಡ್ರಾ ಆದರೆ ಯಾವ ತಂಡಕ್ಕೆ ಪ್ರಶಸ್ತಿ ಗೊತ್ತೇ?
WTC Final: ಐದು ದಿನಗಳ ಕಾಲ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾದರು ಈ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡರೆ ಜಯ ಯಾರಿಗೆಂದು ಘೋಷಿಸಲಾಗುತ್ತದೆ?, ಪ್ರಶಸ್ತಿ ಯಾರಿಗೆ ನೀಡಲಾಗುತ್ತದೆ? ಎಂಬ ಮಾಹಿತಿ ಇಲ್ಲಿದೆ ಓದಿ.
1 / 7
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಹುನಿರೀಕ್ಷಿತ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ 7 ರಿಂದ 11 ರ ವರೆಗೆ ಈ ಮಹತ್ವದ ಪಂದ್ಯ ನಡೆಯಲಿದ್ದು, ಉಭಯ ತಂಡಗಳು ತಯಾರಾಗುತ್ತಿದೆ.
2 / 7
ಲಂಡನ್ನ ಪ್ರತಿಷ್ಠಿತ ಕೆನ್ನಿಂಗ್ಟನ್ ಓವಲ್ ಮೈದಾನ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಟೀಮ್ ಇಂಡಿಯಾದ ಎಲ್ಲ ಆಟಗಾರರು ಲಂಡನ್ನ ಅರುಂಡೆಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ನಲ್ಲಿ ಸೇರಿದ್ದು ಅಭ್ಯಾಸ ನಡೆಸುತ್ತಿದ್ದಾರೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
3 / 7
ಐದು ದಿನಗಳ ಕಾಲ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾದರು ಈ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡರೆ ಜಯ ಯಾರಿಗೆಂದು ಘೋಷಿಸಲಾಗುತ್ತದೆ?, ಪ್ರಶಸ್ತಿ ಯಾರಿಗೆ ನೀಡಲಾಗುತ್ತದೆ? ಎಂಬ ಮಾಹಿತಿ ಇಲ್ಲಿದೆ ಓದಿ.
4 / 7
WTC 2021-23 ಪಾಯಿಂಟ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಹಾಗಂತ ಒಂದುವೇಳೆ ಪಂದ್ಯ ಡ್ರಾಗೊಂಡರೆ ಇಲ್ಲಿ ಪ್ರಶಸ್ತಿಯನ್ನು ಹೆಚ್ಚು ಪಾಯಿಂಟ್ ಪಡೆದಿರುವ ಆಸ್ಟ್ರೇಲಿಯಾ ತಂಡಕ್ಕೆ ನೀಡಲಾಗುವುದಿಲ್ಲ.
5 / 7
ಐಸಿಸಿ ನಿಯಮಗಳ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ, ಎರಡೂ ತಂಡಗಳನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.
6 / 7
ಒಂದುವೇಳೆ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಕಳೆದ ವರ್ಷದ ಆವೃತ್ತಿಯಂತೆ, ಮಳೆ ಬಂದ ಸಮಯವನ್ನು ಸರಿದೂಗಿಸಲು ಮೀಸಲು ದಿನವನ್ನು ಇರಿಸಲಾಗಿದೆ. ಆದರೆ ಇದಕ್ಕೂ ನಿಯಮವಿದೆ. ಪ್ರತಿ ಟೆಸ್ಟ್‌ನ ಆಟದ ಸಮಯವು 30 ಗಂಟೆಗಳು. ಅಂದರೆ ದಿನಕ್ಕೆ ಆರು ಗಂಟೆ ಅಥವಾ ದಿನಕ್ಕೆ 90 ಓವರ್‌ಗಳು ಇರುತ್ತದೆ. ನಿಗದಿತ ಆರು ಗಂಟೆಗಳ ಸಮಯವನ್ನು ಪೂರೈಸದಿದ್ದರೆ ಅಥವಾ ದಿನಕ್ಕೆ 90 ಓವರ್‌ಗಳ ಪೂರ್ಣ ಕೋಟಾವನ್ನು ಪೂರ್ಣಗೊಳಿಸದಿದ್ದರೆ ಮಾತ್ರ ಮೀಸಲು ದಿನವು ಜಾರಿಗೆ ಬರುತ್ತದೆ.
7 / 7
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ಟೆಲಿವಿಷನ್ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್‌ನಲ್ಲಿ ನೋಡಬಹುದು.