WTC Final 2023: ಹೊಸ ಟೆಸ್ಟ್ ಜರ್ಸಿಯಲ್ಲಿ ಮಿರ ಮಿರ ಮಿಂಚಿದ ರೋಹಿತ್ ಪಡೆ; ಫೋಟೋ ನೋಡಿ
WTC Final 2023: ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯ ಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಈ ಹೊಸ ಜರ್ಸಿಯನ್ನು ತೊಟ್ಟು ಭಿನ್ನಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ. ಅದರ ಝಲಕ್ ಇಲ್ಲಿದೆ.
1 / 16
ಟೀಂ ಇಂಡಿಯಾದ ಕಿಟ್ ಹಾಗೂ ಜರ್ಸಿ ಪ್ರಾಯೋಜಕತ್ವವನ್ನು ಅಡಿಡಾಸ್ ವಹಿಸಿಕೊಂಡಿದ್ದು, ಇದೀಗ ಈ ಸಂಸ್ಥೆಯ ಲೋಗೋ ಇರುವ ಜರ್ಸಿಯನ್ನು ತೊಟ್ಟು ಮುಂದಿನ ನಾಲ್ಕು ವರ್ಷಗಳ ಕಾಲ ಟೀಂ ಇಂಡಿಯಾ ಆಟಗಾರರು ಆಡಲಿದ್ದಾರೆ. ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯ ಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಈ ಹೊಸ ಜರ್ಸಿಯನ್ನು ತೊಟ್ಟು ಭಿನ್ನಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ. ಅದರ ಝಲಕ್ ಇಲ್ಲಿದೆ.
2 / 16
ಟೀಂ ಇಂಡಿಯಾದ ನಾಯಕತ್ವವಹಿಸಿಕೊಂಡ ಬಳಿಕ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ತಂಡವನ್ನು ರೋಹಿತ್ ಮುನ್ನಡೆಸಲ್ಲಿದ್ದಾರೆ. ಇನ್ನು ಓವಲ್ ಮೈದಾನದಲ್ಲಿ ರೋಹಿತ್, 127 ರನ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.
3 / 16
ರೋಹಿತ್ ಶರ್ಮಾ ಜೊತೆ ಮತ್ತೊಬ್ಬ ಆರಂಭಿಕರಾಗಿ ಕಣಕ್ಕಿಳಿಯುವ ಜವಬ್ದಾರಿ ಹೊತ್ತಿರುವ ಗಿಲ್ ಮೇಲೆ ಅಪಾರ ನಂಬಿಕೆ ಇಡಲಾಗಿದೆ. ಏಕೆಂದರೆ ಇತ್ತೀಚೆಗೆ ಮುಗಿದ ಐಪಿಎಲ್ನಲ್ಲಿ ಗಿಲ್, ಅತ್ಯಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು.
4 / 16
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಪೂಜಾರ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪೂಜಾರ ಇದುವರೆಗೆ ಆಸೀಸ್ ವಿರುದ್ಧ ಆಡಿರುವ 24 ಟೆಸ್ಟ್‌ಗಳ 43 ಇನ್ನಿಂಗ್ಸ್‌ಗಳಲ್ಲಿ 2033 ರನ್ ಬಾರಿಸಿದ್ದಾರೆ.
5 / 16
ಆಸ್ಟ್ರೇಲಿಯಾ ವಿರುದ್ಧದ 24 ಟೆಸ್ಟ್‌ಗಳ 42 ಇನ್ನಿಂಗ್ಸ್‌ಗಳಲ್ಲಿ 1979 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಸದ್ಯಕ್ಕೆ ರನ್ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ.
6 / 16
ಭಾರತ ಪರ 82 ಟೆಸ್ಟ್ ಪಂದ್ಯಗಳನ್ನಾಡಿರುವ ರಹಾನೆ 4931 ರನ್ ಕಲೆಹಾಕಿದ್ದಾರೆ. ಅಲ್ಲದೆ ರಹಾನೆ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ. ರಹಾನೆ ನಾಯಕತ್ವದಲ್ಲಿ ಟೀಂ ಇಂಡಿಯಾ 2021 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿ ಅಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು.
7 / 16
ಮೊದಲ ಬಾರಿಗೆ ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಇಶಾನ್ ಕಿಶನ್ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕರೆ, ಟೀಂ ಇಂಡಿಯಾ ಪರ 3 ಮಾದರಿಗಳಲ್ಲೂ ಕಿಶನ್ ಆಡಿದ್ದಂತ್ತಾಗುತ್ತದೆ.
8 / 16
ಇನ್ನು ಎರಡನೇ ವಿಕೆಟ್ ಕೀಪರ್ ಆಗಿ ಟೀಂ ಇಂಡಿಯಾದಲ್ಲಿ ಆಯ್ಕೆಯಾಗಿರುವ ಕೆಎಸ್ ಭರತ್ ಕೂಡ ತಂಡದಲ್ಲಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ.
9 / 16
ಟೀಂ ಇಂಡಿಯಾದ ಸ್ಪಿನ್ ಆಲ್ರೌಂಡರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜಡೇಜಾಗೆ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಜಡೇಜಾ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ತಂಡಕ್ಕೆ ನೆರವಾಗಬಲ್ಲರು.
10 / 16
ವೇಗಿಗಳಿಗೆ ಹೆಚ್ಚಾಗಿ ನೆರವಾಗುವ ಇಂಗ್ಲೆಂಡ್ ಪಿಚ್ಗಳಲ್ಲಿ ಟೀಂ ಇಂಡಿಯಾ ಇಬ್ಬರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಲು ನಿರ್ಧರಿಸಿದರೆ, ಜಡೇಜಾ ಜೊತೆ ಅಶ್ವಿನ್ ಕೂಡ ತಂಡದಲ್ಲಿ ಆಡಲಿದ್ದಾರೆ.
11 / 16
ಮೂರನೇ ಸ್ಪಿನ್ ಆಲ್ರೌಂಡರ್ ಆಗಿ ಅಕ್ಷರ್ ಕೂಡ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ.
12 / 16
ವೇಗದ ಬೌಲಿಂಗ್ ದಾಳಿಯ ಹೊಣೆ ಹೊತ್ತಿರುವ ಶಮಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದಕ್ಕೆ ಕಾರಣವೂ ಇದ್ದು, ಶಮಿ ಈ ಬಾರಿಯ ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ತೆಗೆದು ಪರ್ಪಲ್ ಕ್ಯಾಪ್ ಕೂಡ ಗೆದ್ದಿದ್ದರು.
13 / 16
ಶಮಿ ಜೊತೆಗೆ ಮೊಹಮ್ಮದ್ ಸಿರಾಜ್ ಕೂಡ ವೇಗದ ಬೌಲಿಂಗ್ ವಿಭಾಗದ ಜವಬ್ದಾರಿ ಹೊರಲಿದ್ದಾರೆ. ಸಿರಾಜ್ ಟೀಂ ಇಂಡಿಯಾದ 2ನೇ ಬೌಲರ್ ಆಗಿ ಕಣಕ್ಕಿಳಿಯುವುದು ಖಚಿತ.
14 / 16
3ನೇ ಬೌಲರ್ ಹಾಗೂ ಬೌಲಿಂಗ್ ಆಲ್ರೌಂಡರ್ ಆಗಿ ಶಾರ್ದೂಲ್ ಠಾಕೂರ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.
15 / 16
ಓವಲ್ ಮೈದಾನದಲ್ಲಿ ಉತ್ತಮ ಬೌಲಿಂಗ್ ದಾಖಲೆ ಹೊಂದಿರುವ ಉಮೇಶ್ ಯಾದವ್ಗೆ ಕಡೆ ಕ್ಷಣದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕರೂ ಸಿಗಬಹುದು.
16 / 16
ಇಂಜುರಿಯಿಂದಾಗಿ ಐಪಿಎಲ್ನಿಂದ ಹೊರಬಿದ್ದಿದ್ದ ಜಯ್ದೇವ್ ಉನದ್ಕಟ್ ಕೂಡ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
Published On - 1:45 pm, Mon, 5 June 23