WTC Final 2023: 71/4..! ಆಸೀಸ್ ಬೌಲಿಂಗ್ ದಾಳಿಗೆ ಪತರುಗುಟ್ಟಿದ ವಿಶ್ವ ಕ್ರಿಕೆಟ್ನ ಸೂಪರ್ ಸ್ಟಾರ್ಸ್..!
WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆರಂಭಕ್ಕೂ ಮುನ್ನ ಅಭಿಮಾನಿಗಳು ಹಾಗೂ ಕ್ರಿಕೆಟ್ ದಿಗ್ಗಜರು ಟೀಂ ಇಂಡಿಯಾದ ಮೇಲೆ ಎಷ್ಟೆಲ್ಲ ನಿರೀಕ್ಷೆ ಇಟ್ಟಿದ್ದರೋ ಅದೆಲ್ಲ ಹುಸಿಯಾಗಿದೆ.
1 / 7
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆರಂಭಕ್ಕೂ ಮುನ್ನ ಅಭಿಮಾನಿಗಳು ಹಾಗೂ ಕ್ರಿಕೆಟ್ ದಿಗ್ಗಜರು ಟೀಂ ಇಂಡಿಯಾದ ಮೇಲೆ ಎಷ್ಟೆಲ್ಲ ನಿರೀಕ್ಷೆ ಇಟ್ಟಿದ್ದರೋ ಅದೆಲ್ಲ ಹುಸಿಯಾಗಿದೆ. ಆಸೀಸ್ ಬೌಲರ್ಗಳ ದಾಳಿಗೆ ನಲುಗಿದ ಟೀಂ ಇಂಡಿಯಾದ ದಿಗ್ಗಜ ಬ್ಯಾಟರ್ಗಳು ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
2 / 7
ಆಸೀಸ್ ನೀಡಿರುವ 469 ರನ್ಗಳ ಗುರಿಯನ್ನು ಬೆನ್ನಟ್ಟಿರುವ ಭಾರತದ ಇನ್ನಿಂಗ್ಸ್ ಆಸೀಸ್ ಬೌಲರ್ಗಳ ಮುಂದೆ ತತ್ತರಿಸಿ ಹೋಗಿದೆ. ಸದ್ಯ ತಮ್ಮ ಅದ್ಭುತ ಕ್ರಿಕೆಟ್ ಪ್ರತಿಭೆಯಿಂದ ವಿಶ್ವ ಕ್ರಿಕೆಟ್ನಲ್ಲಿ ಮನೆ ಮಾತಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರು ಕೇವಲ ಎರಡಂಕ್ಕಿಗೆ ವಿಕೆಟ್ ಒಪ್ಪಿಸಿ, ಪೆವಿಲಿಯನ್ ಸೇರಿಕೊಂಡಿದ್ದಾರೆ.
3 / 7
ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಹಾಗೂ ಗಿಲ್ ಮೊದಲ ಕೆಲವು ಓವರ್ಗಳಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಾ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡುವ ಭರವಸೆ ಹುಟ್ಟುಹಾಕಿದರಾದರೂ ಆ ಭರವಸೆಯನ್ನು ದೀರ್ಘಕಾಲ ಉಳಿಸಿಕೊಳ್ಳುವಲ್ಲಿ ಎಡವಿದರು.
4 / 7
ನಾಯಕನಾಗಿ ತಂಡದ ಇನ್ನಿಂಗ್ಸ್ ನಿಭಾಯಿಸಬೇಕಾದ ಜವಬ್ದಾರಿವಹಿಸಿಕೊಳ್ಳಬೇಕಾಗಿದ್ದ ರೋಹಿತ್ ಶರ್ಮಾ ಕೇವಲ 15 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಎಸೆದ ಇನ್ಸ್ವಿಂಗ್ ಎಸೆತವನ್ನು ಅರ್ಥಮಾಡಿಕೊಳ್ಳದ ರೋಹಿತ್ ಕ್ಲಿನ್ ಎಲ್ಬಿಗೆ ಬಲಿಯಾದರು. ಹೀಗಾಗಿ ಕೇವಲ 30 ರನ್ಗಳಿಗೆ ಭಾರತದ ಮೊದಲ ವಿಕೆಟ್ ಪತನವಾಯಿತು.
5 / 7
ಇನ್ನು ಈ ಆವೃತ್ತಿಯ ಐಪಿಎಲ್ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಅತ್ಯಧಿಕ ರನ್ ಬಾರಿಸುವುದರೊಂದಿಗೆ ಅತ್ಯಧಿಕ ರನ್ ಕಲೆಹಾಕುವುದರೊಂದಿಗೆ ಆರೆಂಜ್ ಕ್ಯಾಪ್ ಗೆದ್ದಿದ್ದ ಶುಭ್ಮನ್ ಗಿಲ್ ಕೂಡ ಈ ಪಂದ್ಯದಲ್ಲಿ ವಿಶೇಷವಾದುದ್ದನ್ನು ಮಾಡಲಿಲ್ಲ. ಈ ಪಂದ್ಯಕ್ಕೂ ಮುನ್ನ ಗಿಲ್ ಮೇಲೆ ಅಪಾರ ನಿರೀಕ್ಷೆ ಇಡಲಾಗಿತ್ತು. ಆದರೆ ಈ ನಿರೀಕ್ಷೆಯನ್ನು ಹುಸಿಗೊಳಿಸಿದ ಗಿಲ್, ಬೋಲ್ಯಾಂಡ್ ಎಸೆದ ಇನ್ಸ್ವಿಂಗ್ ಎಸೆತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಕೇವಲ 13 ರನ್ಗಳಿಗೆ ಕ್ಲೀನ್ ಬೌಲ್ಡ್ ಆದರು.
6 / 7
ಆರಂಭಿಕರಿಬ್ಬರ ವಿಕೆಟ್ ಬಳಿಕ ಇನ್ನಿಂಗ್ಸ್ ಜವಬ್ದಾರಿ ಹೊರಬೇಕಾಗಿದ್ದ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಕೂಡ ಸೈಲೆಂಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಪೂಜಾರ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಏಕೆಂದರೆ, ಭಾರತದ ಉಳಿದ ಆಟಗಾರರು ಐಪಿಎಲ್ ಆಡುತ್ತಿದ್ದರೆ, ಪೂಜಾರ ಮಾತ್ರ ಈ ಫೈನಲ್ ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡಲು ಆರಂಭಿಸಿದ್ದರು. ಕೌಂಟಿ ಕ್ರಿಕೆಟ್ನಲ್ಲಿ ರನ್ಗಳ ಶಿಖರ ಕಟ್ಟಿದ ಪೂಜಾರ ಆಸೀಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ 14 ರನ್ಗಳಿಗೆ ಪೆವಿಲಿಯನ್ ಅತ್ತ ಮುಖ ಮಾಡಿದರು.
7 / 7
ಇನ್ನು ಮಾಜಿ ನಾಯಕ ಕೊಹ್ಲಿ ಕೂಡ ಈ ಮೂವರಿಗಿಂತ ವಿಭಿನ್ನವಾಗಿಲ್ಲ. ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುವ ಚಾಣಾಕ್ಷತೆ ಹೊಂದಿದ್ದ ಕೊಹ್ಲಿ ಕೂಡ ಕೇವಲ 14 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಈ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸುತ್ತಾರೆ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಏಕೆಂದರೆ ಐಪಿಎಲ್ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕದೊಂದಿಗೆ ಕೊಹ್ಲಿ ಈ ಫೈನಲ್ಗೆ ಎಂಟ್ರಿಕೊಟ್ಟಿದ್ದರು. ಆದರೆ ಈ ಪಂದ್ಯದಲ್ಲಿ ಕೊಹ್ಲಿಗೆ ವಿಶೇಷವಾಗಿ ಏನ್ನನ್ನು ಮಾಡಲು ಸಾಧ್ಯವಾಗಲಿಲ್ಲ.