Shubman Gill Controversial catch: ಐಪಿಎಲ್ ಉದಾಹರಣೆ ನೀಡಿ ಐಸಿಸಿ ವಿರುದ್ಧ ಗರಂ ಆದ ರೋಹಿತ್ ಶರ್ಮಾ!

|

Updated on: Jun 12, 2023 | 8:19 AM

Shubman Gill Controversial catch: ಮೊದಲನೇಯದಾಗಿ ಡಬ್ಲ್ಯುಟಿಸಿ ಫೈನಲ್ ಆಯೋಜನೆ, ಆತಿಥ್ಯದ ಬಗ್ಗೆ ಅಸಮಾಧಾನ ಹೊರಹಾಕಿರುವ ರೋಹಿತ್ ಆ ಬಳಿಕ ಈ ಪಂದ್ಯದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಶುಭ್​ಮನ್ ಗಿಲ್ ಅವರ ವಿವಾದಾತ್ಮಕ ಕ್ಯಾಚ್ ಕುರಿತು ಐಸಿಸಿ ವಿರುದ್ಧ ಗರಂ ಆಗಿದ್ದಾರೆ.

1 / 7
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಭಾರತ ಕಾಲಿ ಕೈಯಲ್ಲಿ ತವರಿಗೆ ವಾಪಸ್ಸಾಗುತ್ತಿದೆ. ಟೆಸ್ಟ್ ಆರಂಭವಾದ ಮೊದಲ ದಿನದಿಂದಲೂ ಆಸೀಸ್ ವಿರುದ್ಧ ಹಿನ್ನಡೆ ಅನುಭವಿಸಿದ್ದ ಭಾರತದ ಸೋಲಿಗೆ ಇದೀಗ ನಾಯಕ ರೋಹಿತ್ ಶರ್ಮಾ ಐಸಿಸಿಯನ್ನು ನೇರ ಹೊಣೆ ಮಾಡುತ್ತಿದ್ದಾರೆ.

2 / 7
ಮೊದಲನೇಯದಾಗಿ ಡಬ್ಲ್ಯುಟಿಸಿ ಫೈನಲ್ ಆಯೋಜನೆ, ಆತಿಥ್ಯದ ಬಗ್ಗೆ ಅಸಮಾಧಾನ ಹೊರಹಾಕಿರುವ ರೋಹಿತ್ ಆ ಬಳಿಕ ಈ ಪಂದ್ಯದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಶುಭ್​ಮನ್ ಗಿಲ್ ಅವರ ವಿವಾದಾತ್ಮಕ ಕ್ಯಾಚ್ ಕುರಿತು ಐಸಿಸಿ ವಿರುದ್ಧ ಗರಂ ಆಗಿದ್ದಾರೆ.

3 / 7
ಆಸ್ಟ್ರೇಲಿಯಾ ನೀಡಿದ 444 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಬಿರುಸಿನ ಆರಂಭ ನೀಡಿದರು. ಇವರಿಬ್ಬರ ನಡುವೆ ಉತ್ತಮ ಜೊತೆಯಾಟವಿದ್ದಂತೆ ತೋರುತ್ತಿತ್ತು. ಆದರೆ ನಂತರ ಗಿಲ್ ಅಂಪೈರ್ ಅವರ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಇದು ಟೀಂ ಇಂಡಿಯಾ ಫ್ಯಾನ್ಸ್ ಹಾಗೂ ನಾಯಕ ರೋಹಿತ್​ ಅವರ ಕಣ್ಣನ್ನು ಕೆಂಪಗಾಗಿಸಿದೆ.

4 / 7
ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಗಿಲ್ ಬ್ಯಾಟ್ ಸವರಿ ಚೆಂಡು ಸ್ಲಿಪ್​ನತ್ತ ಸಾಗಿತು. ತಕ್ಷಣವೇ ಅತ್ಯುತ್ತಮ ಡೈವಿಂಗ್ ಮೂಲಕ ಕ್ಯಾಮರೋನ್ ಗ್ರೀನ್ ಎಡಗೈಯಲ್ಲಿ ಕ್ಯಾಚ್ ಹಿಡಿದರು. ಇದಾಗ್ಯೂ ಫೀಲ್ಡ್ ಅಂಪೈರ್ ಕ್ಯಾಚ್ ಅನ್ನು ಪರಿಶೀಲಿಸುವಂತೆ ಮೂರನೇ ಅಂಪೈರ್​ಗೆ ಮನವಿ ಮಾಡಿದರು. ಹಲವು ಬಾರಿ ರೀಪ್ಲೆ ಮಾಡಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ರೀಪ್ಲೆ ವೇಳೆಯಲ್ಲೇ ಚೆಂಡು ಮೈದಾನಕ್ಕೆ ತಾಗಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇದಾಗ್ಯೂ ಮೂರನೇ ಅಂಪೈರ್ ಔಟ್ ಎಂದಿರುವುದು ಅಚ್ಚರಿಗೆ ಕಾರಣವಾಯಿತು.

5 / 7
ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದರು. ಟಿವಿಯಲ್ಲಿ ಪುನಃ ಪರಿಶೀಲಿಸಿದ ಬಳಿಕ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ನಾಯಕ ರೋಹಿತ್ ಅಸಮಾಧಾನ ಹೊರಹಾಕಿದ್ದಾರೆ.

6 / 7
ಪಂದ್ಯ ಸೋತ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ, ತುಂಬಾ ನಿರಾಸೆಯಾಗಿದೆ. ಮೂರನೇ ಅಂಪೈರ್ ಹೆಚ್ಚು ರಿವ್ಯೂವ್​ಗಳನ್ನು ನೋಡಬೇಕಾಗಿತ್ತು. ಆದರೆ ಮೂರನೇ ಅಂಪೈರ್ ನಿರ್ಧಾರವನ್ನು ಬಹಳ ಬೇಗನೆ ತೆಗೆದುಕೊಂಡರು.

7 / 7
ಅಲ್ಲದೆ ಇಂತಹ ಫೈನಲ್‌ ಪಂದ್ಯಗಳಲ್ಲಿ ಕ್ಯಾಮೆರಾ ಆ್ಯಂಗಲ್‌ಗಳು ಹೆಚ್ಚು ಇರಬೇಕು. ಐಪಿಎಲ್‌ನಲ್ಲಿ 10 ಕ್ಕೂ ಹೆಚ್ಚು ಕ್ಯಾಮೆರಾ ಆ್ಯಂಗಲ್‌ಗಳಿರುತ್ತವೆ. ಆದರೆ ಐಸಿಸಿ ಈವೆಂಟ್‌ಗಳಲ್ಲಿ ಅಷ್ಟು ವ್ಯವಸ್ಥೆ ಮಾಡಲಾಗಿಲ್ಲ ಎಂದು ಐಸಿಸಿ ವಿರುದ್ಧ ರೋಹಿತ್ ಅಸಮಾಧಾನ ಹೊರಹಾಕಿದ್ದಾರೆ.