WTC Final: ಭಾರತ ಡಬ್ಲ್ಯುಟಿಸಿ ಫೈನಲ್ ಆಡಬೇಕೆಂದರೆ ಪಾಕಿಸ್ತಾನ ಗೆಲ್ಲಲೇಬೇಕು

|

Updated on: Dec 09, 2024 | 6:47 PM

WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಪೈಪೋಟಿ ನಡೆಸುತ್ತಿವೆ. ದಕ್ಷಿಣ ಆಫ್ರಿಕಾ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚಿದೆ. ಭಾರತದ ಫೈನಲ್‌ ಪ್ರವೇಶ ಪಾಕಿಸ್ತಾನದ ಪ್ರದರ್ಶನವನ್ನು ಅವಲಂಬಿಸಿದೆ. ಆಸ್ಟ್ರೇಲಿಯಾ ಕೂಡ ಫೈನಲ್‌ಗೆ ತಲುಪಲು ಪ್ರಬಲ ಸ್ಪರ್ಧಿಯಾಗಿದೆ.

1 / 10
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ಗೇರಲು 4 ತಂಡಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಸತತ ಮೂರನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್​ ಆಡುವ ಇರಾದೆಯಲ್ಲಿರುವ ಟೀಂ ಇಂಡಿಯಾ ಕೂಡ ಈ 4 ತಂಡಗಳ ಪೈಕಿ ಒಂದಾಗಿದೆ. ಉಳಿದಂತೆ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಈ ರೇಸ್​ನಲ್ಲಿವೆ.

2 / 10
ಡಬ್ಲ್ಯುಟಿಸಿ ಮೂರನೇ ಆವೃತ್ತಿಯ ಬಾಗವಾಗಿರುವ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಗೆಲುವು ಟೀಂ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದೆ. ಆದರೆ ಈ ಸರಣಿಯ ಎರಡನೇ ಪಂದ್ಯದಲ್ಲಿ ಸೋತಿರುವ ಭಾರತಕ್ಕೆ ಇದೀಗ ಫೈನಲ್​ ರೇಸ್​ನಿಂದ ಹೊರಬೀಳುವ ಆತಂಕ ಎದುರಾಗಿದೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ತಂಡದ ವಿರುದ್ಧ ಸರಣಿ ಗೆದ್ದಿರುವುದು ಟೀಂ ಇಂಡಿಯಾವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

3 / 10
ವಾಸ್ತವವಾಗಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವೆ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆತಿಥೇಯ ಆಫ್ರಿಕಾ ತಂಡ ಕ್ಲೀನ್ ಸ್ವೀಪ್ ಮಾಡಿದೆ. ಇದರಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್‌ ಪಟ್ಟಿಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಅದರ ಪ್ರಕಾರ ದಕ್ಷಿಣ ಆಫ್ರಿಕಾ ತಂಡ ಇದೀಗ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

4 / 10
ಇತ್ತ ಟೀಂ ಇಂಡಿಯಾ ವಿರುದ್ಧ 2ನೇ ಟೆಸ್ಟ್ ಪಂದ್ಯವನ್ನು ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದ ಆಸ್ಟ್ರೇಲಿಯಾ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದೆ. ಭಾರತ ತಂಡ ಮೂರನೇ ಸ್ಥಾನದಲ್ಲಿದೆ. ಇದೀಗ ಈ ಮೂರೂ ತಂಡಗಳ ನಡುವೆ ಫೈನಲ್ ತಲುಪುವ ಪೈಪೋಟಿ ತೀವ್ರಗೊಂಡಿದೆ. ಆದರೆ ಈ ಎರಡು ತಂಡಗಳಿಗಿಂತ ದಕ್ಷಿಣ ಆಫ್ರಿಕಾಕ್ಕೆ ಫೈನಲ್ ತಲುಪಲು ಹೆಚ್ಚಿನ ಅವಕಾಶಗಳಿವೆ.

5 / 10
ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್‌ನ ಟಾಪ್-2 ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಸದ್ಯ ದಕ್ಷಿಣ ಆಫ್ರಿಕಾ 63.33 ಗೆಲುವಿನ ಶೇಕಡಾವಾರು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 60.71 ಗೆಲುವಿನ ಶೇಕಡಾವಾರು ಅಂಕಗಳನ್ನು ಹೊಂದಿದೆ ಮತ್ತು ಭಾರತವು 57.29 ಶೇಕಡಾ ಅಂಕಗಳನ್ನು ಹೊಂದಿದೆ.

6 / 10
ಡಬ್ಲ್ಯುಟಿಸಿಯ ಮೂರನೇ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಇನ್ನ 2 ಟೆಸ್ಟ್ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಈ ಎರಡು ಪಂದ್ಯಗಳಲ್ಲಿ ಆಫ್ರಿಕಾ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ, ಆಫ್ರಿಕಾ ತಂಡದ ಗೆಲುವಿನ ಶೇಕಡಾವಾರು ಅಂಕಗಳಲ್ಲಿ ಹೆಚ್ಚಿನ ಕುಸಿತ ಕಂಡುಬರುವುದಿಲ್ಲ.

7 / 10
ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ 2-0 ಅಂತರದಲ್ಲಿ ಸರಣಿ ಗೆದ್ದರೆ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಅದೇ ಹೊತ್ತಿಗೆ 1-0 ಅಂತರದಲ್ಲಿ ಗೆದ್ದರೂ ದಕ್ಷಿಣ ಆಫ್ರಿಕಾದ ಫೈನಲ್‌ ಟಿಕೆಟ್‌ ಖಚಿತವಾಗಲಿದೆ. ಇದಲ್ಲದೇ ಸರಣಿ 1-1 ಸಮಬಲದಲ್ಲಿ ಅಂತ್ಯಗೊಂಡರೂ ಫೈನಲ್‌ಗೆ ತಲುಪಲು ದೊಡ್ಡ ಸ್ಪರ್ಧಿಯಾಗಲಿದೆ.

8 / 10
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಸರಣಿಯನ್ನು 0-2 ರಿಂದ ಕಳೆದುಕೊಂಡರೂ ಫೈನಲ್‌ನ ರೇಸ್‌ನಲ್ಲಿ ಉಳಿಯಲಿದೆ. ಆದರೂ ಅದು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಆಫ್ರಿಕಾ ಅವಲಂಬಿತವಾಗಿರುವ ತಂಡಗಳ ಪೈಕಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳಿವೆ.

9 / 10
ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಉಳಿದ ಮೂರು ಪಂದ್ಯಗಳಲ್ಲಿ ಭಾರತ ಗೆದ್ದರೆ ಡಬ್ಲ್ಯುಟಿಸಿ ಫೈನಲ್​ಗೇರುವುದು ಖಚಿತ. ಆದರೆ ಟೀಂ ಇಂಡಿಯಾ ಒಂದು ಪಂದ್ಯ ಸೋತರೂ ಅದಕ್ಕೆ ಡಬ್ಲ್ಯುಟಿಸಿ ಫೈನಲ್ ಹಾದಿ ಮುಚ್ಚಲಿದೆ.

10 / 10
ಹೀಗಾಗಿ ಟೀಂ ಇಂಡಿಯಾದ ಭವಿಷ್ಯ ಪಾಕಿಸ್ತಾನದ ಕೈಯಲ್ಲಿದ್ದು, ಈ ತಂಡ ಆಫ್ರಿಕಾವನ್ನು ವೈಟ್ ವಾಶ್ ಮಾಡಿದರೆ ಮಾತ್ರ ಭಾರತ ಫೈನಲ್​ಗೇರಲಿದೆ. ಇಲ್ಲದಿದ್ದರೆ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೂರನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಪಂದ್ಯ ನಡೆಯಲ್ಲಿದೆ.