ಝಿಂಬಾಬ್ವೆ ಪರ ಕಣಕ್ಕಿಳಿಯಲಿದ್ದಾರೆ ಕರನ್ ಸಹೋದರ
ಝಿಂಬಾಬ್ವೆ ಏಕದಿನ ತಂಡ: ಕ್ರೇಗ್ ಎರ್ವಿನ್ (ನಾಯಕ), ಬ್ರಿಯಾನ್ ಬೆನೆಟ್, ಬೆನ್ ಕರನ್, ಜಾಯ್ಲಾರ್ಡ್ ಗುಂಬಿ, ಟ್ರೆವರ್ ಗ್ವಾಂಡು, ಟಿನೊಟೆಂಡಾ ಮಪೋಸಾ, ತಡಿವಾನಾಶೆ ಮರುಮಾನಿ, ವೆಲ್ಲಿಂಗ್ಟನ್ ಮಸಕಡ್ಝ, ತಶಿಂಗಾ ಮುಸೆಕಿವಾ, ಬ್ಲೆಸ್ಸಿಂಗ್ ಮುಝರಾಬಾನಿ, ಡಿಯೋನ್ ಮೈಯರ್ಸ್, ರಿಚರ್ಡ್ ನ್ಗರವಾ, ನ್ಯೂಮನ್ ನ್ಯಾಮುರಿ, ಸಿಕಂದರ್ ರಾಝ, ವಿಕ್ಟರ್ ನ್ಯಾಯುಚಿ, ಸೀನ್ ವಿಲಿಯಮ್ಸ್.
Updated on: Dec 10, 2024 | 8:10 AM

ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ಗಳಾದ ಸ್ಯಾಮ್ ಕರನ್ ಹಾಗೂ ಟಾಮ್ ಕರನ್ ಸಹೋದರ ಬೆನ್ ಕರನ್ ಝಿಂಬಾಬ್ವೆ ಪರ ಕಣಕ್ಕಿಳಿಯಲಿದ್ದಾರೆ. ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾದ ಝಿಂಬಾಬ್ವೆ ತಂಡದಲ್ಲಿ ಬೆನ್ ಕರನ್ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಬೆನ್ ಕರನ್ 45 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ 36 ಲಿಸ್ಟ್ ಎ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಾಗ್ಯೂ ಅವರಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ ಬೆನ್ ಝಿಂಬಾಬ್ವೆಯತ್ತ ಮುಖ ಮಾಡಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ, ಕರನ್ ಸಹೋದರರ ತಂದೆ ಕೆವಿನ್ ಕರನ್ ಝಿಂಬಾಬ್ವೆ ಮೂಲದವರು. ಅಲ್ಲದೆ 1983 ಮತ್ತು 1987 ರ ನಡುವೆ ಕೆವಿನ್ ಝಿಂಬಾಬ್ವೆ ಪರ 11 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದಾದ ಬಳಿಕ ಇಂಗ್ಲೆಂಡ್ಗೆ ವಲಸೆ ಬಂದಿದ್ದ ಅವರು ಇಲ್ಲಿಯೇ ನೆಲೆ ಕಂಡುಕೊಂಡರು.

ಕೆವಿನ್ ಕರನ್ ಅವರು ಇಂಗ್ಲೆಂಡ್ ಪೌರತ್ವ ಹೊಂದಿದ್ದ ಕಾರಣ ಅವರ ಮಕ್ಕಳು ಸಹ ಆಂಗ್ಲ ತಂಡದ ಕಣಕ್ಕಿಳಿದ್ದಿದ್ದರು. ಆದರೀಗ ಬೆನ್ ಕರನ್ ಮಾತ್ರ ತಂದೆಯ ಹಾದಿಯಲ್ಲಿ ನಡೆದಿದ್ದಾರೆ. ಈ ಹಿಂದೆ ತಂದೆ ಪ್ರತಿನಿಧಿಸಿದ್ದ ರಾಷ್ಟ್ರದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಝಿಂಬಾಬ್ವೆ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.