ಅಬ್ಬರ ಸಿಡಿಲಬ್ಬರ… ಮೊದಲ ಓವರ್​ನಲ್ಲೇ ಭರ್ಜರಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

Updated on: Apr 08, 2026 | 8:59 AM

Yashasvi jaiswal Record: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 32 ಎಸೆತಗಳಲ್ಲಿ ಅಜೇಯ 77 ರನ್ ಬಾರಿಸಿದ್ದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಆರ್​ಆರ್​ ತಂಡ ನಿಗದಿತ 11 ಓವರ್​ಗಳಲ್ಲಿ 150 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 11 ಓವರ್​ಗಳಲ್ಲಿ 123 ರನ್​ಗಳಿಸಿ 27 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

1 / 5
IPL 2026: ಐಪಿಎಲ್​ನ 13ನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಯಶಸ್ವಿ ಜೈಸ್ವಾಲ್ (Yashasvi jaiswal) ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಸಹ ಮೊದಲ ಓವರ್​ನಲ್ಲೇ 22 ರನ್​ ಚಚ್ಚುವ ಮೂಲಕ ಎಂಬುದು ವಿಶೇಷ.

2 / 5
ಅಂದರೆ ಐಪಿಎಲ್ ಇತಿಹಾಸದಲ್ಲಿ ಇನಿಂಗ್ಸ್​ನ ಮೊದಲ ಓವರ್​ನಲ್ಲಿ ಮೂರು ಬಾರಿ 20+ ಸ್ಕೋರ್​ಗಳಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ದೀಪಕ್ ಚಹರ್ ಎಸೆದ ಮೊದಲ ಓವರ್​ನಲ್ಲೇ 22 ರನ್ ಬಾರಿಸುವ ಮೂಲಕ ಈ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

3 / 5
ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ 2023 ರಲ್ಲಿ ನಿತೀಶ್ ರಾಣಾ (ಕೊಲ್ಕತ್ತಾ ನೈಟ್ ರೈಡರ್ಸ್​) ಎಸೆದ ಮೊದಲ ಓವರ್​ನಲ್ಲಿ 6,6,4,4,2,4 ಬಾರಿಸುವ ಮೂಲಕ 26 ರನ್ ಚಚ್ಚಿದ್ದರು. ಇದು ಐಪಿಎಲ್​ ಇತಿಹಾಸದಲ್ಲಿ ಮೊದಲ ಓವರ್​ನಲ್ಲಿ ಬ್ಯಾಟರ್​ರೊಬ್ಬರು ಕಲೆಹಾಕಿದ ಗರಿಷ್ಠ ಸ್ಕೋರ್ ಎಮಬುದು ವಿಶೇಷ.

4 / 5
ಇದಾದ ಬಳಿಕ ಐಪಿಎಲ್ 2025 ರಲ್ಲಿ ಅರ್ಷದೀಪ್ ಸಿಂಗ್ (ಪಂಜಾಬ್ ಕಿಂಗ್ಸ್​) ಎಸೆದ ಮೊದಲ ಓವರ್​ನಲ್ಲಿ ಬರೋಬ್ಬರಿ 22 ರನ್​ ಚಚ್ಚಿದ್ದರು. ಈ ಮೂಲಕ ಐಪಿಎಲ್​ ಇತಿಹಾಸದಲ್ಲಿ 2 ಬಾರಿ ಮೊದಲ ಓವರ್​ನಲ್ಲೇ 20 ಕ್ಕಿಂತ ಅಧಿಕ ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.

5 / 5
ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ದೀಪಕ್ ಚಹರ್ ಎಸೆದ ಮೊದಲ ಓವರ್​ನಲ್ಲಿ 4, 6, 4, 0, 4, 4 ರನ್ ಬಾರಿಸಿದ್ದಾರೆ. ಈ ಮೂಲಕ 22 ರನ್ ಕಲೆಹಾಕಿ, ಪ್ರಥಮ ಓವರ್​ನಲ್ಲಿ ಮೂರು ಬಾರಿ 20+ ರನ್​ ಬಾರಿಸಿದ ಐಪಿಎಲ್​ನ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ತಮ್ಮದಾಗಿಸಿಕೊಂಡಿದ್ದಾರೆ.

Follow Us