IND vs ENG 3rd Test: ಯಶಸ್ವಿ ಜೈಸ್ವಾಲ್ ಅಮೋಘ ಶತಕಕ್ಕೆ 3 ಕ್ರಿಕೆಟಿಗರ ವೃತ್ತಿಜೀವನ ಅಂತ್ಯ: ಯಾರು ನೋಡಿ
Yashasvi Jaiswal: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸುತ್ತಿರುವ ಭಾರತದ ಯುವ ಸ್ಟಾರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಮಾದರಿಯಲ್ಲಿ ಆರಂಭಿಕ ಆಟಗಾರನಾಗಿ ತಮ್ಮ ಸ್ಥಾನವನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಇದರೊಂದಿಗೆ ಕೆಲ ಟೀಮ್ ಇಂಡಿಯಾ ಆಟಗಾರರ ಬಾಗಿಲು ಮುಚ್ಚಿದೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.
1 / 7
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯುತ್ತಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಭಾರತದ ಪರ ಅದ್ಭುತ ಶತಕ ಬಾರಿಸಿ ಆಂಗ್ಲರ ಬೌಲಿಂಗ್ ಪಡೆಯನ್ನು ಧೂಳಿಪಟ ಮಾಡಿದರು. ಈ ಮೂಲಕ ಇಂಗ್ಲೆಂಡ್ ತಂಡದ ಗೆಲುವಿನ ಆಸೆ ದೂರವಾಗಿದೆ.
2 / 7
ಯಶಸ್ವಿ ಜೈಸ್ವಾಲ್ ಈ ಸರಣಿಯಲ್ಲಿ ಸಂಚಲನ ಮೂಡಿಸಿದ ರೀತಿ, ಅವರು ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುವುದು. 22 ವರ್ಷದ ಯುವ ಆಟಗಾರ ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ 3 ಶತಕಗಳನ್ನು ಗಳಿಸಿದ್ದಾರೆ. ಅಲ್ಲದೆ ಮೂರು ಟೆಸ್ಟ್ ಶತಕಗಳನ್ನು ಗಳಿಸಿದ ವೇಗದ ಭಾರತೀಯರ ಪಟ್ಟಿಯಲ್ಲಿ ಸಹ ಸೇರಿಕೊಂಡಿದ್ದಾರೆ.
3 / 7
ಹೀಗಿರುವಾಗ ಟೆಸ್ಟ್ ಮಾದರಿಯಲ್ಲಿ ಆರಂಭಿಕ ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಸ್ಥಾನ ಖಾತ್ರಿಯಾಗಿದೆ. ಇದರೊಂದಿಗೆ ಕೆಲ ಸ್ಪರ್ಧಿಗಳ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಇವರ ಬ್ಯಾಟಿಂಗ್ ಅಬ್ಬರದಿಂದ ಕೆಲ ಟೀಮ್ ಇಂಡಿಯಾ ಆಟಗಾರರ ಬಾಗಿಲು ಮುಚ್ಚಿದೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.
4 / 7
ಪೃಥ್ವಿ ಶಾ: 24 ವರ್ಷದ ಪೃಥ್ವಿ ಶಾ ಭಾರತಕ್ಕಾಗಿ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 2020 ರಲ್ಲಿ ಕೊನೆಯ ಟೆಸ್ಟ್ ಆಡಿದ್ದಾರೆ. ಗಾಯದ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರವಿದ್ದ ಅವರು ಇತ್ತೀಚೆಗಷ್ಟೇ ವಾಪಸಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಟೀಮ್ ಇಂಡಿಯಾಗೆ ಮರಳುವುದು ಕಷ್ಟ ಎನಿಸುತ್ತಿದೆ.
5 / 7
ಮಯಾಂಕ್ ಅಗರ್ವಾಲ್: 33 ವರ್ಷದ ಮಯಾಂಕ್ ಭಾರತದ ಓಪನರ್ ಆಗಿದ್ದರು, ಆದರೆ ಅವರು 2022 ರಿಂದ ತಂಡದಿಂದ ಹೊರಗಿದ್ದಾರೆ. ಮಯಾಂಕ್ ಅವರು ಭಾರತಕ್ಕಾಗಿ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಅವರ ಹೆಸರಿನಲ್ಲಿ 4 ಶತಕಗಳಿವೆ. ಆದರೆ ಇದೀಗ ರೋಹಿತ್-ಜೈಸ್ವಾಲ್ ಜೋಡಿ ಕನ್ಫರ್ಮ್ ಆಗಿರುವುದರಿಂದ ಅವರ ಹಾದಿ ಸುಲಭವಲ್ಲ.
6 / 7
ಅಭಿಮನ್ಯು ಈಶ್ವರನ್: 28 ವರ್ಷದ ಅಭಿಮನ್ಯು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ, ಅವರಿಗೆ ಟೀಮ್ ಇಂಡಿಯಾ ಎರಡು-ಮೂರು ಬಾರಿ ಅವಕಾಶ ನೀಡಿದೆ. ಆದರೆ ಪ್ಲೇಯಿಂಗ್-11 ರಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಇದೀಗ ಟೀಮ್ ಇಂಡಿಯಾದಲ್ಲಿ ಹಲವು ಓಪನರ್‌ಗಳಿರುವುದರಿಂದ ಅವರ ವಾಪಸಾತಿ ಕೂಡ ಸಾಧ್ಯವಾಗಿಲ್ಲ.
7 / 7
ಈ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಇದುವರೆಗೆ ಕೇವಲ 6 ಇನ್ನಿಂಗ್ಸ್‌ಗಳಲ್ಲಿ 435 ರನ್ ಗಳಿಸಿದ್ದಾರೆ. ಇದು ಬ್ಯಾಟ್ಸ್‌ಮನ್ ಒಬ್ಬರ ಗರಿಷ್ಠ ಸ್ಕೋರ್ ಆಗಿದೆ. ಜೈಸ್ವಾಲ್ ವೃತ್ತಿಜೀವನದಲ್ಲಿ ಇದುವರೆಗೆ ಕೇವಲ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರಷ್ಟೆ. ಆದರೆ, ಅವರ ಸರಾಸರಿ 60 ರಷ್ಟಿದೆ. ಇವುಗಳಲ್ಲಿ ಒಂದು ದ್ವಿಶತಕ, ಎರಡು ಶತಕ ಸಿಡಿಸಿದ್ದಾರೆ.