Yashasvi Jaiswal: ಯಶಸ್ವಿ ಜೈಸ್ವಾಲ್ ಆಯ್ಕೆ ಬಹುತೇಕ ಖಚಿತ..!
Yashasvi Jaiswal: ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ್ದು 23 ವರ್ಷದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್. ಆರಂಭಿಕನಾಗಿ 10 ಇನಿಂಗ್ಸ್ಗಳಲ್ಲಿ ಕಣಕ್ಕಿಳಿದ ಜೈಸ್ವಾಲ್ 1 ಶತಕ ಹಾಗೂ 2 ಅರ್ಧಶತಕಗಳೊಂದಿಗೆ ಒಟ್ಟು 391 ರನ್ ಕಲೆಹಾಕಿದ್ದರು. ಈ ಭರ್ಜರಿ ಪ್ರದರ್ಶನದ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್ಗೆ ಅದೃಷ್ಟ ಖುಲಾಯಿಸುವುದು ಖಚಿತವಾಗಿದೆ.
1 / 5
ಯಶಸ್ವಿ ಜೈಸ್ವಾಲ್... ಟೀಮ್ ಇಂಡಿಯಾದ ಪ್ರಸ್ತುತ ಯಶಸ್ವಿ ಆರಂಭಿಕ ಬ್ಯಾಟರ್. ಜೈಸ್ವಾಲ್ ಈಗಾಗಲೇ ಟಿ20 ಹಾಗೂ ಟೆಸ್ಟ್ ತಂಡಗಳಲ್ಲಿ ಭಾರತದ ಪರ ಕಣಕ್ಕಿಳಿದಿದ್ದಾರೆ. ಈ ಎರಡೂ ಸ್ವರೂಪಗಳಲ್ಲೂ ಯಶಸ್ವಿಯಾಗಿದ್ದರೂ, ಜೈಸ್ವಾಲ್ಗೆ ಏಕದಿನ ತಂಡದಲ್ಲಿ ಮಾತ್ರ ಚಾನ್ಸ್ ನೀಡಿರಲಿಲ್ಲ.
2 / 5
ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಒಂದೂವರೆ ವರ್ಷಗಳ ಬಳಿಕ ಯಶಸ್ವಿ ಜೈಸ್ವಾಲ್ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಮನಸ್ಸು ಮಾಡಿದೆ. ಅದರಂತೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಜೈಸ್ವಾಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
3 / 5
ಇಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಹೆಚ್ಚುವರಿ ಆರಂಭಿಕನಾಗಿ ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಏಕೆಂದರೆ ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಓಪನರ್ಗಳಾಗಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಕಣಕ್ಕಿಳಿಯುತ್ತಿದ್ದಾರೆ. ಇದೀಗ ಮೂರನೇ ಓಪನರ್ ಆಗಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಿದ್ದಾರೆ.
4 / 5
ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು 22 ಇನಿಂಗ್ಸ್ಗಳಿಂದ 723 ರನ್ ಕಲೆಹಾಕಿದ್ದಾರೆ. ಹಾಗೆಯೇ ಟೆಸ್ಟ್ನಲ್ಲಿ 36 ಇನಿಂಗ್ಸ್ಗಳಲ್ಲಿ ಓಪನರ್ ಆಗಿ ಕಾಣಿಸಿಕೊಂಡಿರುವ ಜೈಸ್ವಾಲ್ 2 ದ್ವಿಶತಕ ಹಾಗೂ 4 ಶತಕಗಳೊಂದಿಗೆ ಒಟ್ಟು 1798 ರನ್ ಬಾರಿಸಿದ್ದಾರೆ.
5 / 5
ಇದೀಗ ಏಕದಿನ ತಂಡಕ್ಕೆ ಎಂಟ್ರಿ ಕೊಡಲು ಸಜ್ಜಾಗಿ ನಿಂತಿರುವ ಯಶಸ್ವಿ ಜೈಸ್ವಾಲ್ಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಚಾನ್ಸ್ ನೀಡಲಿದ್ದಾರಾ ಎಂಬುದೇ ಪ್ರಶ್ನೆ. ಏಕೆಂದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಯುವ ಎಡಗೈ ದಾಂಡಿಗ ನಿಪುಣ. ಹಾಗಾಗಿ ಆರಂಭಿಕನಾಗಿ ಕಣಕ್ಕಿಳಿದು ಯಶಸ್ವಿಯಾದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಎಡಗೈ-ಬಲಗೈ ಜೋಡಿಯನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದು.