IND vs ENG 3rd Test: ಇತಿಹಾಸ ಸೃಷ್ಟಿಸಿದ ಯಶಸ್ವಿ ಜೈಸ್ವಾಲ್: 90 ವರ್ಷಗಳಲ್ಲಿ ಯಾರೂ ಮಾಡಿರದ ದಾಖಲೆ
Yashasvi Jaiswal Records: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 236 ಎಸೆತಗಳಲ್ಲಿ 14 ಬೌಂಡರಿ ಮತ್ತು 12 ಸಿಕ್ಸರ್‌ಗಳ ಸಹಾಯದಿಂದ 214 ರನ್ ಚಚ್ಚಿದರು. ಇಂಗ್ಲೆಂಡ್ ವಿರುದ್ಧ ಜೈಸ್ವಾಲ್ ಅವರ ಎರಡನೇ ದ್ವಿಶತಕ ಇದಾಗಿದೆ. ಇದರೊಂದಿಗೆ ಈವರೆಗೆ ಯಾರೂ ಮಾಡಿರದ ದಾಖಲೆ ನಿರ್ಮಿಸಿದ್ದಾರೆ.
1 / 7
ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಸಿಡಿದೆದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 22 ವರ್ಷ ವಯಸ್ಸಿನ ಎಡಗೈ ಬ್ಯಾಟರ್ 236 ಎಸೆತಗಳಲ್ಲಿ 14 ಬೌಂಡರಿ ಮತ್ತು 12 ಸಿಕ್ಸರ್‌ಗಳ ಸಹಾಯದಿಂದ 214 ರನ್ ಚಚ್ಚಿದರು.
2 / 7
ಜೈಸ್ವಾಲ್ ವೃತ್ತಿಜೀವನದ ಅತ್ಯುತ್ತಮ ನಾಕ್ ಇದಾಗಿದೆ. ಇವರ ಈ ಭರ್ಜರಿ ಬ್ಯಾಟಿಂಗ್ನಿಂದ ಭಾರತವು ಇಂಗ್ಲೆಂಡ್ ಅನ್ನು 434 ರನ್‌ಗಳಿಂದ ಸೋಲಿಸಿ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವನ್ನು ಕೂಡ ದಾಖಲಿಸಿತು. ಇದು ಇಂಗ್ಲೆಂಡ್ ವಿರುದ್ಧ ಜೈಸ್ವಾಲ್ ಅವರ ಎರಡನೇ ದ್ವಿಶತಕವಾಗಿದೆ ಈ ಮೂಲಕ ಇತಿಹಾಸ ನಿರ್ಮಿಸಿದರು.
3 / 7
ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ದ್ವಿಶತಕಗಳನ್ನು ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಯುವ ಆಟಗಾರ ಜೈಸ್ವಾಲ್ ಪಾತ್ರರಾದರು. ರಾಜ್‌ಕೋಟ್‌ನಲ್ಲಿ ಇಂಗ್ಲಿಷ್ ಬೌಲರ್‌ಗಳನ್ನು ಬಗ್ಗು ಬಡಿಯುವ ಮೊದಲು, ಜೈಸ್ವಾಲ್ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 209 ರನ್ ಗಳಿಸಿದ್ದರು.
4 / 7
ಭಾರತವು 1934 ರಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿತು. ಆಗಿನಿಂದ ಈವರೆಗೆ ಯಾರೂ ಕೂಡ ಆಂಗ್ಲರ ವಿರುದ್ಧದ ಎರಡು ಬಾರಿ ದ್ವಿಶತಕ ಸಿಡಿಸಿಲ್ಲ. ಆದರೆ, ಈಗ ಜೈಸ್ವಾಲ್ 90 ವರ್ಷಗಳಲ್ಲಿ ಇಂಗ್ಲಿಷ್ ತಂಡದ ವಿರುದ್ಧ ಎರಡು ದ್ವಿಶತಕಗಳನ್ನು ಗಳಿಸಿದ ಏಕೈಕ ಬ್ಯಾಟರ್ ಎಂಬ ಸಾಧನೆ ಮಾಡಿದ್ದಾರೆ.
5 / 7
ಹಾಗೆಯೆ ಜೈಸ್ವಾಲ್ ಅವರ ದ್ವಿಶತಕದೊಂದಿಗೆ, ಬ್ಯಾಕ್-ಟು-ಬ್ಯಾಕ್ ಪಂದ್ಯಗಳಲ್ಲಿ ದ್ವಿಶತಕಗಳನ್ನು ಗಳಿಸಿದ ಮೂರನೇ ಭಾರತೀಯ ಕ್ರಿಕೆಟಿಗರಾದರು. ಈ ಹಿಂದೆ ವಿನೋದ್ ಕಾಂಬ್ಳಿ ಬ್ಯಾಕ್-ಟು-ಬ್ಯಾಕ್ 200+ ಸ್ಕೋರ್‌ಗಳನ್ನು ಗಳಿಸಿದ ಮೊದಲ ಭಾರತೀಯರಾಗಿದ್ದರು ಮತ್ತು ವಿರಾಟ್ ಕೊಹ್ಲಿ 2017 ರಲ್ಲಿ ಭಾರತ-ಶ್ರೀಲಂಕಾ ಸರಣಿಯ ಸಮಯದಲ್ಲಿ ಈ ಗಣ್ಯರ ಪಟ್ಟಿಗೆ ಸೇರಿದ್ದರು.
6 / 7
3 ನೇ ದಿನದಂದು ಬೆನ್ನುನೋವಿನ ಕಾರಣ ಗಾಯಗೊಂಡು ನಿವೃತ್ತರಾದ ಜೈಸ್ವಾಲ್, ನಾಲ್ಕನೇ ದಿನದ ಆಟದ ಬೆಳಗಿನ ಅವಧಿಯಲ್ಲಿ ಗಿಲ್ ಔಟಾದ ನಂತರ ಮತ್ತೆ ಬ್ಯಾಟಿಂಗ್ಗೆ ಬಂದರು. ಕ್ರೀಸ್‌ನಲ್ಲಿರುವಾಗ 12 ಸಿಕ್ಸರ್‌ಗಳನ್ನು ಗಳಿಸುವ ಮೂಲಕ, ಜೈಸ್ವಾಲ್ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದಾಖಲೆಯನ್ನು ಸರಿಗಟ್ಟಿದರು.
7 / 7
ಮೂರನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರ ಸೂಪರ್ ಶೋನೊಂದಿಗೆ, ಯುವ ಆಟಗಾರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25 ಸೈಕಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಈಗ ನಂ. 1 ಸ್ಥಾನವನ್ನು ತಲುಪಿದ್ದಾರೆ. ಏಳು ಪಂದ್ಯಗಳಲ್ಲಿ ಅವರು 861 ರನ್ ಗಳಿಸಿದ್ದಾರೆ.