Yashasvi Jaiswal: ಐಸಿಸಿ ಪ್ರಶಸ್ತಿ ಗೆದ್ದ ಯಶಸ್ವಿ ಜೈಸ್ವಾಲ್

| Updated By: ಝಾಹಿರ್ ಯೂಸುಫ್

Updated on: Mar 13, 2024 | 11:10 AM

Yashasvi Jaiswal Records: ಇಂಗ್ಲೆಂಡ್ ವಿರುದ್ಧದ ಸರಣಿಯ 5 ಪಂದ್ಯಗಳಲ್ಲಿ ಜೈಸ್ವಾಲ್ ಬ್ಯಾಟ್​ನಿಂದ ಮೂಡಿಬಂದಿರುವುದು ಬರೋಬ್ಬರಿ 26 ಸಿಕ್ಸ್ ಹಾಗೂ 68 ಫೋರ್​ಗಳು. ಇದರೊಂದಿಗೆ ತಂಡವೊಂದರ ವಿರುದ್ಧ ಟೆಸ್ಟ್​ನಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ವಿಶ್ವ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು.

1 / 6
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಧ್ಭುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ (Yashasvi Jaiswal) ಐಸಿಸಿ ಫೆಬ್ರವರಿ ತಿಂಗಳ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಫೆಬ್ರವರಿ ತಿಂಗಳ ಆಟಗಾರ ನಾಮನಿರ್ದೇಶಿತರ ಪಟ್ಟಿಯಲ್ಲಿ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಶ್ರೀಲಂಕಾದ ಪಾತುಮ್ ನಿಸ್ಸಂಕಾ ಕೂಡ ಕಾಣಿಸಿಕೊಂಡಿದ್ದರು.

2 / 6
ಆದರೀಗ ಇಬ್ಬರನ್ನು ಹಿಂದಿಕ್ಕಿ 22 ವರ್ಷದ ಯಶಸ್ವಿ ಜೈಸ್ವಾಲ್ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಈ ಗೌರವಕ್ಕೆ ಪಾತ್ರರಾದ ಭಾರತದ 7ನೇ ಆಟಗಾರ ಎನಿಸಿಕೊಂಡಿದ್ದಾರೆ.

3 / 6
ಜನವರಿ-ಫೆಬ್ರವರಿ ತಿಂಗಳಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಸರಣಿಯ 5 ಪಂದ್ಯಗಳಿಂದ ಬರೋಬ್ಬರಿ 712 ರನ್ ಕಲೆಹಾಕುವ ಮೂಲಕ ಯುವ ಎಡಗೈ ದಾಂಡಿಗ ಇತಿಹಾಸ ನಿರ್ಮಿಸಿದ್ದರು. ಹಾಗೆಯೇ ಈ ಸರಣಿಯಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್​ ಗಳಿಸಿದ್ದು ಕೂಡ ಯಶಸ್ವಿ ಜೈಸ್ವಾಲ್. ರಾಜ್​ಕೋಟ್​ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್ ಅಜೇಯ 214 ರನ್ ಬಾರಿಸಿ ಮಿಂಚಿದ್ದರು.

4 / 6
ಇದಲ್ಲದೆ, ಈ ಸರಣಿಯಲ್ಲಿ ಅತೀ ಹೆಚ್ಚು ಬೌಂಡರಿಗಳನ್ನು ಸಿಡಿಸಿದ್ದು ಕೂಡ 22ರ ಹರೆಯದ ಯಶಸ್ವಿ ಜೈಸ್ವಾಲ್. 5 ಪಂದ್ಯಗಳಲ್ಲಿ ಜೈಸ್ವಾಲ್ ಬ್ಯಾಟ್​ನಿಂದ ಮೂಡಿಬಂದಿರುವುದು ಬರೋಬ್ಬರಿ 26 ಸಿಕ್ಸ್ ಹಾಗೂ 68 ಫೋರ್​ಗಳು.

5 / 6
ಇನ್ನು ಸರಣಿಯಲ್ಲಿ 89 ಸರಾಸರಿಯಲ್ಲಿ ರನ್ ಕಲೆಹಾಕಿರುವ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ 700+ ರನ್ ಕಲೆಹಾಕಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಹಾಗೆಯೇ ತಂಡವೊಂದರ ವಿರುದ್ಧ ಟೆಸ್ಟ್​ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಭಾರತೀಯ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡರು.

6 / 6
ಈ ಎಲ್ಲಾ ಕಾರಣಗಳಿಂದಾಗಿ ಯಶಸ್ವಿ ಜೈಸ್ವಾಲ್ ಐಸಿಸಿ ತಿಂಗಳ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಶುಭ್​ಮನ್ ಗಿಲ್ ಬಳಿಕ ಈ ಗೌರವ ಪಾತ್ರರಾದ 7ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.