Virat Kohli: ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿ ಔಟ್..?
T20 World Cup 2024: ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ವೆಸ್ಟ್ ಇಂಡೀಸ್-ಯುಎಸ್ಎನಲ್ಲಿ ನಡೆಯಲಿರುವ ಈ ವಿಶ್ವಕಪ್ ಜೂನ್ 1 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಜೂನ್ 29 ರಂದು ಬಾರ್ಬಡೋಸ್ನಲ್ಲಿ ನಡೆಯಲಿದೆ. ಇನ್ನು ಈ ಟೂರ್ನಿಗಾಗಿ ಆಯ್ಕೆ ಮಾಡಲಾಗುವ ತಂಡದಲ್ಲಿ ವಿರಾಟ್ ಕೊಹ್ಲಿಗೆ ಚಾನ್ಸ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
Updated on: Mar 13, 2024 | 8:54 AM

ಟಿ20 ವಿಶ್ವಕಪ್ (T20 World Cup 2024) ಆರಂಭಕ್ಕೆ ಇನ್ನು ತಿಂಗಳುಗಳು ಮಾತ್ರ ಉಳಿದಿವೆ. ಜೂನ್ 1 ರಿಂದ ಶುರುವಾಗಲಿರುವ ಚುಟುಕು ಕ್ರಿಕೆಟ್ ಕದನಕ್ಕಾಗಿ ತಂಡಗಳನ್ನು ಪ್ರಕಟಿಸಲು ಮೇ 1 ರವರೆಗೆ ಗಡುವು ನೀಡಲಾಗಿದೆ. ಹೀಗಾಗಿ ಮಾರ್ಚ್ ಅಂತ್ಯದೊಳಗೆ 20 ದೇಶಗಳು ತಮ್ಮ ತಂಡಗಳನ್ನು ಘೋಷಿಸಲಿದೆ. ಆದರೆ ಈ ತಂಡದಲ್ಲಿ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಳ್ಳುವುದು ಮಾತ್ರ ಅನುಮಾನ.ಟಿ20 ವಿಶ್ವಕಪ್ (T20 World Cup 2024) ಆರಂಭಕ್ಕೆ ಇನ್ನು ತಿಂಗಳುಗಳು ಮಾತ್ರ ಉಳಿದಿವೆ. ಜೂನ್ 1 ರಿಂದ ಶುರುವಾಗಲಿರುವ ಚುಟುಕು ಕ್ರಿಕೆಟ್ ಕದನಕ್ಕಾಗಿ ತಂಡಗಳನ್ನು ಪ್ರಕಟಿಸಲು ಮೇ 1 ರವರೆಗೆ ಗಡುವು ನೀಡಲಾಗಿದೆ. ಹೀಗಾಗಿ ಮಾರ್ಚ್ ಅಂತ್ಯದೊಳಗೆ 20 ದೇಶಗಳು ತಮ್ಮ ತಂಡಗಳನ್ನು ಘೋಷಿಸಲಿದೆ. ಆದರೆ ಈ ತಂಡದಲ್ಲಿ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಳ್ಳುವುದು ಮಾತ್ರ ಅನುಮಾನ.

ಹೌದು, ಟಿ20 ವಿಶ್ವಕಪ್ ತಂಡದ ಆಯ್ಕೆಗೂ ಮುನ್ನ ಟೀಮ್ನಿಂದ ಹೊರಗುಳಿಯಲು ವಿರಾಟ್ ಕೊಹ್ಲಿಯನ್ನು ಮನವೊಲಿಸುವಂತೆ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ಅಂದರೆ ಬಿಸಿಸಿಐ ಆಯ್ಕೆ ಸಮಿತಿ ಲೀಸ್ಟ್ನಲ್ಲಿ ವಿರಾಟ್ ಕೊಹ್ಲಿ ಎಂಬುದು ಖಚಿತ. ಹೀಗಾಗಿಯೇ ಖುದ್ದು ಕೊಹ್ಲಿಯೇ ತಂಡದಿಂದ ಹೊರಗುಳಿಯಲು ತಿಳಿಸಲಾಗುತ್ತಿದೆ.

ಈ ಬಾರಿಯ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿದೆ. ವೆಸ್ಟ್ ಇಂಡೀಸ್‌ನಲ್ಲಿ ನಿಧಾನಗತಿಯ ಪಿಚ್ಗಳಿದ್ದು, ಇದು ಕೊಹ್ಲಿಯ ಬ್ಯಾಟಿಂಗ್ಗೆ ಸರಿಹೊಂದುವುದಿಲ್ಲ. ಹೀಗಾಗಿ ಕಿರಿಯ ಆಟಗಾರರಿಗೆ ತಂಡದಲ್ಲಿ ಅವಕಾಶ ಮಾಡಿಕೊಡಲು ಕೊಹ್ಲಿಯನ್ನು ಮನವೊಲಿಸುವಂತೆ ಅಗರ್ಕರ್ ಅವರಿಗೆ ಸೂಚಿಸಲಾಗಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.

ಇದಾಗ್ಯೂ ವಿರಾಟ್ ಕೊಹ್ಲಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಬೇಕಿದ್ದರೆ ಅವರು ಈ ಬಾರಿಯ ಐಪಿಎಲ್ನಲ್ಲಿ ಅಸಾಧಾರಣ ಪ್ರದರ್ಶನ ನೀಡಬೇಕಾಗುತ್ತದೆ. ಈ ಮೂಲಕ ಆಯ್ಕೆ ಸಮಿತಿಯ ಪರಿಗಣನೆ ಪಡೆದು ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಕೆಂದರೆ ವಿರಾಟ್ ಕೊಹ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಆಡಿರುವುದು ಕೇವಲ 2 ಟಿ20 ಪಂದ್ಯಗಳನ್ನು ಮಾತ್ರ. ಏಕದಿನ ವಿಶ್ವಕಪ್ಗೆ ಗಮನ ಕೇಂದ್ರೀಕರಿಸಲು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ತಂಡದಿಂದ ಹೊರಗುಳಿದಿದ್ದರು. ಇತ್ತೀಚೆಗೆ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಸರಣಿ ಮೂಲಕ ಕಿಂಗ್ ಕೊಹ್ಲಿ ಕಂಬ್ಯಾಕ್ ಮಾಡಿದರೂ 2 ಪಂದ್ಯಗಳಲ್ಲಿ ಕಲೆಹಾಕಿದ್ದು 29 ಮತ್ತು 0 ರನ್ಗಳು.

ಹೀಗಾಗಿಯೇ ಮುಂಬರುವ ಟಿ20 ವಿಶ್ವಕಪ್ಗೆ ವಿರಾಟ್ ಕೊಹ್ಲಿಯನ್ನು ಪರಿಗಣಿಸಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಭಾರತ ತಂಡದಿಂದ ಕಿಂಗ್ ಕೊಹ್ಲಿಯನ್ನು ಕೈ ಬಿಡುವ ಸುದ್ದಿಗಳು ಹೊರಬಿದ್ದಿದೆ. ಹೀಗಾಗಿ ಮುಂಬರುವ ವಿಶ್ವಕಪ್ ತಂಡದಲ್ಲಿ ಕೊಹ್ಲಿಗೆ ಸ್ಥಾನ ಸಿಗಲಿದೆಯಾ ಎಂಬುದೇ ಈಗ ಕುತೂಹಲವಾಗಿ ಮಾರ್ಪಟ್ಟಿದೆ.
