ಒಂದೇ ಒಂದು ಪಂದ್ಯವಾಡದ ಮೂವರು ಆಟಗಾರರಿಗೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಗೊತ್ತಾ?

|

Updated on: Jul 08, 2024 | 3:18 PM

Team India: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ನಾಲ್ವರು ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದರು. ಅದರಂತೆ ಟೀಮ್ ಇಂಡಿಯಾದ ಮೀಸಲು ಆಟಗಾರರಾಗಿದ್ದ ರಿಂಕು ಸಿಂಗ್, ಶುಭಮನ್ ಗಿಲ್, ಅವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ ತಲಾ 1 ಕೋಟಿ ರೂ. ಬಹುಮಾನ ಮೊತ್ತ ಪಡೆಯಲಿದ್ದಾರೆ. ಇನ್ನು ಒಂದೇ ಒಂದು ಪಂದ್ಯವಾಡದ ಮೂವರು ಆಟಗಾರರಿಗೆ ಎಷ್ಟು ಮೊತ್ತ ಸಿಗಲಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

1 / 5
ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ಬಿಸಿಸಿಐ ಕಡೆಯಿಂದ 125 ಕೋಟಿ ರೂ.ಗಳ ಬಹುಮಾನ ಮೊತ್ತ ಸಿಕ್ಕಿದೆ. ಈ ಬಹುಮಾನ ಮೊತ್ತವನ್ನು ಇಡೀ ತಂಡಕ್ಕೆ ಹಂಚಿಕೆ ಮಾಡಲಾಗುತ್ತದೆ. ಅಂದರೆ ಇಲ್ಲಿ ಆಟಗಾರರ ಜೊತೆ ಸಿಬ್ಬಂದಿ ವರ್ಗಗಳಿಗೂ ಕೋಟಿ ರೂ. ಮೊತ್ತದಲ್ಲಿ ಪಾಲು ಸಿಗಲಿದೆ.

2 / 5
ಅದರಂತೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡ ಆಟಗಾರರಿಗೆ ತಲಾ 5 ಕೋಟಿ ರೂ.ನಂತೆ ಬಹುಮಾನ ಮೊತ್ತ ನೀಡಲಾಗುತ್ತದೆ. ಇನ್ನು ಭಾರತ ತಂಡದಲ್ಲಿದ್ದರೂ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್​ ಹಾಗೂ ಯುಜ್ವೇಂದ್ರ ಚಹಲ್ ಒಂದೇ ಒಂದು ಪಂದ್ಯವಾಡಿಲ್ಲ. ಹೀಗಾಗಿ ಮೂವರಿಗೆ ಎಷ್ಟು ಕೋಟಿ ರೂ. ನೀಡಲಾಗುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ.

3 / 5
ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಇಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಂಡ ಪ್ರತಿ ಆಟಗಾರರಿಗೂ 5 ಕೋಟಿ ರೂ. ನಿಗದಿ ಮಾಡಲಾಗಿದೆ. ಅಂದರೆ ತಂಡದಲ್ಲಿದ್ದ 15 ಆಟಗಾರರಿಗೂ ಸಮಾನ ಮೊತ್ತ ನೀಡಲಾಗುತ್ತದೆ. ಅದರಂತೆ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಹಾಗೂ ಯುಜ್ವೇಂದ್ರ ಚಹಲ್ ಕೂಡ ತಲಾ 5 ಕೋಟಿ ರೂ. ಬಹುಮಾನ ಮೊತ್ತ ಪಡೆಯಲಿದ್ದಾರೆ.

4 / 5
ಇನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್​ಗೆ 5 ಕೋಟಿ ರೂ. ನೀಡಲಾಗುತ್ತದೆ. ಹಾಗೆಯೇ ದ್ರಾವಿಡ್ ಜೊತೆ ಕಾರ್ಯ ನಿರ್ವಹಿಸಿದ ಇತರೆ ಕೋಚಿಂಗ್ ಸಿಬ್ಬಂದಿಗಳು ತಲಾ 2.5 ಕೋಟಿ ರೂ. ಪಡೆಯಲಿದ್ದಾರೆ.

5 / 5
ಇನ್ನುಳಿದ ಸಿಬ್ಬಂದಿಗಳಿಗೆ ತಲಾ 2 ಕೋಟಿ ರೂ. ನೀಡಲಾಗುತ್ತದೆ. ಹಾಗೆಯೇ ಭಾರತ ತಂಡವನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿ ಸದಸ್ಯರು ತಲಾ 1 ಕೋಟಿ ರೂ. ಪಡೆಯಲಿದ್ದಾರೆ. ಈ ಮೂಲಕ 125 ಕೋಟಿ ರೂ. ಬಹುಮಾನ ಮೊತ್ತನ್ನು ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದೊಡನೆ ಕಾಣಿಸಿಕೊಂಡ ಪ್ರತಿಯೊಬ್ಬರಿಗೂ ಹಂಚಿಕೊಳ್ಳಲಾಗುತ್ತದೆ.