Best T20I Batters: ಈ ವರ್ಷ ಟಿ20 ಕ್ರಿಕೆಟ್​ನಲ್ಲಿ ಅಬ್ಬರಿಸಿದ ಬ್ಯಾಟರ್ ಯಾರು?: ಇಲ್ಲಿದೆ ಪ್ರತಿ ತಂಡದ ಬೆಸ್ಟ್ ಆಟಗಾರನ ಪಟ್ಟಿ

| Updated By: ಪೃಥ್ವಿಶಂಕರ

Updated on: Dec 23, 2021 | 2:30 PM

Year Ender 2021: ಈ ವರ್ಷ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಪ್ರಮುಖ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಒಬ್ಬ ಬ್ಯಾಟರ್ ಯಾರು ಎಂಬುದನ್ನು ನೋಡೋಣ.

1 / 9
2021ನೇ ವರ್ಷ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ರೋಚಕತೆ ಸೃಷ್ಟಿಸಿತು. ಅದರಲ್ಲೂ ಅಂತರರಾಷ್ಟ್ರೀಯ ಟಿ20 ವಿಶ್ವಕಪ್​ಗೆ ಈ ಕ್ರಿಕೆಟ್ ಲೋಕ ಸಾಕ್ಷಿಯಾಯಿತು. ಅದೆಷ್ಟೊ ಬ್ಯಾಟರ್ ಗಳು ಪರಿಚಯವಾದರು. ಅನೇಕ ಬ್ಯಾಟರ್ ಗಳು ವಿಶೇಷ ಸಾಧನೆ ಮಾಡಿದರು. ಅದರಂತೆ ಈ ವರ್ಷ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಪ್ರಮುಖ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಒಬ್ಬ ಬ್ಯಾಟರ್ ಯಾರು ಎಂಬುದನ್ನು ನೋಡೋಣ.

2 / 9
ರೋಹಿತ್ ಶರ್ಮಾ (ಭಾರತ): 2021ನೇ ವರ್ಷದಲ್ಲಿ ಭಾರತ ಪರ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ರೋಹಿತ್ ಶರ್ಮಾ. ಇವರು ಆಡಿದ 11  ಪಂದ್ಯಗಳಲ್ಲಿ 424 ರನ್ ಬಾರಿಸಿದ್ದಾರೆ.

3 / 9
ಡೆವೊನಾ ಕಾನ್ವೆ (ನ್ಯೂಜಿಲೆಂಡ್): ಐಸಿಸಿ ಟಿ20 ಪುರುಷರ ರ್ಯಾಂಕಿಂಗ್ ಪಟ್ಟಿಯಲ್ಲಿ ಡೆವೊನಾ ಕಾನ್ವೆ ಏಳನೇ ಸ್ಥಾನದಲ್ಲಿದ್ದಾರೆ. ಇವರು 2021ನೇ ವರ್ಷದಲ್ಲಿ ಆಡಿದ 14 ಪಂದ್ಯಗಳಿಂದ 428 ರನ್ ಕಲೆಹಾಕಿದ್ದಾರೆ.

4 / 9
ಜೋಸ್ ಬಟ್ಲರ್ (ಇಂಗ್ಲೆಂಡ್): ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಶತಕ ಸಿಡಿಸಿದ ಏಕೈಕ ಆಟಗಾರ ಜೋಸ್ ಬಟ್ಲರ್ ಆಗಿದ್ದಾರೆ. ಇವರು ಒಟ್ಟು 14 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 589 ರನ್ ಸಿಡಿಸಿದ್ದಾರೆ.

5 / 9
ಆ್ಯಡಂ ಮರ್ಕ್ರಮ್ (ದಕ್ಷಿಣ ಆಫ್ರಿಕಾ): ಈ ವರ್ಷ 18 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಆ್ಯಡಂ ಮರ್ಕ್ರಮ್ 570 ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ.

6 / 9
ಮಿಚೆಲ್ ಮಾರ್ಶ್ (ಆಸ್ಟ್ರೇಲಿಯಾ):  ಇವರು ಕೂಡ ಈ ವರ್ಷ ಅಮೋಘ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯಗಳಲ್ಲಿ ಇವರು ಮ್ಯಾಚ್ ವಿನ್ನಿಂಗ್ ಆಟ ಆಡಿದ್ದರು.

7 / 9
ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ): ಪಾಕಿಸ್ತಾನ ಪರ ಟಿ20 ಕ್ರಿಕೆಟ್​ನ ಬೆಸ್ಟ್ ಬ್ಯಾಟರ್ ಆಗಿರುವ ಮೊಹಮ್ಮದ್ ರಿಜ್ವಾನ್ ಐಸಿಸಿ ರ್ಯಾಂಕಿಂಗ್​ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಇವರು ಈ ವರ್ಷ 29 ಟಿ20 ಪಂದ್ಯಗಳನ್ನು ಆಡಿದ್ದು ಬರೋಬ್ಬರಿ 1326 ರನ್ ಚಚ್ಚಿದ್ದಾರೆ. 1 ಶತಕ, 12 ಅರ್ಧಶತಕ ಕೂಡ ಸೇರಿದೆ. ಅಲ್ಲದೆ ವರ್ಷವೊಂದರಲ್ಲಿ ಟಿ20 ಕ್ರಿಕೆಟ್​ನಲ್ಲಿ ಸಾವಿರ ರನ್​ಗಳ ಗಡಿ ದಾಟಿದ ಮೊದಲ ಪ್ಲೇಯರ್ ಇವರಾಗಿದ್ದಾರೆ.

8 / 9
ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಈ ವರ್ಷ ಆಡಿದ 25 ಟಿ20 ಪಂದ್ಯಗಳಲ್ಲಿ 484 ರನ್ ಕಲೆಹಾಕಿದ್ದಾರೆ.

9 / 9
ಮೊಹಮ್ಮದ್ ನಮೀಮ್ (ಬಾಂಗ್ಲಾದೇಶ): 2021 ರಲ್ಲಿ ಬಾಂಗ್ಲಾದೇಶ ಪರ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಮೊಹಮ್ಮದ್ ನಮೀಮ್. ಇವರು 26 ಪಂದ್ಯಗಳಲ್ಲಿ 575 ರನ್ ಬಾರಿಸಿದ್ದಾರೆ.

Published On - 12:27 pm, Thu, 23 December 21