T20 World Cup 2024: ಸೆಮಿಫೈನಲ್ಗೇರುವ 4 ತಂಡಗಳನ್ನು ಹೆಸರಿಸಿದ ಯುವರಾಜ್ ಸಿಂಗ್
TV9 Web | Updated By: ಝಾಹಿರ್ ಯೂಸುಫ್
Updated on:
May 02, 2024 | 2:46 PM
T20 World Cup 2024: ಈ ಬಾರಿಯ ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಜಂಟಿಯಾಗಿ ಆಯೋಜಿಸುತ್ತಿದೆ. ಜೂನ್ 2 ರಿಂದ ಶುರುವಾಗಲಿರುವ ಟೂರ್ನಿಯ ಲೀಗ್ ಹಂತದ ಕೆಲ ಪಂದ್ಯಗಳಿಗೆ ಯುಎಸ್ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ಜರುಗಲಿದೆ.
1 / 6
ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಜೂನ್ 2 ರಿಂದ ಆರಂಭವಾಗಲಿರುವ ಈ ಟೂರ್ನಿಗಾಗಿ ಈಗಾಗಲೇ ಬಹುತೇಕ ತಂಡಗಳು ತಮ್ಮ 15 ಸದಸ್ಯರ ಬಳಗವನನ್ನು ಘೋಷಿಸಿದೆ. ಇದರ ಬೆನ್ನಲ್ಲೇ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ಗೇರುವ 4 ತಂಡಗಳನ್ನು ಹೆಸರಿಸಿದ್ದಾರೆ ಯುವರಾಜ್ ಸಿಂಗ್. ಆ ನಾಲ್ಕು ತಂಡಗಳಾವುವು ಎಂದರೆ...
2 / 6
1- ಭಾರತ: ಕಳೆದ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಆಡಿದ್ದ ಟೀಮ್ ಇಂಡಿಯಾ ಈ ಸಲ ಕೂಡ ನಾಕೌಟ್ ಹಂತಕ್ಕೇರಲಿದೆ. ಅಲ್ಲದೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಗುರುತಿಸಿಕೊಂಡಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
3 / 6
2- ಇಂಗ್ಲೆಂಡ್: ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಬಾರಿ ಕೂಡ ಸೆಮಿಫೈನಲ್ ಆಡಲಿದೆ. ಅತ್ಯುತ್ತಮ ಬಳಗವನ್ನು ಹೊಂದಿರುವ ಜೋಸ್ ಬಟ್ಲರ್ ಪಡೆಯಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.
4 / 6
3- ಪಾಕಿಸ್ತಾನ್: ಕಳೆದ ಬಾರಿಯ ರನ್ನರ್ ಅಪ್ ತಂಡ ಪಾಕಿಸ್ತಾನ್ ತಂಡ ಕೂಡ ಈ ನಾಕೌಟ್ ಹಂತಕ್ಕೇರಲಿದೆ. ಪಾಕ್ ಪಡೆ ಚುಟುಕು ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಕಾರಣ ಸೆಮಿಫೈನಲ್ಗೇರುವುದನ್ನು ನಿರೀಕ್ಷಿಸಬಹುದು ಎಂದು ಯುವಿ ಹೇಳಿದ್ದಾರೆ.
5 / 6
4- ಆಸ್ಟ್ರೇಲಿಯಾ: 2021 ರ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆಸ್ಟ್ರೇಲಿಯಾ ತಂಡ ಕೂಡ ಬಲಿಷ್ಠವಾಗಿದ್ದು, ಹೀಗಾಗಿ ಆಸೀಸ್ ಪಡೆ ಸೆಮಿಫೈನಲ್ಗೇರುವುದನ್ನು ಎದುರು ನೋಡಬಹುದು ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
6 / 6
ಯುವರಾಜ್ ಸಿಂಗ್ ಅವರ ಹೇಳಿಕೆಯಂತೆ ಭಾರತ, ಇಂಗ್ಲೆಂಡ್, ಪಾಕಿಸ್ತಾನ್ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಬಾರಿ ಸೆಮಿಫೈನಲ್ ಪಂದ್ಯಗಳನ್ನಾಡಲಿದೆ. ಅದರಂತೆ ಸಿಕ್ಸರ್ ಸಿಂಗ್ ಅವರ ಈ ಭವಿಷ್ಯವಾಣಿ ನಿಜವಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
Published On - 8:52 am, Thu, 2 May 24