Yuzvendra Chahal: ಆರ್​ಸಿಬಿಗೆ 8 ವರ್ಷ ಕೊಡುಗೆ ನೀಡಿದ್ದೇನೆ: ಕೈ ಬಿಡುವಾಗ ಒಂದು ಫೋನ್ ಕಾಲ್ ಕೂಡ ಮಾಡಲಿಲ್ಲ: ಚಹಲ್

|

Updated on: Jul 16, 2023 | 10:03 AM

ಆರ್​ಸಿಬಿ ನನ್ನನ್ನು ಕೈಬಿಟ್ಟಿದ್ದು ನನಗೆ ನಿಜವಾಗಿಯೂ ಒಂದು ಕೆಟ್ಟ ಭಾವನೆ. ಅವರ ಕಡೆಯಿಂದ ಯಾವುದೇ ಫೋನ್ ಕರೆ ಬರಲಿಲ್ಲ, ಯಾವುದೇ ಮಾತುಕತೆ ನಡೆಸಲಿಲ್ಲ. ನಾನು ಅವರಿಗಾಗಿ 114 ಪಂದ್ಯಗಳನ್ನು ಆಡಿದ್ದೆ ಎಂದು ಚಹಲ್ ಹೇಳಿದ್ದಾರೆ.

1 / 7
ಐಪಿಎಲ್ 2023ರ ಮೆಗಾ ಹರಾಜಿಗೂ ಮುನ್ನ ಪ್ರಕಟಿಸಿದ ರಿಟೇನ್ ಆಟಗಾರರ ಪಟ್ಟಿಯಲ್ಲಿ ಕಂಡುಬಂದ ಅತಿ ದೊಡ್ಡ ಶಾಕಿಂಗ್ ವಿಷಯ ಎಂದರೆ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್​ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟಿದ್ದು.

2 / 7
2014ರ ಐಪಿಎಲ್ ನಂತರ 2021 ಐಪಿಎಲ್ ವರೆಗೆ ಚಹಲ್ ಆರ್​ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿ ಟೀಮ್ ಇಂಡಿಯಾಗೂ ಎಂಟ್ರಿಕೊಟ್ಟರು. ಆರ್​ಸಿಬಿಯ ಯಶಸ್ವಿ ಬೌಲರ್ ಆಗಿ ಗುರುತಿಸಿಕೊಂಡ ಇವರನ್ನು ಆರ್​ಸಿಬಿ ಇವರನ್ನು ದಿಢೀರ್ ಆಗಿ ಕೈಬಿಟ್ಟಿತು.

3 / 7
ಆರ್​ಸಿಬಿ ತನ್ನನ್ನು ತಂಡದಿಂದ ಕೈಬಿಟ್ಟಿದ್ದು ಸ್ವತಃ ಚಹಲ್ ಅವರಿಗೂ ನೋವುಂಟು ಮಾಡಿದೆ. ಇದೀಗ ಇದೇ ವಿಚಾರದ ಬಗ್ಗೆ ಚಹಲ್ ಮಾತನಾಡಿದ್ದು ಬೇಸರ ಹೊರಹಾಕಿದ್ದಾರೆ.

4 / 7
ನಾನು ಆರ್​ಸಿಬಿ ಪರ 8 ವರ್ಷಗಳ ಕಾಲ ಆಡಿದ್ದೇನೆ. ಈ ತಂಡ ನನಗೆ ಭಾರತದ ಕ್ಯಾಪ್ ನೀಡಿತು, ಏಕೆಂದರೆ ಬೆಂಗಳೂರು ತಂಡ ನನಗೆ ಪ್ರದರ್ಶನ ನೀಡಲು ಅವಕಾಶ ನೀಡಿತು. ಮೊದಲ ಪಂದ್ಯದಿಂದಲೇ ವಿರಾಟ್ ಭಯ್ಯಾ ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ಆರ್​ಸಿಬಿ ನನ್ನ ಕುಟುಂಬದಂತೆ ಇತ್ತು ಎಂದು ಚಹಲ್ ಹೇಳಿದ್ದಾರೆ.

5 / 7
ಆರ್​ಸಿಬಿ ನನ್ನನ್ನು ಕೈಬಿಟ್ಟಿದ್ದು ನನಗೆ ನಿಜವಾಗಿಯೂ ಒಂದು ಕೆಟ್ಟ ಭಾವನೆ. ಅವರ ಕಡೆಯಿಂದ ಯಾವುದೇ ಫೋನ್ ಕರೆ ಬರಲಿಲ್ಲ, ಯಾವುದೇ ಮಾತುಕತೆ ನಡೆಸಲಿಲ್ಲ. ನಾನು ಅವರಿಗಾಗಿ 114 ಪಂದ್ಯಗಳನ್ನು ಆಡಿದ್ದೆ. ಹರಾಜಿನಲ್ಲಿ ಹೇಗಾದರು ಮಾಡಿ ಖರೀದಿ ಮಾಡುತ್ತೇವೆ ಎಂದಿದ್ದರು. ಆದರೆ, ಅದು ನಡೆದಾಗ ನನಗೆ ತುಂಬಾ ಕೋಪ ಬಂತು ಎಂದು ಹೇಳಿದ್ದಾರೆ.

6 / 7
ನಾನು ಆರ್​ಸಿಬಿ ಪರವಾಗಿ 8 ವರ್ಷ ಆಡಿದ್ದೇನೆ. ಈಗಲೂ ಚಿನ್ನಸ್ವಾಮಿ ನನ್ನ ನೆಚ್ಚಿನ ಮೈದಾನ. ಐಪಿಎಲ್ 2023 ರಲ್ಲಿ ನಾನು ಆರ್​ಸಿಬಿ ವಿರುದ್ಧ ಮೊದಲ ಪಂದ್ಯ ಆಡಿದಾಗ ಆರ್‌ಸಿಬಿ ಕೋಚ್‌ಗಳ ಜೊತೆ ಮಾತನಾಡಿಲ್ಲ. ಅಲ್ಲಿ ನಾನು ಯಾರೊಂದಿಗೂ ಮಾತನಾಡಲಿಲ್ಲ, ಎಂದು ಚಹಲ್ ಹೇಳಿದ್ದಾರೆ.

7 / 7
ಚಹಾಲ್ ಅವರಿಗೆ ಆರ್​ಸಿಬಿ ಕೇವಲ ಒಂದು ತಂಡವಾಗಿ ಇರಲಿಲ್ಲ. ಬೆಂಗಳೂರು ಅಭಿಮಾನಿಗಳ ಪ್ರೋತ್ಸಾಹ, ಸತತವಾಗಿ ಪಂದ್ಯವನ್ನು ಸೋತರು ಕೈಬಿಡದ ಫ್ಯಾನ್ಸ್ ನಿಯತ್ತಿಗೆ ಮನಸೋತಿದ್ದರು. ಇದಕ್ಕಾಗಿಯೆ ಈ ಹಿಂದೆ ಚಹಾಲ್ ಅವರು, ಆರ್​ಸಿಬಿ ಹಾಗೂ ನನ್ನ ನಡುವೆ ವಿಶೇಷ ಸಂಬಂಧವಿದೆ, ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದರು.

Published On - 9:58 am, Sun, 16 July 23