ಟೀಮ್ ಇಂಡಿಯಾದಲ್ಲಿಲ್ಲ ಸ್ಥಾನ: ವಿದೇಶದಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ ಯುಜ್ವೇಂದ್ರ ಚಹಲ್

|

Updated on: Aug 15, 2024 | 1:04 PM

Yuzvendra Chahal: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್​ನಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಕಣಕ್ಕಿಳಿದಿರುವ ಯುಜ್ವೇಂದ್ರ ಚಹಲ್ ಕೇವಲ 14 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಅದು ಸಹ ತಮ್ಮ ಚೊಚ್ಚಲ ಕೌಂಟಿ ಪಂದ್ಯದಲ್ಲಿ ಎಂಬುದು ವಿಶೇಷ. ಈ ಮೂಲಕ ಟೀಮ್ ಇಂಡಿಯಾದಿಂದ ಹೊರಗಿಟ್ಟಿರುವ ಆಯ್ಕೆಗಾರರಿಗೆ ತಮ್ಮ ಸ್ಪಿನ್ ಮೋಡಿಯೊಂದಿಗೆ ಚಹಲ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

1 / 5
ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಿಂದ ಕೈ ಬಿಡಲಾಗಿತ್ತು. ಮತ್ತೊಂದೆಡೆ ದುಲೀಪ್ ಟ್ರೋಫಿಗೆ ಆಯ್ಕೆ ಮಾಡಲಾದ 4 ತಂಡಗಳಲ್ಲೂ ಅವರಿಗೆ ಸ್ಥಾನ ನೀಡಲಾಗಿಲ್ಲ. ಇದರ ಬೆನ್ನಲ್ಲೇ ಯುಜ್ವೇಂದ್ರ ಚಹಲ್ ವಿದೇಶದತ್ತ ಮುಖ ಮಾಡಿದ್ದಾರೆ.

2 / 5
ಹೌದು, ಯುಜ್ವೇಂದ್ರ ಚಹಲ್ ಪ್ರಸ್ತುತ ನಡೆಯುತ್ತಿರುವ ಒನ್ ಡೇ ಕಪ್ ಕ್ರಿಕೆಟ್ ಟೂರ್ನಿ ಆಡುತ್ತಿದ್ದಾರೆ. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಈ ಲೀಗ್​ನಲ್ಲಿ ಚಹಲ್ ನಾರ್ಥಾಂಪ್ಟನ್‌ಶೈರ್ ತಂಡದ ಪರ ಕಣಕ್ಕಿಳಿದಿದ್ದಾರೆ. ಅಷ್ಟೇ ಅಲ್ಲದೆ ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್ ಕಬಳಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದು ವಿಶೇಷ.

3 / 5
ಕ್ಯಾಂಟರ್ಬರಿಯ ಸೇಂಟ್ ಲಾರೆನ್ಸ್ ಗ್ರೌಂಡ್​ನಲ್ಲಿ ನಡೆದ ಪಂದ್ಯದಲ್ಲಿ ಕೆಂಟ್ ಹಾಗೂ ನಾರ್ಥಾಂಪ್ಟನ್‌ಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಂಟ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಯುಜ್ವೇಂದ್ರ ಚಹಲ್ ದಾಳಿಗಿಳಿಯುತ್ತಿದ್ದಂತೆ ಕೆಂಟ್ ತಂಡದ ಎಲ್ಲಾ ಲೆಕ್ಕಾಚಾರಗಳು ತಲೆ ಕೆಳಗಾಗಿವೆ.

4 / 5
ಏಕೆಂದರೆ ಸೇಂಟ್ ಲಾರೆನ್ಸ್ ಪಿಚ್​ನಲ್ಲಿ ಸ್ಪಿನ್ ಮೋಡಿ ಮಾಡಿದ ಯುಜ್ವೇಂದ್ರ ಚಹಲ್ ಕೆಂಟ್ ತಂಡದ ಬ್ಯಾಟಿಂಗ್ ಬೆನ್ನಲುಬನ್ನೇ ಮುರಿದಿದ್ದಾರೆ. 10 ಓವರ್​ ಎಸೆತಗಳನ್ನು ಎಸೆದ ಚಹಲ್ 5 ಮೇಡನ್ ಓವರ್​ಗಳೊಂದಿಗೆ ಕೇವಲ 14 ರನ್ ನೀಡಿ 5 ವಿಕೆಟ್ ಉಳಿಸಿದ್ದಾರೆ. ಈ ಮೂಲಕ ಕೆಂಟ್ ತಂಡವನ್ನು 35.1 ಓವರ್​ಗಳಲ್ಲಿ 82 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

5 / 5
ಇನ್ನು 83 ರನ್​ಗಳ ಸುಲಭ ಗುರಿ ಪಡೆದ ನಾರ್ಥಾಂಪ್ಟನ್‌ಶೈರ್ ಪರ ಆರಂಭಿಕ ಆಟಗಾರ ಪೃಥ್ವಿ ಶಾ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಜೇಮ್ಸ್ ಸೇಲ್ಸ್ (33) ಹಾಗೂ ಜಾರ್ಜ್ ಬಾರ್ಟ್ಲೆಟ್ (31) ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 14 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದ್ದಾರೆ. ಈ ಮೂಲಕ ನಾರ್ಥಾಂಪ್ಟನ್‌ಶೈರ್ ತಂಡವು 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.