ಟೀಂ ಇಂಡಿಯಾದಲ್ಲಿ ಮೊದಲ ವಿದೇಶಿ ಮುಖ್ಯ ಕೋಚ್ ಆಗಿ ಕಾಣಿಸಿಕೊಂಡವರು ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜಾನ್ ರೈಟ್. 2000 ರಲ್ಲಿ ತಂಡದ ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡ ಜಾನ್ ರೈಟ್, ಭಾರತ ತಂಡಕ್ಕೆ ಸುದೀರ್ಘ ಸೇವೆ ಸಲ್ಲಿಸಿದ ತರಬೇತುದಾರರಲ್ಲಿ ಒಬ್ಬರಾಗಿದ್ದಾರೆ. ಜಾನ್ ರೈಟ್ ಅಧಿಕಾರಾವಧಿಯಲ್ಲಿ ಭಾರತ 1983 ರ ನಂತರ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಆಡಿತ್ತು. 2003 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನ ಫೈನಲ್ ಆಡಿದ್ದ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಆದಾಗ್ಯೂ ತನ್ನ ಅಧಿಕಾರಾವಧಿ ಮುಂದುವರೆಸಿದ್ದ ಜಾನ್ ರೈಟ್, 2005 ರಲ್ಲಿ ತಂಡದ ಮುಖ್ಯ ತರಬೇತುದಾರ ಹುದ್ದೆಗೆ ರಾಜೀನಾಮೆ ನೀಡಿದ್ದರು.