Zimbabwe: ಅಮೋಘ ಗೆಲುವಿನೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ಝಿಂಬಾಬ್ವೆ

Edited By:

Updated on: Jun 26, 2023 | 7:45 PM

Zimbabwe: . ವಿಶೇಷ ಎಂದರೆ ಇದು ಏಕದಿನ ಕ್ರಿಕೆಟ್​ನ 2ನೇ ಅತೀ ದೊಡ್ಡ ಅಂತರದ ಗೆಲುವುದಾಗಿದೆ. ಏಕದಿನ ಕ್ರಿಕೆಟ್​ನಲ್ಲಿ ಅತೀ ದೊಡ್ಡ ಅಂತರದಿಂದ ಗೆದ್ದ ವಿಶ್ವ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ.

1 / 9
ICC World Cup Qualifiers 2023: ಹರಾರೆಯ ಸ್ಪೋರ್ಟ್ಸ್ ಕ್ಲಬ್​ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್​ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಎಸ್​ ವಿರುದ್ಧ ಝಿಂಬಾಬ್ವೆ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ಪರ ನಾಯಕ ಸೀನ್ ವಿಲಿಯಮ್ಸ್ ಸ್ಪೋಟಕ ಇನಿಂಗ್ಸ್ ಆಡಿದ್ದರು.

ICC World Cup Qualifiers 2023: ಹರಾರೆಯ ಸ್ಪೋರ್ಟ್ಸ್ ಕ್ಲಬ್​ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್​ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಎಸ್​ ವಿರುದ್ಧ ಝಿಂಬಾಬ್ವೆ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ಪರ ನಾಯಕ ಸೀನ್ ವಿಲಿಯಮ್ಸ್ ಸ್ಪೋಟಕ ಇನಿಂಗ್ಸ್ ಆಡಿದ್ದರು.

2 / 9

ಜಾಯ್ಲಾರ್ಡ್ ಗುಂಬಿ (78) ಹಾಗೂ ಇನ್ನೊಸೆಂಟ್ (32) ಝಿಂಬಾಬ್ವೆ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲಿಯಮ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

3 / 9

ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ ವಿಲಿಯಮ್ಸ್​ ಅಬ್ಬರ ತಡೆಯುವಲ್ಲಿ ಯುಎಸ್​ಎ ಬೌಲರ್​ಗಳು ವಿಫಲರಾದರು. ಇತ್ತ ಝಿಂಬಾಬ್ವೆ ನಾಯಕ ಕೇವಲ 65 ಎಸೆತಗಳಲ್ಲಿ ಶತಕ ಪೂರೈಸಿ ಬ್ಯಾಟ್ ಮೇಲೆತ್ತಿದರು.

4 / 9

ಭರ್ಜರಿ ಶತಕದ ಬೆನ್ನಲ್ಲೇ ರನ್​ ಗತಿ ಹೆಚ್ಚಿಸಿದ ವಿಲಿಯಮ್ಸ್​ ಯುಎಸ್​ಎ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಸೀನ್ ವಿಲಿಯಮ್ಸ್​ ಬ್ಯಾಟ್​ನಿಂದ ಬರೋಬ್ಬರಿ 21 ಫೋರ್​ಗಳು ಹಾಗೂ 4 ಭರ್ಜರಿ ಸಿಕ್ಸ್​ಗಳು ಮೂಡಿಬಂತು. ಅಲ್ಲದೆ 101 ಎಸೆತಗಳಲ್ಲಿ 174 ರನ್​ ಬಾರಿಸಿ ಔಟಾದರು.

5 / 9

ಇನ್ನು ಕೆಳ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಸಿಕಂದರ್ ರಾಝ (48) ಹಾಗೂ ರಯಾನ್ ಬರ್ಲ್ (47) ತಂಡದ ಮೊತ್ತವನ್ನು 400ರ ಗಡಿದಾಟಿಸಿದರು. ಅಂತಿಮವಾಗಿ ಝಿಂಬಾಬ್ವೆ 6 ವಿಕೆಟ್ ನಷ್ಟಕ್ಕೆ 408 ರನ್ ಕಲೆಹಾಕಿತು.

6 / 9

409 ರನ್​ಗಳ ಬೃಹತ್ ಗುರಿ ಪಡೆದ ಯುಎಸ್​ಎ ಪರ ಅಭಿಷೇಕ್ ಪರಾಡ್ಕರ್ 24 ರನ್​ಗಳಿಸಿದ್ದು ಗರಿಷ್ಠ ಸ್ಕೋರ್. ಇತ್ತ ರಿಚರ್ಡ್​ ನಾಗರವ ಹಾಗೂ ಸಿಕಂದರ್ ರಾಝ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಇವಾನ್ಸ್, ಬರ್ಲ್​, ಜೊಂಗ್ವೆ ತಲಾ ಒಂದೊಂದು ವಿಕೆಟ್​ ಪಡೆದರು. ಹಾಗೆಯೇ ಮೂವರು ರನೌಟ್ ಆಗಿ ಹೊರನಡೆದರು. ಪರಿಣಾಮ ಯುಎಸ್​ಎ ತಂಡವು 104 ರನ್​ಗಳಿಗೆ ಆಯಿತು.

7 / 9

ಇದರೊಂದಿಗೆ ಝಿಂಬಾಬ್ವೆ ತಂಡವು 304 ರನ್​ಗಳ ಅಮೋಘ ಗೆಲುವು ದಾಖಲಿಸಿತು. ವಿಶೇಷ ಎಂದರೆ ಇದು ಏಕದಿನ ಕ್ರಿಕೆಟ್​ನ 2ನೇ ಅತೀ ದೊಡ್ಡ ಅಂತರದ ಗೆಲುವುದಾಗಿದೆ.

8 / 9

ಏಕದಿನ ಕ್ರಿಕೆಟ್​ನಲ್ಲಿ ಅತೀ ದೊಡ್ಡ ಅಂತರದಿಂದ ಗೆದ್ದ ವಿಶ್ವ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ. 2023 ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡವು 317 ರನ್​ಗಳ ಭರ್ಜರಿ ಜಯ ಸಾಧಿಸಿತ್ತು.

9 / 9

ಇದೀಗ ಯುಎಸ್ಎ ವಿರುದ್ಧ 304 ರನ್​ಗಳಿಂದ ಗೆಲುವು ದಾಖಲಿಸಿರುವ ಝಿಂಬಾಬ್ವೆ ಈ ವಿಶ್ವ ದಾಖಲೆ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದೆ. ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ 300 ಕ್ಕಿಂತ ಅಧಿಕ ರನ್​ಗಳಿಂದ ಜಯ ಸಾಧಿಸಿದ 2ನೇ ತಂಡ ಎಂಬ ವಿಶ್ವ ದಾಖಲೆಯನ್ನೂ ಕೂಡ ನಿರ್ಮಿಸಿದೆ.

Loading...
Unable to load recommendations.
Follow Us