SL Vs ZIM: ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಸಿಕಂದರ್ ರಾಝಾ; ಕೊಹ್ಲಿ- ರೋಹಿತ್ಗೂ ಇದು ಸಾಧ್ಯವಾಗಿಲ್ಲ
SL Vs ZIM: ಈ ಪಂದ್ಯದಲ್ಲಿ ಜಿಂಬಾಬ್ವೆ ಪರ ನಾಯಕನ ಆಟ ಆಡಿದ ಸಿಕಂದರ್ ರಾಝಾ 42 ಎಸೆತಗಳಲ್ಲಿ 62 ಕಲೆಹಾಕಿದರು. ಈ ಅರ್ಧಶತಕದೊಂದಿಗೆ ಟಿ20ಯಲ್ಲಿ ಹೊಸ ಇತಿಹಾಸ ಕೂಡ ಸೃಷ್ಟಿಸಿದರು. ವಾಸ್ತವವಾಗಿ ಭಾರತದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಂದಲೂ ಈ ದಾಖಲೆ ಮಾಡಲು ಸಾಧ್ಯವಾಗಿಲ್ಲ.
1 / 7
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 143 ರನ್ ಕಲೆಹಾಕಿತು. ಈ ಗುರಿಯನ್ನು ಲಂಕಾ ಪಡೆ ಕೊನೆಯ ಎಸೆತದಲ್ಲಿ ಸಾಧಿಸಿತು.
2 / 7
ಇನ್ನು ಈ ಪಂದ್ಯದಲ್ಲಿ ಜಿಂಬಾಬ್ವೆ ಪರ ನಾಯಕನ ಆಟ ಆಡಿದ ಸಿಕಂದರ್ ರಾಝಾ 42 ಎಸೆತಗಳಲ್ಲಿ 62 ಕಲೆಹಾಕಿದರು. ಈ ಅರ್ಧಶತಕದೊಂದಿಗೆ ಟಿ20ಯಲ್ಲಿ ಹೊಸ ಇತಿಹಾಸ ಕೂಡ ಸೃಷ್ಟಿಸಿದರು. ವಾಸ್ತವವಾಗಿ ಭಾರತದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಂದಲೂ ಈ ದಾಖಲೆ ಮಾಡಲು ಸಾಧ್ಯವಾಗಿಲ್ಲ.
3 / 7
ಸಿಕಂದರ್ ರಾಝಾ ಶ್ರೀಲಂಕಾ ವಿರುದ್ಧ ಸತತ 5ನೇ ಅರ್ಧಶತಕ ದಾಖಲಿಸಿದ್ದಾರೆ. ಜನವರಿ 14 ರಂದು ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಕೇವಲ 42 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 62 ರನ್ ಸಿಡಿಸಿದರು. ಇದು ಟಿ20 ಕ್ರಿಕೆಟ್‌ನಲ್ಲಿ ರಾಝಾ ಅವರ ಸತತ ಐದನೇ ಅರ್ಧಶತಕ.
4 / 7
ಈ ಅರ್ಧಶತಕದ ಇನ್ನಿಂಗ್ಸ್‌ನೊಂದಿಗೆ ಸಿಕಂದರ್ ಟಿ20ಯಲ್ಲಿ ಸತತ 5 ಅರ್ಧಶತಕ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಬ್ಯಾಟ್ಸ್‌ಮನ್‌ಗಳು ಸಹ ಈ ಸಾಧನೆ ಮಾಡಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ .
5 / 7
ವಿರಾಟ್ ಮತ್ತು ರೋಹಿತ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಲಾ 3 ಬಾರಿ ಮಾತ್ರ ಸತತ ಅರ್ಧಶತಕಗಳನ್ನು ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಆದರೆ ಸತತ 5 ಅರ್ಧಶತಕಗಳನ್ನು ಗಳಿಸಲು ಈ ಇಬ್ಬರಿಗೂ ಸಾಧ್ಯವಾಗಿಲ್ಲ.
6 / 7
ಸಿಕಂದರ್ ರಾಝಾ ಟಿ20 ಪಂದ್ಯದಲ್ಲಿ ಸತತ 5 ಅರ್ಧಶತಕ ಗಳಿಸುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ರಾಝಾ 7 ಡಿಸೆಂಬರ್ 2023 ರಂದು ಐರ್ಲೆಂಡ್ ವಿರುದ್ಧ 42 ಎಸೆತಗಳಲ್ಲಿ 65 ರನ್ ಗಳಿಸಿದ್ದರು.
7 / 7
ಹಾಗೆಯೇ ಕೀನ್ಯಾ ವಿರುದ್ಧ 48 ಎಸೆತಗಳಲ್ಲಿ 82 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದ್ದರು. ನೈಜೀರಿಯಾ ವಿರುದ್ಧವೂ 37 ಎಸೆತಗಳಲ್ಲಿ 65 ರನ್ ಗಳಿಸಿದ್ದರು. ಇದಲ್ಲದೆ, ರುವಾಂಡಾ ವಿರುದ್ಧವೂ 36 ಎಸೆತಗಳಲ್ಲಿ 58 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದಲ್ಲದೇ ಈ 5 ಪಂದ್ಯಗಳಲ್ಲಿ ರಾಝಾ ಒಟ್ಟು 13 ವಿಕೆಟ್ ಕೂಡ ಕಬಳಿಸಿದ್ದಾರೆ.