ಪ್ರಧಾನ ಮಂತ್ರಿ, ಪೈಲಟ್, ಪತ್ರಕರ್ತ, ವಕೀಲ; ಕ್ರಿಕೆಟ್​ ಬಿಟ್ಟು ಬೇರೆ ವೃತ್ತಿಯಲ್ಲಿ ಮಿಂಚಿದವರ ಬಗ್ಗೆ ನಿಮಗೆಷ್ಟು ಗೊತ್ತು?

|

Updated on: May 28, 2021 | 6:31 PM

ಮಾಜಿ ಇಂಗ್ಲೆಂಡ್ ಪ್ರಧಾನಿ ಡೌಗ್ಲಾಸ್ ಹೋಮ್ ಕೌಂಟಿ ಕ್ರಿಕೆಟ್‌ನಲ್ಲಿ ಮಿಡ್ಲ್‌ಸೆಕ್ಸ್ ಅನ್ನು ಪ್ರತಿನಿಧಿಸಿದ್ದರು. 1951 ರಲ್ಲಿ ಅವರು ಈಜಿಪ್ಟ್ ತಂಡದ ವಿರುದ್ಧವೂ ಆಡಿದರು.

1 / 9
ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದವರು ಅಲ್ಲಿಂದ ನಿವೃತ್ತರಾದ ಬಳಿಕ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಸಕ್ರಿಯನಾಗಿರುತ್ತಾರೆ. ಕೆಲವರು ತರಬೇತುದಾರರಾದರೆ, ಇನ್ನೂ ಕೆಲವರು ಅಂಪೈರ್ ಅಥವಾ ನಿರೂಪಕರಾಗುತ್ತಾರೆ. ಆದರೆ ಕ್ರೀಡೆಯನ್ನು ತೊರೆದು ಮತ್ತೊಂದು ವೃತ್ತಿಯನ್ನು ಆರಿಸಿಕೊಂಡ ಅನೇಕ ಹೆಸರುಗಳಿವೆ. ಕೆಲವು ಕ್ರಿಕೆಟಿಗರು ತಮ್ಮ ವೃತ್ತಿಜೀವನವನ್ನು ಮಧ್ಯದಲ್ಲಿ ಬಿಟ್ಟು ಬೇರೆ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಕೆಲವರು ವಕೀಲರಾದರು ಮತ್ತು ಕೆಲವರು ಪೈಲಟ್ ಆದರು. ಕ್ರಿಕೆಟ್ ಆಡಿದ ನಂತರ ಬೇರೆ ಕೆಲಸ ಮಾಡಲು ಹೋದ ಇಂತಹ ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ.

2 / 9
ಜೋಗಿಂದರ್ ಶರ್ಮಾ - 2007 ರ ಟಿ 20 ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಕೊನೆಯ ಓವರ್ ಹಾಕುವ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದ ಈ ಆಟಗಾರ ನಂತರ ಪೊಲೀಸರಾದರು. ಜೋಗಿಂದರ್ ಶರ್ಮಾ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದಾರೆ.

3 / 9
ಅಲೆಕ್ ಡೌಗ್ಲಾಸ್ ಹೋಮ್ - ಮಾಜಿ ಇಂಗ್ಲೆಂಡ್ ಪ್ರಧಾನಿ ಡೌಗ್ಲಾಸ್ ಹೋಮ್ ಕೌಂಟಿ ಕ್ರಿಕೆಟ್‌ನಲ್ಲಿ ಮಿಡ್ಲ್‌ಸೆಕ್ಸ್ ಅನ್ನು ಪ್ರತಿನಿಧಿಸಿದ್ದರು. 1951 ರಲ್ಲಿ ಅವರು ಈಜಿಪ್ಟ್ ತಂಡದ ವಿರುದ್ಧವೂ ಆಡಿದರು. ಅವರು 1963 ರಿಂದ 1964 ರವರೆಗೆ ಇಂಗ್ಲೆಂಡ್ ಪ್ರಧಾನ ಮಂತ್ರಿಯಾಗಿದ್ದರು.

4 / 9
ಕ್ರಿಸ್ ಹ್ಯಾರಿಸ್ - ಈ ನ್ಯೂಜಿಲೆಂಡ್ ಆಲ್‌ರೌಂಡರ್ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ವೈದ್ಯಕೀಯ ಪ್ರತಿನಿಧಿಯಾದರು. ಇಲ್ಲಿ ಅವರು ಮೂಳೆಚಿಕಿತ್ಸಕ ಸಾಧನಗಳನ್ನು ಮಾರಾಟ ಮಾಡುತ್ತಿದ್ದರು. ಮಗಳು ಅನಾರೋಗ್ಯಕ್ಕೆ ಒಳಗಾದ ನಂತರ ಅವರು ಈ ನಿರ್ಧಾರಕ್ಕೆ ಬಂದರು.

5 / 9
ಕಿರ್ಟ್ಲಿ ಆಂಬ್ರೋಸ್ - ಕ್ರಿಕೆಟ್ ಪಿಚ್‌ನಲ್ಲಿ ಈ ವೆಸ್ಟ್​ ಇಂಡಿಸ್​ನ ವೇಗದ ಬೌಲರ್ ಸಾಕಷ್ಟು ದಾಂಡಿಗರಿಗೆ ತೊಂದರೆ ನೀಡಿದ್ದಾರೆ. ಆದರೆ ಅವರು ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, ಗಿಟಾರ್ ವಾದಕರಾದರು ಮತ್ತು ಬ್ಯಾಂಡ್ ತಂಡವನ್ನು ಕಟ್ಟಿದರು. ಅವರ ತಂಡದ ಹೆಸರು ಬಿಗ್ ಬ್ಯಾಡ್ ಡ್ರೆಡ್ ಮತ್ತು ಬಾಲ್ಡ್ ಹೆಡ್.

6 / 9
ಇಜಾಬೆಲ್ ವೆಸ್ಟ್ಬರಿ - ಈ ಮಹಿಳಾ ಕ್ರಿಕೆಟರ್ ನೆದರ್ಲ್ಯಾಂಡ್ಸ್ ಪರ ಏಕದಿನ ಪಂದ್ಯವನ್ನು ಆಡಿದ್ದಾರೆ. ನಿವೃತ್ತರಾದ ಬಳಿಕ ಅವರು ಪತ್ರಕರ್ತರಾದರು. ಅವರು ಕ್ರೀಡಾ ಪತ್ರಿಕೋದ್ಯಮ ಕೆಲಸದಲ್ಲಿ ನಿರತರಾಗಿದ್ದಾರೆ. ಇಜಾಬೆಲ್ ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡಿದ್ದಾರೆ ಮತ್ತು ಮಿಡಲ್‌ಸೆಕ್ಸ್‌ನ ನಾಯಕರಾಗಿದ್ದಾರೆ

7 / 9
ಜ್ಯಾಕ್ ರಸ್ಸೆಲ್ - ಈ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ರಿಕೆಟ್‌ನಿಂದ ದೂರವಾದ ನಂತರ ವರ್ಣಚಿತ್ರ ಕಲಾಕಾರರಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಅವರು ಕಳೆದ 30 ವರ್ಷಗಳಿಂದ ಚಿತ್ರಕಲೆ ಮಾಡುತ್ತಿದ್ದಾರೆ. ಅವರ ವರ್ಣಚಿತ್ರಗಳನ್ನು ಟವರ್ ಆಫ್ ಲಂಡನ್ ಮತ್ತು ಬ್ರಾಡ್ಮನ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

8 / 9
ಟ್ರಾವಿಸ್ ಫ್ರೆಂಡ್ - ಜಿಂಬಾಬ್ವೆಯ ಆಟಗಾರನ ಕ್ರಿಕೆಟಿಂಗ್ ವೃತ್ತಿಜೀವನವು 24 ನೇ ವಯಸ್ಸಿನಲ್ಲಿ ಸ್ಥಗಿತಗೊಂಡಿತು. ಕ್ಯಾಪ್ಟನ್ ಹೀತ್ ಸ್ಟ್ರೀಕ್ ಅವರೊಂದಿಗಿನ ಹೋರಾಟದಿಂದಾಗಿ  14 ಆಟಗಾರರನ್ನು ಜಿಂಬಾಬ್ವೆ ಕ್ರಿಕೆಟ್ ಯೂನಿಯನ್ ತಂಡದಿಂದ ತೆಗೆದುಹಾಕಿತು. ಇದರ ನಂತರ, ಟ್ರಾವಿಸ್ ಫ್ರೆಂಡ್ ಕೆಲವು ವರ್ಷಗಳ ಕಾಲ ಕ್ರಿಕೆಟ್ ಆಡಿದರೂ ನಂತರ ಪೈಲಟ್ ಆದರು. ಅವರು ಮಧ್ಯಪ್ರಾಚ್ಯಕ್ಕೆ ತೆರಳಿ ವಿಮಾನವನ್ನು ಹಾರಿಸುವ ತಮ್ಮ ವೃತ್ತಿಯನ್ನು ಆರಂಭಿಸಿದರು. ಅವರು ಕತಾರ್ ಏರ್ವೇಸ್ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಟ್ರಾವಿಸ್ ಫ್ರೆಂಡ್ ಪೈಲಟ್ ಆಗುವ ಮೊದಲು ವೇಗದ ಬೌಲರ್ ಆಗಿದ್ದರು.

9 / 9
ಜಾಫರ್ ಅನ್ಸಾರಿ- ಈ ಇಂಗ್ಲೆಂಡ್ ಆಟಗಾರ ಕೇವಲ 25 ನೇ ವಯಸ್ಸಿನಲ್ಲಿ ನಿವೃತ್ತಿ ಪಡೆದರು. ಬಳಿಕ ಅನ್ಸಾರಿ ವಕೀಲರಾಗಲು ನಿರ್ದರಿಸಿದರು. ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಅವರು ಇಂಗ್ಲೆಂಡ್ ಪರ ಮೂರು ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳನ್ನು ಆಡಿದ್ದಾರೆ.