
ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ಪ್ರೀಮಿಯರ್ ಲೀಗ್‌ನಲ್ಲಿ ಟೊಟೆನ್‌ಹ್ಯಾಮ್ ವಿರುದ್ಧ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುತ್ತಿರುವಾಗ ರೊನಾಲ್ಡೊ ಈ ಸಾಧನೆಯನ್ನು ಮಾಡಿದರು. ಮ್ಯಾಂಚೆಸ್ಟರ್ ಯುನೈಟೆಡ್ 3-2 ಗೋಲುಗಳಿಂದ ಟೊಟೆನ್‌ಹ್ಯಾಮ್ ಅನ್ನು ಸೋಲಿಸಿತು. ಇದರಲ್ಲಿ ರೊನಾಲ್ಡೊ ಮೂರು ಗೋಲುಗಳನ್ನು ಗಳಿಸಿದರು.

ಶನಿವಾರ ಪ್ರೀಮಿಯರ್ ಲೀಗ್‌ನಲ್ಲಿ ಟೊಟೆನ್‌ಹ್ಯಾಮ್ ವಿರುದ್ಧ ರೊನಾಲ್ಡೊ ಹ್ಯಾಟ್ರಿಕ್ ಗೋಲು ಗಳಿಸಿದರು. ಪಂದ್ಯದ 12ನೇ ನಿಮಿಷದಲ್ಲಿ ಅವರು ತಮ್ಮ ವೃತ್ತಿ ಜೀವನದ 805ನೇ ಗೋಲು ದಾಖಲಿಸಿದರು.



Published On - 2:43 pm, Sun, 13 March 22