
ಊಟದ ಜೊತೆ ಅಥವಾ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವವರು ನಮ್ಮಲ್ಲಿ ಸಾಕಷ್ಟು ಜನ ಇದ್ದಾರೆ. ಮೊಸರನ್ನ ತಿನ್ನದೆ ಹೋದ್ರೆ ಕೆಲವರಿಗೆ ಊಟ ಅಪೂರ್ಣ ಎನ್ನಿಸಬಹುದು. ಈ ಮೊಸರನ್ನ ತಿನ್ನವುದುರಿಂದ ಸಾಕಷ್ಟ ಲಾಭಗಳಿವೆ ಅವುಗಳನ್ನು ತಿಳಿದುಕೊಳ್ಳೋಣ.

ಕಣ್ಣು ಮತ್ತು ಚರ್ಮಕ್ಕೆ ಪೋಷಣೆ ನೀಡುವುದರೊಂದಿಗೆ ಮೊಸರನ್ನ ಸೇವನೆಯಿಂದ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಪ್ರೋಬಯಾಟಿಕ್‌ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ಒತ್ತಡವನ್ನು ನಿವಾರಿಸುತ್ತದೆ.

ಕರುಳಿನ ಸಮಸ್ಯೆ, ಖಿನ್ನತೆ, ಒತ್ತಡ ಮತ್ತು ಆತಂಕದಂತಹ ವಿವಿಧ ಸಮಸ್ಯೆಗಳಿಗೆ ಮೊಸರನ್ನ ಸಹಕಾರಿಯಾಗಿದೆ.

ಲ್ಯಾಕ್ಟೋಬಾಸಿಲಸ್ ಬಲ್ಗೇರಿಕಸ್ ಎಂಬುದು ಮೊಸರನ್ನದಲ್ಲಿ ಇರುವ ಬ್ಯಾಕ್ಟೀರಿಯಾ. ಈ ಬ್ಯಾಕ್ಟೀರಿಯಾಗಳು ಕರುಳು ಮತ್ತು ಹೊಟ್ಟೆಯ ಒಳಪದರದ ಮೇಲೆ ಕೆಲಸ ಮಾಡುತ್ತವೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.
Published On - 8:22 pm, Mon, 27 February 23