Updated on: Nov 13, 2022 | 10:10 AM
ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಕೆರೆ 43 ವರ್ಷಗಳ ನಂತರ ಭರ್ತಿಯಾಗಿ ಕೋಡಿಬಿದ್ದಿದೆ. ಹೀಗಾಗಿ ಕೆರೆ ಸುತ್ತಮುತ್ತಲಿನ 13 ಹಳ್ಳಿ ಜನರು ಶನಿವಾರ ಕೆರೆ ಹೊನ್ನಮ್ಮ ಜಾತ್ರೆ ಆಚರಿಸಿದ್ದಾರೆ. ಕೆರೆ ಹೊನ್ನಮ್ಮ ಜಾತ್ರೆ ಕಾರ್ಯಕ್ರಮಕ್ಕೆ ಹತ್ತಾರು ಗ್ರಾಮದ ಸಹಸ್ರಾರು ಜನ ಸಾಕ್ಷಿಯಾಗಿದ್ದಾರೆ.
ಕೆರೆ ಭರ್ತಿಗೊಂಡ ಹಿನ್ನೆಲೆ ಕೆರೆಯಾಗಳಹಳ್ಳಿ ಸೇರಿದಂತೆ 13 ಗ್ರಾಮಗಳ ಜನತೆ ಅಣಜಿ ಕೆರೆ ಬಾಗಿನ ಅರ್ಪಿಸಿದ್ದಾರೆ. ಪ್ರತಿವರ್ಷದಂತೆ ಕೆರೆ ದಂಡೆಯಲ್ಲಿ ಕೆರೆ ಹೊನ್ನಮ್ಮ ಜಾತ್ರೆ ಆಚರಿಸುವುದು ಸಂಪ್ರದಾಯ. ಬೆಳಿಗ್ಗೆಯಿಂದಲೇ ಸುತ್ತಮುತ್ತಲ ಗ್ರಾಮಗಳ ನೂರಾರು ಮಹಿಳೆಯರು ಈ ಭಾಗದ ಜನಪ್ರತಿನಿಧಿಗಳು ಗ್ರಾಮ ದೇವತೆಗಳ ಸಮ್ಮುಖದಲ್ಲಿ ಕೆರೆಗೆ ಹಾಲು ತುಪ್ಪ ಬಿಟ್ಟು ಬಾಗಿನ ಅರ್ಪಿಸಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Davanagere Anaji Kere Honnamma Fair Celebrations Davanagere news in kannada
Published On - 10:10 am, Sun, 13 November 22