Deepavali 2023: ಪರಿಸರಸ್ನೇಹಿಯಾಗಿ ದೀಪಾವಳಿ ಆಚರಿಸಲು 5 ಸಲಹೆಗಳು ಇಲ್ಲಿವೆ
Diwali Festival: ಪರಿಸರದ ಮೇಲೆ ಪಟಾಕಿಗಳ ಪ್ರಭಾವ ಕೆಟ್ಟದಾಗಿರುತ್ತದೆ ಎಂದು ಗೊತ್ತಾದ ಮೇಲೆ ಪಟಾಕಿ ಸಿಡಿಸಿ ವಾಯುಮಾಲಿನ್ಯವನ್ನು ಇನ್ನಷ್ಟು ಹೆಚ್ಚಿಸುವುದು ಸರಿಯಲ್ಲ. ಪರಿಸರಸ್ನೇಹಿಯಾಗಿ ದೀಪಾವಳಿಯನ್ನು ಆಚರಿಸಲು ನೀವು ಯೋಚಿಸುತ್ತಿದ್ದರೆ ಅದಕ್ಕೆ ಕೆಲವು ಸಲಹೆಗಳು ಇಲ್ಲಿವೆ.
1 / 8
ದೀಪಗಳ ಹಬ್ಬವಾದ ದೀಪಾವಳಿಯು ಎಲ್ಲರೂ ಇಷ್ಟಪಡುವ ಹಬ್ಬ. ದೀಪಾವಳಿಯಲ್ಲಿ ನಾವು ಹಣತೆಗಳನ್ನು ಹಚ್ಚಿ, ಪಟಾಕಿ ಸಿಡಿಸಿ, ಗೋಪೂಜೆ ಮಾಡಿ ಹಬ್ಬವನ್ನು ಆಚರಿಸುತ್ತೇವೆ.
2 / 8
ದೀಪಾವಳಿಯಲ್ಲಿ ದೀಪಗಳು ಮತ್ತು ಪಟಾಕಿಗಳನ್ನು ಹಚ್ಚಲಾಗುತ್ತದೆ. ಇದು ಬಹಳಷ್ಟು ವಾಯು ಮತ್ತು ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದು ಆಸ್ತಮಾ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ (COPD) ಮತ್ತು ಇತರ ಉಸಿರಾಟದ ತೊಂದರೆ ಇರುವ ಜನರ ಮೇಲೆ ಭೀಕರ ಪರಿಣಾಮಗಳನ್ನು ಉಂಟುಮಾಡಬಹುದು.
3 / 8
ಪರಿಸರದ ಮೇಲೆ ಪಟಾಕಿಗಳ ಪ್ರಭಾವ ಕೆಟ್ಟದಾಗಿರುತ್ತದೆ ಎಂದು ಗೊತ್ತಾದ ಮೇಲೆ ಪಟಾಕಿ ಸಿಡಿಸಿ ವಾಯುಮಾಲಿನ್ಯವನ್ನು ಇನ್ನಷ್ಟು ಹೆಚ್ಚಿಸುವುದು ಸರಿಯಲ್ಲ. ಪರಿಸರಸ್ನೇಹಿಯಾಗಿ ದೀಪಾವಳಿಯನ್ನು ಆಚರಿಸಲು ನೀವು ಯೋಚಿಸುತ್ತಿದ್ದರೆ ಅದಕ್ಕೆ ಕೆಲವು ಸಲಹೆಗಳು ಇಲ್ಲಿವೆ.
4 / 8
ಹಣತೆಗಳೊಂದಿಗೆ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಿ. ಮಾರುಕಟ್ಟೆಯಲ್ಲಿ ಹಲವಾರು ಸುಂದರವಾದ ಪರಿಸರ ಸ್ನೇಹಿ ಆಯ್ಕೆಗಳು ಲಭ್ಯವಿರುವಾಗ ಪರಿಸರಕ್ಕೆ ಒಳ್ಳೆಯದಲ್ಲದ ಪ್ಲಾಸ್ಟಿಕ್ ಹಣತೆಗಳನ್ನು ಖರೀದಿಸುವುದನ್ನು ನಿಲ್ಲಿಸಿ. ಪ್ಲಾಸ್ಟಿಕ್ ಬದಲು ಸಾಂಪ್ರದಾಯಿಕ ಮಣ್ಣಿನ ಹಣತೆಗಳನ್ನು ಆರಿಸಿಕೊಳ್ಳಿ. ಇದರಿಂದ ನೀವು ಸ್ಥಳೀಯ ಕುಶಲಕರ್ಮಿಗಳನ್ನು ಸಹ ಪ್ರೋತ್ಸಾಹಿಸಬಹುದು.
5 / 8
ನಿಮ್ಮ ರಂಗೋಲಿಗೆ ನೈಸರ್ಗಿಕ ಬಣ್ಣಗಳನ್ನು ತುಂಬಿ. ದೀಪಾವಳಿಯಂದು ರಂಗೋಲಿಗಳನ್ನು ಹಾಕುವುದೆಂದರೆ ಎಲ್ಲರಿಗೂ ಇಷ್ಟವಾಗುವ ವಿಷಯ. ಇದು ಅನಾದಿ ಕಾಲದಿಂದ ಅನುಸರಿಸುತ್ತಿರುವ ಸಂಪ್ರದಾಯವಾಗಿದೆ. ಈ ವರ್ಷ, ರಂಗೋಲಿಗೆ ರಾಸಾಯನಿಕಯುಕ್ತ ಬಣ್ಣಗಳ ಬದಲು ನೈಸರ್ಗಿಕ ಬಣ್ಣಗಳನ್ನು ಹಾಕಿ. ನಿಮ್ಮ ರಂಗೋಲಿಯನ್ನು ಹೆಚ್ಚು ಪರಿಸರ ಸ್ನೇಹಿಯನ್ನಾಗಿ ಮಾಡಲು ನೀವು ಅಕ್ಕಿ ಹಿಟ್ಟು, ಅರಿಶಿನ, ಮಾರಿಗೋಲ್ಡ್ಸ್, ಗುಲಾಬಿ ಎಸಳು, ಸೇವಂತಿಗೆ ಎಸಳುಗಳನ್ನು ಬಳಸಬಹುದು.
6 / 8
ಪರಿಸರ ಸ್ನೇಹಿ ಉಡುಗೊರೆಗಳನ್ನು ನೀಡಿ. ದೀಪಾವಳಿಯಂದು ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಅಲಂಕಾರಿಕ ವಸ್ತುಗಳನ್ನು ಉಡುಗೊರೆಯಾಗಿ ನೀಡಲು ನೀವು ಇಷ್ಟಪಡುತ್ತೀರಾ? ಈ ವರ್ಷ ನಿಮ್ಮ ಸ್ನೇಹಿತರಿಗೆ ಸ್ವಲ್ಪ ಹೆಚ್ಚು ಪರಿಸರ ಸ್ನೇಹಿ ಉಡುಗೊರೆಯಾಗಿ ನೀಡಲು ನೀವು ಏಕೆ ಪ್ರಯತ್ನಿಸಬಾರದು? ಅವರಿಗೆ ಪಾಟ್ನಲ್ಲಿರುವ ಗಿಡ, ಸಾವಯವ ಉತ್ಪನ್ನಗಳು, ಕೈಯಿಂದ ಮಾಡಿದ ಅಥವಾ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಿ.
7 / 8
ಪರಿಸರ ಸ್ನೇಹಿ ಪಟಾಕಿ ಅಥವಾ ಹಸಿರು ಪಟಾಕಿ ಸಿಡಿಸಿ. ನಿಮ್ಮ ದೀಪಾವಳಿಯನ್ನು ಪರಿಸರ ಸ್ನೇಹಿಯನ್ನಾಗಿ ಮಾಡಲು ಉತ್ತಮ ಮಾರ್ಗವೆಂದರೆ ಪಟಾಕಿಗಳನ್ನು ಸಿಡಿಸದಿರುವುದು. ಆದರೂ ನಿಮಗೆ ಪಟಾಕಿ ಹೊಡೆಯಲು ಇಷ್ಟವಿದ್ದರೆ ಕಡಿಮೆ ಶಬ್ದ ಮತ್ತು ಹೊಗೆಯನ್ನು ಉತ್ಪಾದಿಸುವ ಪಟಾಕಿಗಳನ್ನು ಮಾತ್ರ ಸಿಡಿಸಿ.
8 / 8
ಎಲ್ಇಡಿ ದೀಪಗಳನ್ನು ಬಳಸಿ. ದೀಪಾವಳಿಯು ಬೆಳಕಿನ ಹಬ್ಬವಾಗಿದೆ. ಈ ಹಬ್ಬದಂದು ನಿಮ್ಮ ಮನೆಯು ಪ್ರಕಾಶಮಾನವಾಗಿ ಬೆಳಗಬೇಕೆಂದು ನೀವು ಬಯಸಿದರೆ ನಿಮ್ಮ ಮನೆಗಳನ್ನು ಅಲಂಕರಿಸಲು ನೀವು ಪರಿಸರ ಸ್ನೇಹಿ ಎಲ್ಇಡಿ ದೀಪಗಳನ್ನು ಆಯ್ಕೆ ಮಾಡಬಹುದು.
Published On - 2:20 pm, Wed, 8 November 23