ಭಾರತದ 5 ಪಟ್ಟಣಗಳು ರಾಕ್ಷಸರ ಹೆಸರಿನಿಂದ ಕರೆಯಲ್ಪಡುತ್ತವೆ, ಚಿತ್ರ ಸಹಿತ ಇತಿಹಾಸ ಇಲ್ಲಿದೆ

|

Updated on: May 10, 2021 | 1:02 PM

ನಮ್ಮ ದೇಶದಲ್ಲಿ ಹಲವು ಸ್ಥಳಗಳು, ರಸ್ತೆಗಳಿಗೆ ಮಹಾನ್ ವ್ಯಕ್ತಿಗಳ ಹೆಸರನ್ನು ಇಡಲಾಗುತ್ತದೆ. ಹಾಗೆಯೇ ಇನ್ನು ಕೆಲವು ಊರುಗಳಿಗೆ ಅಥವಾ ಸ್ಥಳಗಳಿಗೆ ದೇವರ ಹೆಸರಿಡುವುದನ್ನು ನೋಡಿರುತ್ತೇವೆ. ಆದರೆ ಕೆಲವಾರು ಪಟ್ಟಣಗಳಿಗೆ ಪುರಾತನ ಇತಿಹಾಸದಲ್ಲಿನ ರಾಕ್ಷಸರ ಹೆಸರುಗಳನ್ನು ಇಡಲಾಗಿದೆ. ಅಂತಹ ಪಟ್ಟಣಗಳು ಯಾವುವು?

1 / 5
ಮೈಸೂರು: ಮೈಸೂರು ಕರ್ನಾಟಕದ ಐತಿಹಾಸಿಕ ಪಟ್ಟಣ. ಇದಕ್ಕೆ ಮಹಿಷಾಸುರ ಎಂಬ ಹೆಸರಿಡಲಾಗಿತ್ತು. ಮಹಿಷಾಸುರನ ಕಾಲದಲ್ಲಿ ಈ ಊರಿಗೆ ಮಹಿಷಾ-ಊರು ಎಂದು ಕರೆಯಲಾಗುತ್ತಿತ್ತು. ನಂತರದಲ್ಲಿ ಮೈಸೂರು ಎಂಬುದಾಗಿ ಕರೆಯಲಾಯಿತು.

2 / 5
ಪಂಜಾಬ್ ಜಲಂಧರ್: ಚಿತ್ರದಲ್ಲಿ ನೋಡುತ್ತಿರುವಂತೆ ಈ ಸ್ಥಳ ಪಂಜಾಬ್​ನ ಜಲಂಧರ್ ನಗರ. ಪಂಜಾಬ್​ನ ಜಲಂಧರ್ ನಗರಕ್ಕೆ ರಾಕ್ಷಸನಾದ ‘ಜಲಂಧರ್’ನ ಹೆಸರಿಡಲಾಗಿದೆ. ಪ್ರಾಚೀನ ಕಾಲದಲ್ಲಿ ಈ ನಗರವು ಜಲಂಧರ ರಾಕ್ಷಸನ ರಾಜಧಾನಿಯಾಗಿತ್ತು.

3 / 5
ಗಯಾ: ಬಿಹಾರದ ಗಯಾ ಪ್ರದೇಶಕ್ಕೆ ಗಯಾಸುರ ಎಂಬ ರಾಕ್ಷಸನ ಹೆಸರನ್ನು ಇಡಲಾಗಿತ್ತು. ಅಸುರ ಸ್ವರ್ಗವನ್ನುತಲುಪುವ ಸಂದರ್ಭದಲ್ಲಿ ನಾರಾಯಣನು ಬ್ಯಹ್ಮನ ಮೂಲಕವಾಗಿ ಯಜ್ಞಕ್ಕಾಗಿ ಗಯಾಸುರನ ಶರೀರವನ್ನು ಬೇಡಿದನು. ಗಯಾವನ್ನು ಈ ರಾಕ್ಷಸನ ಶರೀರವೆಂದು ಪರಿಗಣಿಸಲಾಗುತ್ತದೆ.

4 / 5
ಪಲವಲ: ಪಲವಲ ಹರಿಯಾಣದ ಒಂದು ಪಟ್ಟಣ. ಇದರ ಹೆಸರು ಪಲಂಬಾಸುರ ಎಂದಿತ್ತು. ಕಾಲಾ ನಂತರದಲ್ಲಿ ಪಲವಲ ಎಂದು ಬದಲಾವಣೆ ಆಗಿದೆ.

5 / 5
ತಿರುಚುನಾಪಲ್ಲಿ: ತಮಿಳುನಾಡಿನ ತಿರುಚನಾಪಲ್ಲಿಗೆ ಹೆಸರು ತಿರುಸಿರನ್ ಎಂಬ ರಾಕ್ಷಸನ ಹೆಸರಿತ್ತು. ಈತ ಶಿವನ ಕುರಿತಾಗಿ ತಪಸ್ಸನ್ನು ಮಾಡಿದ್ದ. ಆದ ಕಾರಣ ಇದಕ್ಕೆ ತಿರುಸಿರ್ಪುರಂ ಎಂದಿತ್ತು. ನಂತರ ಇದೀಗ ತಿರುಚನಾಪಲ್ಲಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

Published On - 1:00 pm, Mon, 10 May 21