ಪಕ್ಷವನ್ನ ಅಧಿಕಾರಕ್ಕೆ ತರುವ ಸಂಕಲ್ಪ! ಶೃಂಗೇರಿಯಲ್ಲಿ ಚಂಡಿಕಾಯಾಗ ಮುಗಿಸಿದ ಡಿಕೆ ಶಿವಕುಮಾರ್ ಅವರಿಂದ ಇಂದು ಉಡುಪಿಯಲ್ಲೂ ನವಚಂಡಿಕಾ ಯಾಗ!

|

Updated on: Apr 24, 2023 | 10:42 AM

ಕಾಂಗ್ರೆಸ್‌ ನಾಯಕರು ಒಂದ್ಕಡೆ ಅಬ್ಬರದ ಪ್ರಚಾರ ಮಾಡ್ತಿದ್ರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟೆಂಪಲ್‌ ರನ್‌ ಮುಂದುವರಿಸಿದ್ದಾರೆ. ಧರ್ಮಸ್ಥಳದಲ್ಲಿ ಪೂಜೆಸಿದ್ದ ಡಿಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ನಿನ್ನೆ (ಏಪ್ರಿಲ್ 23) ಶೃಂಗೇರಿಯಲ್ಲಿ ಚಂಡಿಕಾ ಯಾಗ ಮಾಡಿಸಿದ್ದರು ಇಂದು ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಚಂಡಿಕಾಯಾಗ ಮಾಡಿಸಿದ್ದಾರೆ. ಯಾಗದ ಮೂಲಕ ಹೊಸ ಸಂಕಲ್ಪ ಮಾಡಿದ್ದಾರೆ.

1 / 10
ಕುಟುಂಬ ಸಮೇತ ಧರ್ಮಸ್ಥಳಕ್ಕೆ ಹೋಗಿದ್ದ ಡಿಕೆ ಶಿವಕುಮಾರ್‌, ಮಂಜುನಾಥನ ದರ್ಶನ ಪಡೆದಿದ್ರು. ನಿನ್ನೆ ಬೆಳಗಾಗ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಆಗಮಿಸಿದ್ರು.

2 / 10
ಬಳಿಕ ಶಾರದೆಯ ದರ್ಶನ ಪಡೆದು, ಕಿರಿಯ ಜಗದ್ಗುರು ವಿಧುಶೇಖರ ಭಾರತೀ ಆಶೀರ್ವಾದ ಪಡೆದ್ರು. ಹಾಗೂ ಡಿಕೆ ಶಿವಕುಮಾರ್ ದಂಪತಿ ಚಂಡಿಕಾಯಾಗದಲ್ಲಿ ಭಾಗಿಯಾಗಿದ್ರು.

3 / 10
ಇನ್ನೂ ಶಾರದಾಂಬೆ ದೇವಸ್ಥಾನದ ಜಗದ್ಗುರು ಅಭಿನವ ವಿಧ್ಯಾತೀರ್ಥ ಅವರ ಯಾಗ ಶಾಲೆಯಲ್ಲಿ ನಡೆದ ಚಂಡಿಕಾ ಯಾಗದಲ್ಲಿ ಸತತ ಮೂರುವರೆಗಂಟೆ ಭಾಗಿಯಾಗಿದ್ರು.

4 / 10
ಈ ಯಾಗದಿಂದ ಕಾರ್ಯಕರ್ತರಿಗೆ ಸ್ಪೂರ್ತಿ, ದೇವರ ಅನುಗ್ರಹದಿಂದ ಕಾಂಗ್ರೆಸ್‌ಗೆ ಶಕ್ತಿ ಬಂದಿದೆ. ಈ ಬಾರಿ 141 ಸೀಟ್ ಗೆಲ್ತೇವೆ ಎಂದ ಡಿಕೆಶಿ ವರುಣ ಕ್ಷೇತ್ರಕ್ಕೂ ಪ್ರಚಾರಕ್ಕೆ ಹೋಗ್ತೀನಿ ಅಂದ್ರು.

5 / 10
2018 ರ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಕುಟುಂಬ ಶೃಂಗೇರಿಯಲ್ಲೇ ವಿಶೇಷ ಪೂಜೆ ಮಾಡಿತ್ತು, ಸಂಕಲ್ಪ ಮಾಡಿತ್ತು. ಅದೇ ಸ್ಥಳದಲ್ಲಿ ದೊಡ್ಡ ಯಾಗವನ್ನೇ ಮಾಡಿದ್ರು.

6 / 10
ರಿಸಲ್ಟ್‌ ಬರ್ತಿದ್ದಂತೆ ಮುಖ್ಯಮಂತ್ರಿ ಹುದ್ದೆ ಕುಮಾರಸ್ವಾಮಿಯನ್ನ ಹುಡುಕಿಕೊಂಡು ಬಂದಿತ್ತು. ಈಗ ಚುನಾವಣೆ ಹೊತ್ತಲ್ಲೇ ಡಿಕೆಶಿ ಚಂಡಿಕಾಯಾಗ ಮಾಡಿಸಿರೋದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

7 / 10
ಮತ್ತೊಂದೆಡೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಇಂದು(ಏಪ್ರಿಲ್ 24) ಚಂಡಿಕಾಯಾಗ ಮಾಡಿಸಿದ್ದಾರೆ. ನವಚಂಡಿಕಾಯಾಗ ಪೂರ್ಣಾಹುತಿಯಲ್ಲಿ ಡಿಕೆಶಿ ದಂಪತಿ ಭಾಗಿಯಾಗಿದ್ರು.

8 / 10
ಕೊಲ್ಲೂರು ಮೂಕಾಂಬಿಕಾ ದೇಗುಲದ ಪ್ರಾಂಗಣದಲ್ಲಿ ನರಸಿಂಹ ಆಡಿಗ ನೇತೃತ್ವದಲ್ಲಿ ಇಷ್ಟಾರ್ಥ ಸಿದ್ದಿಗಾಗಿ ನಡೆಯುವ ಈ ನವಚಂಡಿಕಾಯಾಗ ನೆರವೇರಿದೆ.

9 / 10
ಭಾನುವಾರ ರಾತ್ರಿ ಪಾರಾಯಣ, ದಾನ ಕಾರ್ಯದಲ್ಲಿ ಡಿಕೆಶಿ ದಂಪತಿ ಭಾಗಿಯಾಗಿದ್ದರು.

10 / 10
ಕಾಂಗ್ರೆಸ್‌ ನಾಯಕರು ಒಂದ್ಕಡೆ ಅಬ್ಬರದ ಪ್ರಚಾರ ಮಾಡ್ತಿದ್ರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟೆಂಪಲ್‌ ರನ್‌ ಮುಂದುವರಿಸಿದ್ದಾರೆ.

Published On - 10:42 am, Mon, 24 April 23