ಆದರೆ ಈಗ ಕಾಲ ಬದಲಾದಂತೆ ಡಿಜಿಟಲ್ ಯುಗ ಆರಂಭವಾಗುತ್ತಿದ್ದಂತೆ ವಿಕೆಟ್ ಎಂಬುದು ಬರೀ ವಿಕೆಟ್ ಆಗಿಲ್ಲ. ಮರದ ಮಾತೇ ಇಲ್ಲ ಅಲ್ಲಿ! ಬರೀ ಫೈಬರ್ ಮತ್ತು ದುಬಾರಿ ವಿದ್ಯುನ್ಮಾನ ಸಲಕರಣೆಗಳು ಅಲ್ಲಿ ಮನೆ ಮಾಡಿವೆ. ಕ್ರಿಕೆಟ್ ಪ್ರೇಮಿಗಳು ಕ್ರಿಕೆಟ್ ಆಟದಿಂದ ದೂರವಾಗುವ ಕಾಲ ಬಂದಿದ್ದಾಗ, ಕಾಲಕ್ಕೆ ತಕ್ಕಂತೆ ಅವರನ್ನು ಮತ್ತೆ ಕ್ರಿಕೆಟ್ ನತ್ತ ಸೆಳೆಯುವುದು ಅನಿವಾರ್ಯವಾಗಿತ್ತು. ಅದಕ್ಕೆ ಸಾಥ್ ಕೊಟ್ಟಿದ್ದು ಇಂದಿನ ಡಿಜಿಲಟ್ ತಂತ್ರಜ್ಞಾನ. ಇದರಿಂದ ಕ್ರಿಕೆಟ್ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆದಿಟ್ಟುಕೊಳ್ಳುವಲ್ಲಿ ಕ್ರಿಕೆಟ್ ಆಯೋಜಕರು ಯಶಸ್ವಿಯಾಗಿದ್ದಾರೆ.