AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕೆಟ್ ಮುರಿದ ಪ್ರಕರಣದಲ್ಲಿ ಬಿಸಿಸಿಐಗೆ ಎಷ್ಟು ಲಕ್ಷ ನಷ್ಟವಾಯ್ತು ಗೊತ್ತಾ? ಅಂಥಾದ್ದೇನಿರುತ್ತೆ ವಿಕೆಟ್​​​ನಲ್ಲಿ? ಈ ಹಿಂದೆ ಮುರಿದುಬಿದ್ದ ವಿಕೆಟ್​​​​ಗಳತ್ತ ಒಂದು ನೋಟ!

ಮೊನ್ನೆ ಐಪಿಎಲ್ ಮ್ಯಾಚ್​​ನಲ್ಲಿ ಪಂಜಾಬ್​ ತಂಡದ ವೇಗಿ ಅರ್ಷದೀಪ್ ಸಿಂಗ್​ ಕೊನೆಯ ಓವರ್​​ನಲ್ಲಿ ಅದ್ಭುತವಾದ ಕನಸಿನ ಬೌಲಿಂಗ್ ಮಾಡಿದರು. ಸತತವಾಗಿ 2 ಬಾಲ್​ಗಳಲ್ಲಿ ಎರಡು ಬಾರಿ ಮಿಡ್ಲ್​​ ವಿಕೆಟ್​ ಅನ್ನು ಮುರಿದರು. ಇಂದಿನ ಕ್ರಿಕೆಟ್​​​ನಲ್ಲಿ ಯಾವ ಪಂದ್ಯದಲ್ಲಿ ಏನು ಬೇಕಾದರೂ ಆಗಬಹುದಾದರೂ ಸದ್ಯಕ್ಕೆ ಅರ್ಷದೀಪ್ ಅವರ ಈ ಸಾಧನೆಯನ್ನು ’ಮುರಿಯುವುದು’ ಕಷ್ಟಸಾಧ್ಯವೇ ಸರಿ. ಯಾವುದೇ ಬೌಲರ್​​ಗಾಗಲಿ ವಿಕೆಟ್​ ಕೀಳುವುದೇ ಗುರಿಯಾಗಿರುತ್ತದೆ. ಆದರೂ ಹೀಗೆ ವಿಕೆಟ್​ ಮುರಿಯುವ ಸಾಹಸದ ಸಾಧನೆ ಮಹತ್ತರದ್ದಾಗಿರುತ್ತದೆ.

ಸಾಧು ಶ್ರೀನಾಥ್​
|

Updated on: Apr 24, 2023 | 11:35 AM

Share

1 / 8
ಈ ಹಿಂದೆ ಅಂದರೆ ಆಧುನಿಕ ಡಿಜಿಟಲ್​ ತಂತ್ರಜ್ಞಾನವು ಕ್ರಿಕೆಟ್​​ ಮೈದಾನದಲ್ಲಿ ಪಾದಾರ್ಪಣೆ ಮಾಡುವುದಕ್ಕೂ ಮೊದಲು ವಿಕೆಟ್​ ಮುರಿಯುವ ಪ್ರಸಂಗಗಳು ಘಟಿಸಿವೆಯಾದರೂ ಅದು ಅಷ್ಟೊಂದು ನಷ್ಟದ ಬಾಬತ್ತು ಎನಿಸುತ್ತಿರಲಿಲ್ಲ. ವಿಕೆಟ್ ಎಂಬುದು ಕೇವಲ ಮರದ ತುಂಡಾಗಿತ್ತು ಅಷ್ಟೇ. ಆದರೆ ಅದು ತುಂಬಾ ಗಟ್ಟಿಯಾಗಿರುತ್ತಿತ್ತು. ವಿಕೆಟ್​ ಮುರಿಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಕರಾರುವಕ್ಕಾಗಿ ಅತಿ ವೇಗದಿಂದ ಎಸೆದ ಬಾಲ್​ ಅಷ್ಟೇ ವಿಕೆಟ್​ ಅನ್ನುನ ಮುರಿಯುವ ಸಾಧ್ಯತೆಯಿತ್ತು. ಅದು ವೇಗದ ಬೌಲರ್​​ಗಳಿಗೆ ಮಾತ್ರವೇ ಸಾಧ್ಯವಾಗುತ್ತಿತ್ತು. ಅದರಲ್ಲೂ ಮಾಲ್ಕಂ ಮರ್ಷಲ್​​ ಅಂತಹಾ ದೈತ್ಯರಿಗೆ ಮಾತ್ರವೇ ಸಾಧ್ಯವಾಗುತ್ತಿತ್ತು. ಅದೂ ಮಾರ್ಷಲ್​​ ಎಸೆಯುತ್ತಿದ್ದ 140-150 ಕಿ ಮೀ ವೇಗದ ಬಿರುಗಾಳಿ ಬಾಲ್​​ಗಳು ಮಾತ್ರವೇ ವಿಕೆಟ್​​ ಅನ್ನು ಚಿಂದಿ ಮಾಡಲು ಸಾಧ್ಯವಾಗುತ್ತಿತ್ತು. ಕ್ರಿಕೆಟ್​ ಪ್ರೇಮಿಗಳಿಗೆ ಅದು ನಿಜಕ್ಕೂ ಹಬ್ಬದ ವಾತಾವರಣ ಸೃಷ್ಟಿಸುತ್ತಿತ್ತು.

2 / 8
ಆದರೆ ಈಗ ಕಾಲ ಬದಲಾದಂತೆ ಡಿಜಿಟಲ್​ ಯುಗ ಆರಂಭವಾಗುತ್ತಿದ್ದಂತೆ ವಿಕೆಟ್​​ ಎಂಬುದು ಬರೀ ವಿಕೆಟ್​ ಆಗಿಲ್ಲ. ಮರದ ಮಾತೇ ಇಲ್ಲ ಅಲ್ಲಿ! ಬರೀ ಫೈಬರ್​ ಮತ್ತು ದುಬಾರಿ ವಿದ್ಯುನ್ಮಾನ ಸಲಕರಣೆಗಳು ಅಲ್ಲಿ ಮನೆ ಮಾಡಿವೆ. ಕ್ರಿಕೆಟ್​ ಪ್ರೇಮಿಗಳು ಕ್ರಿಕೆಟ್ ಆಟದಿಂದ ದೂರವಾಗುವ ಕಾಲ ಬಂದಿದ್ದಾಗ, ಕಾಲಕ್ಕೆ ತಕ್ಕಂತೆ ​ಅವರನ್ನು ಮತ್ತೆ ಕ್ರಿಕೆಟ್ ನತ್ತ ಸೆಳೆಯುವುದು ಅನಿವಾರ್ಯವಾಗಿತ್ತು. ಅದಕ್ಕೆ ಸಾಥ್​​ ಕೊಟ್ಟಿದ್ದು ಇಂದಿನ ಡಿಜಿಲಟ್​ ತಂತ್ರಜ್ಞಾನ. ಇದರಿಂದ ಕ್ರಿಕೆಟ್​​​ ​ಪ್ರೇಮಿಗಳನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆದಿಟ್ಟುಕೊಳ್ಳುವಲ್ಲಿ ಕ್ರಿಕೆಟ್​ ಆಯೋಜಕರು ಯಶಸ್ವಿಯಾಗಿದ್ದಾರೆ.

3 / 8
ಇನ್ನು ಮುಂದುವರಿದು ಹೇಳುವುದಾದರೆ ಅಂದಿನ ವಿಕೆಟ್​​ಗಳು ಹೆಚ್ಚೇನೂ ದುಬಾರಿಯಾಗಿರಲಿಲ್ಲ. ಕಾಸಿಗೊಂದು ಕೊಸರಿಗೆ ನಾಲ್ಕು ಎಂಬಂತೆ ಸಿಗುತ್ತಿದ್ದವು. ಅಬ್ಬಬ್ಬಾ ಅಂದರೆ ಮರದ ತುಂಡುಗಳು ನಿಖಾಲಿಯಾಗುತ್ತಿದ್ದವು ಅಷ್ಟೆ. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಇದು ದುಬಾರಿ ದುನಿಯಾ. ಪ್ರತಿಯೊಂದಕ್ಕೂ ಹಣ ತೆರಲೇಬೇಕು. ಹಾಗಾಗಿ ಇಂದಿನ ವಿಕೆಟ್​​​ಗಳು ದುಬಾರಿಯಾಗತೊಡಗಿವೆ.

4 / 8
ಎಲ್ಇಡಿ ಮತ್ತು ಮೈಕ್ರೋಫೋನ್​​ ಗ್ಯಾಜೆಟ್​​​​ಗಳನ್ನು ಮೂರೂ ವಿಕೆಟ್​​​ನಲ್ಲಿ ಅಡಗಿಸಿಡಲಾಗುತ್ತದೆ. ಇವುಗಳ ಬೆಲೆಯೇ ಅಂದಾಜು 60 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಅದಕ್ಕೇ ಅರ್ಷದೀಪ್ ಸಿಂಗ್ ಎಸೆದ ಕೊನೆಯ ಓವರ್​​ ದುಬಾರಿಯದ್ದಾಗಿದೆ. ಇದರಲ್ಲಿ ವಿಶೇಷ ಏನೆಂದರೆ ಕೇವಲ ಒಂದು ವಿಕೆಟ್​ ಹೋಯ್ತು ಎಂದು ಅದೊಂದನ್ನು ರಿಪ್ಲೇಸ್​ ಮಾಡಿದರೆ ಆಗದು. ಇಡೀ ಮೂರು ವಿಕೆಟ್​ ಮತ್ತು ಅದರ ಜೊತೆಗೆ ಎರಡು ಬೇಲ್ಸ್​ ಅನ್ನೂ ಹೊಸದಾಗಿ ಹಾಕಬೇಕು. ಅದರಿಂದ ಇಂತಹ ವಿಕೆಟ್​ ಮುರಿಯುವ ಅನಾಹುತಗಳು ಇನ್ನೂ ಹೆಚ್ಚು ದುಬಾರಿ ಎನಿಸುತ್ತವೆ.

5 / 8
ಇನ್ನು ದಕ್ಷಿಣ ಆಫ್ರಿಕಾದ ಫೈರ್​​ ಗನ್ 35 ವರ್ಷದ ಡೇಲ್​ ವಿಲಿಯಂ ಸ್ಟೇಯ್ನ್ (Dale Steyn)​​ ​156 ಕಿ ಮೀ ವೇಗದಲ್ಲಿ ಚೆಂಡನ್ನು ಎಸೆಯುತ್ತಿದ್ದು ಏಕ ದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​​ನ ಮತ್ತೊಬ್ಬ ವೇಗದ ಬೌಲರ್ (Mitchell McClenaghan)​ ಬ್ಯಾಟಿಂಗ್​ ಮಾಡುತ್ತಿದ್ದಾಗ ಆತನ ವಿಕೆಟ್​ ಅನ್ನು ಛಿದ್ರಗೊಳಿಸಿದ್ದ. ಆ ದೃಶ್ಯ ನಿಜಕ್ಕೂ ನಯನಮನೋಹರವಾಗಿತ್ತು. ಇನ್ನು, ವಿಕೆಟ್​ ಕಳೆದುಕೊಂಡ ನ್ಯೂಜಿಲ್ಯಾಂಡ್​​ನ ಆ ವೇಗದ ಬೌಲರ್ ಗೂ ಸಹ ತಾನೂ ಇಂತಹ ಡ್ರೀಮ್​ ಬಾಲ್​ ಎಸೆಯಬೇಕು ಎಂಬ ಕನಸು ಮನೆಮಾಡಿರಲೂ ಸಾಕು.

6 / 8
ಇನ್ನು ಭಾರತದ ವೇಗಿ ಉಮೇಶ್​ ಯಾದವ್​ ದಕ್ಷಿಣ ಆಫ್ರಿಕಾದ ​ಕೇಯ್ಲ್​​ ಅಬೋಟ್​​ (Kyle Abbott) ವಿಕೆಟ್​​ ಅನ್ನು ಎರಡು ತುಂಡು ಮಾಡಿದ್ದರು. ಉಮೇಶ್​ ಯಾದವ್ ಎಸೆದ ಯಾರ್ಕರ್​​ ಬಾಲ್​​ಗೆ ಕೇಯ್ಲ್​ ಲೆಗ್​​ ಸ್ಟಿಕ್​​ ಮುರಿದಿತ್ತು.

7 / 8
ಹಾಗೆಯೇ ಶೋಯೆಬ್​ ಅಖ್ತರ್​​ ಗೊತ್ತಲ್ಲಾ. ನಮ್ಮ ದಾಯಾದಿ ದೈತ್ಯ ಬೌಲರ್​​. ಆ ರಾವಲ್ಪಿಂಡಿ ಎಕ್ಸ್​​ಪ್ರೆಸ್​​ ಎಸೆದ 162 ಕಿಮೀ ವೇಗದ ಬಾಲ್​ಗೆ ನ್ಯೂಜಿಲ್ಯಾಂಡ್​​ನ ಆಂಡ್ರೆ ಅಡಮ್ಸ್​​ ಆಫ್​ ಸ್ಟಂಪ್​​ ಚಿಂದಿಯಾಗಿತ್ತು.

8 / 8
ಮೇಘಸ್ಫೋಟ, ಪ್ರವಾಹದ ಬಳಿಕ ಹಿಮಾಚಲ ಪ್ರದೇಶದ ಸ್ಥಿತಿ ಹೇಗಿದೆ ನೋಡಿ

ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?

ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ

ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು

‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು

ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!

ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!

ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ