ಈ ಸಮಯಗಳಲ್ಲಿ ಅಪ್ಪಿ ತಪ್ಪಿಯೂ ಮೊಬೈಲ್‌‌ ಫೋನ್ ಮುಟ್ಟಬೇಡಿ

| Updated By: ಅಕ್ಷತಾ ವರ್ಕಾಡಿ

Updated on: Apr 19, 2025 | 2:39 PM

ಸ್ಮಾರ್ಟ್ ಫೋನ್‌ ಅನ್ನೋದು ಇಂದಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಹೆಚ್ಚಿನ ಜನರು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಕೆಲವರಂತೂ ದಿನದ ಹೆಚ್ಚಿನ ಸಮಯ ಮೊಬೈಲ್‌ನಲ್ಲಿಯೇ ಕಳೆಯುತ್ತಾರೆ. ಊಟ ಮಾಡುವಾಗಲೂ ಮೊಬೈಲ್‌, ಸ್ನಾನ ಮಾಡುವಾಗಲೂ ಮೊಬೈಲ್‌ ಹೀಗೆ ಎಲ್ಲಾ ಸಂದರ್ಭಗಳಲ್ಲೂ ಮೊಬೈಲ್‌ನಲ್ಲಿಯೇ ಮುಳುಗಿರುತ್ತಾರೆ. ನಿಮಗೂ ಕೂಡಾ ದಿನದ ಹೆಚ್ಚಿನ ಮೊಬೈಲ್‌ನಲ್ಲಿಯೇ ಸಮಯ ಕಳೆಯುವ ಅಭ್ಯಾಸ ಇದ್ಯಾ? ಹಾಗಿದ್ರೆ ಕೆಲವು ಸಂದರ್ಭಗಳಲ್ಲಿ ಅಪ್ಪಿ ತಪ್ಪಿಯೂ ಮೊಬೈಲ್‌ ಮುಟ್ಟಬೇಡಿ.

1 / 5
ಹೆಚ್ಚಿನವರಿಗೆ ಫೋನ್‌ ನೋಡುತ್ತಾ ಊಟ ಮಾಡುವ ಅಭ್ಯಾಸ ಇರುತ್ತದೆ. ಹೀಗೆ ಮೊಬೈಲ್‌ ನೋಡುತ್ತಾ ಊಟ ಮಾಡುವುದರಿಂದ ತಿನ್ನೋ ಆಹಾರದ ಕಡೆ ಗಮನ ಇರುವುದಿಲ್ಲ, ಆಗ ನಾವು ಎಷ್ಟು ಆಹಾರವನ್ನು ತಿಂದಿದ್ದೇ ಎಂದು ಲೆಕ್ಕ ಹಾಕಲು ಸಾಧ್ಯವಾಗುವುದಿಲ್ಲ. ಇದು ಅಧಿಕ ತೂಕದ ಸಮಸ್ಯೆಗೆ ಕಾರಣವಾಗುವುದಲ್ಲದೆ, ಹೀಗೆ ಊಟದ ಕಡೆ ಗಮನ ಕೊಡದಿದ್ದರೆ ಅನ್ನ ಗಂಟಲಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಫೋನ್‌ ನೋಡುತ್ತಾ ಊಟ ಮಾಡುವುದು ಅನ್ನಕ್ಕೆ ಅಗೌರವ ತೋರಿದಂತೆ.

2 / 5
ಹೆಚ್ಚಿನವರು  ಮಲಗುವ ಮುನ್ನ ಮೊಬೈಲ್ ಫೋನ್ ಬಳಸುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಈ ಅಭ್ಯಾಸ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಲಗುವ ಕನಿಷ್ಠ ಒಂದು ಗಂಟೆಯ ಮೊದಲು ಮೊಬೈಲ್‌ ನೋಡುವುದನ್ನು ತಪ್ಪಿಸಿ. ಮಲಗುವ ಸಮಯದಲ್ಲಿ ಮೊಬೈಲ್‌ನಿಂದ ದೂರವಿರಿ.

3 / 5
ಕೆಲವರಿಗೆ ಟಾಯ್ಲೆಟ್‌ನಲ್ಲಿ ಗಂಟೆಗಟ್ಟಲೆ ಕೂತು ಮೊಬೈಲ್‌ ನೋಡುವ ಅಭ್ಯಾಸವಿದೆ. ಹೀಗೆ ಶೌಚಾಯಲದಲ್ಲಿ ಫೋನ್‌ ನೋಡುತ್ತಾ ಕೂರುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನದಿಂದಲೂ ತಿಳಿದು ಬಂದಿದೆ. ಮಲಬದ್ಧತೆ, ಮೂಲವ್ಯಾಧಿ ಕಾಯಿಲೆ ಸೇರಿದಂತೆ ಶೌಚಾಲಯದಲ್ಲಿರುವ ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರುವ ಸಾಧ್ಯತೆ ಇರುತ್ತದೆ.

4 / 5
ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವ ಸಂದರ್ಭದಲ್ಲಿ ಮೊಬೈಲ್‌ ಫೋನ್‌ನಿಂದ ಆದಷ್ಟು ದೂರವಿರಿ. ಫ್ಯಾಮಿಲಿ ಜೊತೆ ಇರುವಾಗಲೂ ಮೊಬೈಲ್‌ ನೋಡುತ್ತಾ ಕುಳಿತು ಬಿಟ್ಟರೆ ನಿಮ್ಮ ಪ್ರೀತಿ ಪಾತ್ರರ ಜೊತೆ ಸಂಪರ್ಕ ಸಾಧಿಸಲು, ಸಂಬಂಧವನ್ನು ಬಲಪಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮೊಬೈಲ್‌ ಪಕ್ಕಕ್ಕಿಟ್ಟು ಕುಟುಂಬದೊಂದಿಗೆ ಸಮಯ ಕಳೆಯಿರಿ.

5 / 5
ದೇವಸ್ಥಾನದಲ್ಲಿ, ಭಜನೆ ಅಥವಾ ಯಾವುದೇ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಸಮಯದಲ್ಲಿ ಮೊಬೈಲ್‌ ನೋಡಬೇಡಿ. ಈ ಸಂದರ್ಭದಲ್ಲೂ ಮೊಬೈಲ್ ನೋಡುತ್ತಾ ಕುಳಿತರೆ ನಿಮ್ಮ ಮನಸ್ಸನ್ನು ದೇವರ ಮೇಲೆ, ಭಜನೆಯ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ದೇವಸ್ಥಾನಗಳಿಗೆ ಹೋದಾಗ ಮೊಬೈಲ್‌ ಬಳಸುವುದನ್ನು ತಪ್ಪಿಸಿ.

Published On - 2:33 pm, Sat, 19 April 25