
ಗಂಡ ತನ್ನ ಮುದ್ದಿನ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆಯಂತೆ. ಹೌದು ಶಾಸ್ತ್ರಗಳ ಪ್ರಕಾರ ಗಂಡ ತನ್ನ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಒಳ್ಳೆಯದು.

ಮದುವೆಯಾಗಿ ಬಂದ ಹೆಣ್ಣನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಶಾಸ್ತ್ರಗಳ ಪ್ರಕಾರ ಹೆಂಡತಿಯನ್ನು ಶುಕ್ರ ಎಂದು ಹೇಳಲಾಗುತ್ತದೆ. ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡತಿಯ ಫೋಟೋವನ್ನು ಗಂಡನಾದವನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಆತನ ಶುಕ್ರ ದೆಸೆ ಬಲಗೊಳ್ಳುತ್ತದಂತೆ.

ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡತಿ ಫೋಟೋವನ್ನು ಗಂಡ ಪರ್ಸ್‌ನಲ್ಲಿ ಇಟ್ಟುಕೊಂಡರೆ ಆತನ ಸಂಪತ್ತು ಹೆಚ್ಚಾಗುತ್ತದೆ. ಐಷಾರಾಮಿ ಜೀವನ ಆತನಿಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ಶುಕ್ರನು ಜೀವನದಲ್ಲಿ ಭವ್ಯತೆಯನ್ನು ತರುವವನು ಎಂದು ಹೇಳಲಾಗುತ್ತದೆ. ಶುಕ್ರನು ಬಲಶಾಲಿಯಾಗಿರುವುದರಿಂದ ಖರ್ಚುಗಳು ಸಹ ಹೆಚ್ಚಾಗುತ್ತವೆ, ಏಕೆಂದರೆ ಆಗ ನೀವು ನಿಮಗೆ ಕಾರು ಬೇಕು, ದೊಡ್ಡ ಮನೆಯೂ ಬೇಕು ಎಂಬುದನ್ನು ಬಯಸುತ್ತೀರಿ. ಹೀಗೆ ನೀವು ನಿಮ್ಮ ಶುಕ್ರ ಪ್ರಭಾವವನ್ನು ಉತ್ತಮಗೊಳಿಸಲು ನೀವು ಬಯಸಿದರೆ, ಬಯಸಿದ್ದನ್ನು ಪಡೆಯಬೇಕು ಎಂದ್ರೆ ನೀವು ನಿಮ್ಮ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು.

ಅಲ್ಲದೆ ನಿಮ್ಮ ಹೆಂಡತಿ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಪ್ರೀತಿಯೂ ಬಲಗೊಳ್ಳುತ್ತದೆ. ಹೌದು ನೀವು ಪ್ರತಿ ಬಾರಿ ಪರ್ಸ್ ಓಪನ್ ಮಾಡಿ ನಿಮ್ಮ ಹೆಂಡ್ತಿ ಫೋಟೋವನ್ನು ನೋಡಿದಾಗ ಆಕೆಯ ನೆನಪಾಗುತ್ತದೆ, ಜೊತೆಗೆ ಇದು ನಿಮ್ಮ ಪ್ರೀತಿಯನ್ನು ಸಹ ಬಲಗೊಳಿಸುತ್ತದೆ.

ಹೆಂಡತಿ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರ ಇನ್ನೊಂದು ಪ್ರಯೋಜನವೇನೆಂದರೆ, ಕೆಲಸದ ಕಾರಣದಿಂದಾಗಿ ತೀರಾ ಒತ್ತಡ ಉಂಟಾದಾಗ, ಅಸಮಾಧಾನ, ದುಃಖ ಉಂಟಾದಾಗ, ಪರ್ಸ್‌ನಲ್ಲಿರುವ ನಿಮ್ಮ ಹೆಂಡ್ತಿ ಫೋಟೋವನ್ನು ನೋಡುವುದರಿಂದ ಮನಸ್ಸು ಶಾಂತವಾಗುತ್ತದೆ.