
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಏ.8) ಅಸ್ಸಾಂನಲ್ಲಿ ಭಾರತೀಯ ವಾಯುಪಡೆಯ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಅವರು ತೇಜ್‌ಪುರ ಏರ್ ಫೋರ್ಸ್ ಸ್ಟೇಷನ್‌ಗೆ ಆಗಮಿಸಿದ ನಂತರ ವಾಯುಸೇನೆಯು ಗೌರವವನ್ನು ಸಲ್ಲಿಸಿತ್ತು.

ಮೂರು ದಿನಗಳ ಅಸ್ಸಾಂ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 'ಗಜ್ ಉತ್ಸವ'ವನ್ನು ಉದ್ಘಾಟಿಸಿದರು. ಗುರುವಾರ ಅಸ್ಸಾಂಗೆ ಆಗಮಿಸಿದ ಅವರನ್ನು ಗವರ್ನರ್ ಗುಲಾಬ್ ಚಂದ್ ಕಟಾರಿಯಾ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಶುಕ್ರವಾರ, ಅವರು ಪ್ರಾಜೆಕ್ಟ್ ಆನೆಗೆ 30 ವರ್ಷ ತುಂಬಿದ ಕಾರಣ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 'ಗಜ್ ಉತ್ಸವ 2023' ಅನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆನೆ-ಮನುಷ್ಯ ಸಂಘರ್ಷದ ಹೊಣೆಗಾರಿಕೆ ಮಾನವ ಸಮಾಜದ ಮೇಲಿದೆ ಎಂದು ಹೇಳಿದರು.

ಗಜ್ ಉತ್ಸವ 2023 ಅನ್ನು ಉದ್ಘಾಟಿಸಿದ ಮುರ್ಮು, ಆನೆಗಳನ್ನು ರಕ್ಷಿಸುವುದು ನಮ್ಮ ರಾಷ್ಟ್ರೀಯ ಪರಂಪರೆಯನ್ನು ಕಾಪಾಡುವ ನಮ್ಮ ರಾಷ್ಟ್ರೀಯ ಜವಾಬ್ದಾರಿಯ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.

ಉದ್ಘಾಟನೆಯ ನಂತರ ಅಧ್ಯಕ್ಷರು ಕೊಹೊರಾದಲ್ಲಿ ಅಸ್ಸಾಮಿ ಕಲಾವಿದರಿಂದ ಭೋರ್ತಾಲ್, ಜುಮುರ್ ಮತ್ತು ಬಿಹು ನೃತ್ಯ ಪ್ರಕಾರದ ಸಾಂಸ್ಕೃತಿಕ ಪ್ರದರ್ಶನಗಳನ್ನು ವೀಕ್ಷಿಸಿದರು.

ರಾಷ್ಟ್ರಪತಿ ಮುರ್ಮು ಅವರು ಕಾರ್ಯಕ್ರಮದ ಜತೆಗೆ ಅಸ್ಸಾಂನ ಜನರೊಂದಿಗೆ ಸಂವಾದ ನಡೆಸಿದರು. ಶನಿವಾರ ತೇಜ್‌ಪುರ್ ಏರ್ ಫೋರ್ಸ್ ಸ್ಟೇಷನ್‌ನಿಂದ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
Published On - 12:58 pm, Sat, 8 April 23