Fake WhatsApp: ಬಳಕೆದಾರರ ಡೇಟಾ ಕದಿಯುವ ಫೇಕ್ ವಾಟ್ಸ್​ಆ್ಯಪ್ ಪತ್ತೆ: ಎಚ್ಚರದಿಂದ ಇರಲು ಸೂಚನೆ

| Updated By: Vinay Bhat

Updated on: Oct 15, 2022 | 11:44 AM

ನಕಲಿ ವಾಟ್ಸ್​ಆ್ಯಪ್ ಒಂದು ಹುಟ್ಟುಕೊಂಡಿದ್ದು ಸೈಬರ್‌ ಸೆಕ್ಯುರಿಟಿ ಕ್ಯಾಸ್ಪರ್‌ಸ್ಕಿ ಗುರುತಿಸಿದೆ. ಇದರ ಹೆಸರು ಯೋವಾಟ್ಸ್​ಆ್ಯಪ್ (YoWhatsApp) ಎಂದಾಗಿದ್ದು 2.22.11.75 ಆವೃತ್ತಿಯಲ್ಲಿದೆ. ಇದರಲ್ಲಿ Trojan.AndroidOS.Triada.eq ಎಂದು ಹೆಸರಿಸಲಾದ ದುರುದ್ದೇಶಪೂರಿತ ಮಾಡ್ಯೂಲ್ ಇರವುದು ಕಂಡುಬಂದಿದೆ.

1 / 7
ಮೆಟಾ ಮಾಲೀಕತ್ವದ ವಿಶ್ವದ ಜನಪ್ರಿಯ ಅಪ್ಲಿಕೇಶನ್ ವಾಟ್ಸ್​ಆ್ಯಪ್​ನ​ (WhatsApp) ನಕಲಿ ಆ್ಯಪ್​ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅನೇಕ ಬಾರಿ ಎಚ್ಚರಿಕೆ ಸಂದೇಶ ಬಂದರೂ ಜನ ನಿರ್ಲಕ್ಷಿಸುತ್ತಿದ್ದಾರೆ. ಈಗಾಗಲೇ ಹಲವು ರೀತಿಯ ಫೇಕ್​ ವಾಟ್ಸ್​ಆ್ಯಪ್​ ಅಪ್ಲಿಕೇಶನ್​ ಇದ್ದು, ಇಂತಹ ಆ್ಯಪ್​ಗಳ ಬಳಕೆದಾರರನ್ನು ಹ್ಯಾಕರ್​ಗಳು ಗುರಿಯಾಗಿಸುತ್ತಿದ್ದಾರೆ.

2 / 7
ಇದೀಗ ಅಂತಹದೆ ನಕಲಿ ವಾಟ್ಸ್​ಆ್ಯಪ್ ಒಂದು ಹುಟ್ಟುಕೊಂಡಿದ್ದು ಸೈಬರ್‌ ಸೆಕ್ಯುರಿಟಿ ಕ್ಯಾಸ್ಪರ್‌ಸ್ಕಿ ಗುರುತಿಸಿದೆ. ಇದರ ಹೆಸರು ಯೋವಾಟ್ಸ್​ಆ್ಯಪ್ (YoWhatsApp) ಎಂದಾಗಿದ್ದು 2.22.11.75 ಆವೃತ್ತಿಯಲ್ಲಿದೆ. ಇದರಲ್ಲಿ Trojan.AndroidOS.Triada.eq ಎಂದು ಹೆಸರಿಸಲಾದ ದುರುದ್ದೇಶಪೂರಿತ ಮಾಡ್ಯೂಲ್ ಇರವುದು ಕಂಡುಬಂದಿದೆ.

3 / 7
ಬಳಕೆದಾರರು ನಕಲಿ ಅಥವಾ ಮೋಡಿಫೈ ವಾಟ್ಸ್​ಆ್ಯಪ್​ಗಳನ್ನು ಡೌನ್‌ಲೋಡ್ ಮಾಡುವುದು ಒಳ್ಳೆಯದಲ್ಲ. ಈ ಆ್ಯಪ್​ಗಳು ನಿಮ್ಮ ಗೌಪ್ಯತೆ ಮತ್ತು ಭದ್ರತೆಗೆ ಮಾರಕ ಎಂಬುದರ ಬಗ್ಗೆ ಎಚ್ಚರವಿರಲಿ. ವಂಚಕರು ಇಂತಹ ಆ್ಯಪ್​ಗಳ ಮೂಲಕ ನಿಮ್ಮ ಡೇಟಾ ಮೇಲೆ ಕಣ್ಣಿಟ್ಟಿರುತ್ತಾರೆ ಎಂದು ಎಚ್ಚರಿಸಿದ್ದಾರೆ.

4 / 7
ಯೋವಾಟ್ಸ್​​ಆ್ಯಪ್​ನಲ್ಲಿ ಮಾಲ್​ವೇರ್ ಕಂಡು ಬಂದಿದ್ದು, ಇದರ ಬಳಕೆದಾರರ ಡೇಟಾ ಮೇಲೆ ಹ್ಯಾಕರುಗಳು ಕಣ್ಣಿಟ್ಟಿರುವುದು ಕೂಡ ಖಚಿತವಾಗಿದೆ. ಇದರಲ್ಲಿ ವಾಟ್ಸ್​ಆ್ಯಪ್​ನಲ್ಲಿರುವ ಅನೇಕ ಕೀಗಳು ಇವೆ ಎಂದು ಹೇಳಲಾಗಿದೆ. ಇದರಿಂದ ಹ್ಯಾಕರ್ ಗಳು ಬಳಕೆದಾರರ ಖಾಸಗಿ ಚಾಟ್ ಅನ್ನು ನೋಡಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

5 / 7
ಇತ್ತೀಚೆಗಷ್ಟೆ ಜಿಬಿ ವಾಟ್ಸ್​ಆ್ಯಪ್ (GB WhatsApp) ಎಂಬ ವಾಟ್ಸ್​ಆ್ಯಪ್ ಕ್ಲೋನ್ ಆ್ಯಪ್ ಭಾರತದಲ್ಲಿನ ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಇಎಸ್​ಇಟಿ ಎಚ್ಚರಿಕೆ ನೀಡಿದೆ.

6 / 7
ಕ್ಲೋನ್ ವಾಟ್ಸ್​ಆ್ಯಪ್ ಪ್ರಕರಣಗಳು ಹೆಚ್ಚಾಗಿ ಭಾರತ, ಈಜಿಪ್ಟ್, ಬ್ರೆಜಿಲ್ ಮತ್ತು ಪೆರುಗಳಲ್ಲಿ ಕಂಡುಬರುತ್ತವೆ. ಇಂತಹ ನಕಲಿ ವಾಟ್ಸ್​ಆ್ಯಪ್ ಆ್ಯಪ್​​ಗಳಿಗೆ ಬಲಿಯಾಗದಂತೆ ಸ್ಮಾರ್ಟ್ ಫೋನ್ ಬಳಕೆದಾರರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

7 / 7
ಗೂಗಲ್ ಪ್ಲೇ ಸ್ಟೋರ್‌ನಿಂದ ವಾಟ್ಸ್​ಆ್ಯಪ್ ಅಪ್ಲಿಕೇಶನ್ ಮತ್ತು ನವೀಕರಣಗಳನ್ನು ಡೌನ್‌ಲೋಡ್ ಮಾಡಲು ಮತ್ತು ಅಪರಿಚಿತ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಿಗೆ ಹೋಗದಂತೆ ಸೂಚಿಸಲಾಗಿದೆ.

Published On - 11:44 am, Sat, 15 October 22